ಬೀದರ್: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಏರಿಕೆಯು ಮುಂದುವರೆದಿದ್ದು ಸೋಂಕಿತರ ಸಂಖ್ಯೆ 6 ಸಾವಿರ ಗಡಿ ದಾಟಿದ್ದು, ಶುಕ್ರವಾರ ಇಬ್ಬರು ಸಾವನಪ್ಪಿದ್ದಾರೆ.
ಜಿಲ್ಲೆಯಲ್ಲಿ 44 ಜನರಿಗೆ ಹೊಸದಾಗಿ ಕೊರೊನಾ ಸೋಂಕು ತಗುಲಿದ್ದು, ಇಬ್ಬರು ಸಾವನಪ್ಪಿದ್ದಾರೆ. ಅಲ್ಲದೆ 28 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
![Health bulletin](https://etvbharatimages.akamaized.net/etvbharat/prod-images/kn-bdr-05-25-coronadeath-7203280-av_25092020225532_2509f_1601054732_266.jpg)
ಹೊಸ 44 ಪ್ರಕರಣಗಳ ಮೂಲಕ ಸೋಂಕಿತರ ಸಂಖ್ಯೆ 6,068ಕ್ಕೆ ಏರಿಕೆಯಾಗಿದ್ದು, ಒಟ್ಟು 5,405 ಜನ ಸೋಂಕಿತರು ಗುಣಮುಖರಾಗಿದ್ದಾರೆ. 151 ಜನರು ಸಾವನಪ್ಪಿದ್ದು, 508 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.