ಬೀದರ್: 'ನಿಮ್ಮಗಳ ಅಗತ್ಯವಿಲ್ಲ. ನಮ್ಮ ಕಾರ್ಯಕರ್ತರು ಎಲ್ಲಾ ನೋಡ್ಕೊಳ್ತಾರೆ. ನೀವು ಹೊರಗೆ ಹೋಗಿ' ಸಮಾವೇಶದ ವೇದಿಕೆಯಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಪೊಲೀಸರ ಮೇಲೆ ಗರಂ ಆದ ಘಟನೆ ನಗರದಲ್ಲಿ ನಡೆಯಿತು.
ಇಲ್ಲಿನ ಘಾಳೆ ಪಂಕ್ಷನ್ ಹಾಲ್ನಲ್ಲಿ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದಾಗ ಗಸ್ತಿನಲ್ಲಿದ್ದ ಪೊಲೀಸರು ಗುಸು.. ಗುಸು.. ಮಾತನಾಡುತ್ತಿದ್ದ ಶಬ್ದ ಕೇಳಿಸಿದೆ. ಇದರಿಂದ ಗರಂ ಆದ ಸಿಎಂ, ಮಹಿಳಾ ಪಿಎಸ್ಐ ಸೇರಿ ಪೊಲೀಸ್ ಸಿಬ್ಬಂದಿಯನ್ನು ಹೊರ ಹೋಗುವಂತೆ ತಿಳಿಸಿದರು.
ಸಿಎಂ ಬೊಮ್ಮಾಯಿ ಅವರನ್ನು ಪಕ್ಷದ ಕಾರ್ಯಕರ್ತರು ಸನ್ಮಾನಿಸಲು ವೇದಿಕೆಗೆ ಬರುತ್ತಿರುವುದನ್ನು ತಡೆದ ಪೊಲೀಸರ ವರ್ತನೆ ಹಾಗೂ ಭಾಷಣದ ಆರಂಭಕ್ಕೂ ಮುನ್ನ ಮಹಿಳಾ ಪಿಎಸ್ಐ ವೇದಿಕೆ ಮೇಲೆ ಅನವಶ್ಯಕವಾಗಿ ಸುತ್ತಾಡುತ್ತಿರುವುದನ್ನು ಸಿಎಂ ಸೂಕ್ಷ್ಮವಾಗಿ ಗಮನಿಸಿದ್ದರು. ಹೀಗಾಗಿ ಭಾಷಣದ ವೇಳೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.