ETV Bharat / state

ಬೀದರ್​​ನಲ್ಲಿ ಮತ್ತೆ 10 ಪಾಸಿಟಿವ್​​, ಒಂದು ಸಾವು: 130ಕ್ಕೇರಿದ ಸೋಂಕಿತರ ಸಂಖ್ಯೆ

author img

By

Published : May 30, 2020, 7:28 PM IST

ಬೀದರ್​ ಜಿಲ್ಲೆಯಲ್ಲಿ ಇಂದು ಕೊರೊನಾ ವೈರಸ್​ ಪ್ರಕರಣಗಳು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 130ಕ್ಕೆ ಏರಿದೆ.

corona virus cases increase in bidar
ಬೀದರ್​​​

ಬೀದರ್: ಕೊರೊನಾ ವೈರಾಣು ಅಟ್ಟಹಾಸ ಮುಂದುವರೆದಿದೆ. ಜಿಲ್ಲೆಯಲ್ಲಿ ಇಂದು ಎರಡು ದಿನದ ಹಿಂದೆ ಮೃತಪಟ್ಟ ಮಹಿಳೆಗೆ ಸೇರಿದಂತೆ ಒಟ್ಟು 10 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸಾವಿನ ಸಂಖ್ಯೆ 4ಕ್ಕೇರಿದರೆ, ಸೋಂಕಿತರ ಸಂಖ್ಯೆ 130ಕ್ಕೆ ಹೆಚ್ಚಳಗೊಂಡಿದೆ.

ಮೃತ ಮಹಿಳೆ ಸೇರಿದಂತೆ 7 ಮಹಿಳೆಯರಿಗೆ, ಮೂವರು ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ನ್ಯುಮೋನಿಯಾದಿಂದ ಬಳಲುತ್ತಿದ್ದ ಚಿಟಗುಪ್ಪ ತಾಲೂಕಿನ ಪಾತ್ಮಾಪೂರ ಗ್ರಾಮದ 47 ವರ್ಷದ ಮಹಿಳೆಯನ್ನು ಬ್ರೀಮ್ಸ್ ಆಸ್ಪತ್ರೆಯ ಕೊರೊನಾ ವಾರ್ಡ್​​ಗೆ ದಾಖಲಿಸಲಾಗಿತ್ತು. ಈಕೆ ಎರಡು ದಿನಗಳ ಹಿಂದೆ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟರು. ಆಗ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿತ್ತು. ಅದರ ವರದಿ ಇಂದು ಬಿಡುಗಡೆಯಾಗಿದ್ದು, ಸೋಂಕು ತಗುಲಿರುವುದು ದೃಢಪಟ್ಟಿದೆ.

increase corona virus in bidar
ಕೊರೊನಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಟ್ಟಿ

ಜಿಲ್ಲೆಯ ಕಮಲನಗರ ತಾಲೂಕಿನ ಮುಧೋಳ (ಕೆ) ಗ್ರಾಮದಲ್ಲಿ ಮಹಾರಾಷ್ಟ್ರದ ಮುಂಬೈ ಮಹಾನಗರದಿಂದ ವಾಪಸ್​​​ ಆಗಿ ಕ್ವಾರಂಟೈನ್​​​ನಲ್ಲಿದ್ದ 7 ವರ್ಷದ ಬಾಲಕಿ ಸೇರಿದಂತೆ ಒಟ್ಟು ನಾಲ್ವರಿಗೆ ಕೊರೊನಾ ಪತ್ತೆಯಾಗಿದೆ. ಸೋಂಕಿತರಿಗೆ ಜಿಲ್ಲಾಸ್ಪತ್ರೆಯ ಕೊರೊನಾ ವಾರ್ಡ್​​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೂ 27 ಮಂದಿ ಬಿಡುಗಡೆಯಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.