ETV Bharat / state

'ಇಡಿ' ಮೂಲಕ ಕೇಂದ್ರ ಸರ್ಕಾರ ಡಿಕೆಶಿಗೆ ಕಿರುಕುಳ ನೀಡ್ತಿದೆ: ಖಂಡ್ರೆ ಕಿಡಿ - ED Summons to DKS

ಹಬ್ಬದ ದಿನವೂ ವಿಚಾರಣೆಗೆ ಸಮನ್ಸ್ ನೀಡುವ ಮೂಲಕ ಕೇಂದ್ರ ಸರ್ಕಾರ ಇಡಿಯನ್ನು ಬಳಸಿಕೊಂಡು ಮಾಜಿ ಸಚಿವ ಡಿ.ಕೆ. ಶಿವಕುಮಾರ್​ಗೆ ಕಿರುಕುಳ ನೀಡುತ್ತಿದೆ. ಈ ಮೂಲಕ ಧ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.

ಕೇಂದ್ರದ ವಿರುದ್ದ ಖಂಡ್ರೆ ಕಿಡಿ
author img

By

Published : Sep 2, 2019, 10:42 PM IST

ಬೀದರ್: ದೇಶದಲ್ಲಿ ಬಿಜೆಪಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದ್ದು, ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.

ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಮಾತನಾಡಿದ ಅವರು, ನಾಡಿನಾದ್ಯಂತ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಆದ್ರೆ ಬಿಜೆಪಿ ಮಾತ್ರ ಇಡಿ ಮೂಲಕ ಮಾಜಿ ಸಚಿವ ಡಿ.ಕೆ ಶಿವಕುಮಾರ್​ರನ್ನು ರಜೆ ದಿನವೂ ವಿಚಾರಣೆ ನಡೆಸುವ ನೆಪದಲ್ಲಿ ಕಿರುಕುಳ ನೀಡುತ್ತಿದೆ. ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದ್ದು, ಗುಜರಾತ್ ಶಾಸಕರನ್ನು ಕುದುರೆ ವ್ಯಾಪಾರ ಮಾಡಲು ಬಿಡದೆ ಡಿ.ಕೆ ಶಿವಕುಮಾರ್ ರಾಜ್ಯದಲ್ಲಿ ಇಟ್ಟುಕೊಂಡಿದ್ದಕ್ಕೆ ಬಿಜೆಪಿ ಈಗ ಇಂಥ ಕೀಳು ಮಟ್ಟದ ರಾಜಕಾರಣ ಮಾಡ್ತಿದೆ ಎಂದು ಆರೋಪಿಸಿದ್ರು.

ಕೇಂದ್ರದ ವಿರುದ್ದ ಖಂಡ್ರೆ ಕಿಡಿ

ಇಂದು ಹಬ್ಬದ ದಿನವಾದ್ದರಿಂದ ಡಿ.ಕೆ. ಶಿವಕುಮಾರ್ ಮನೆಯಲ್ಲಿ ಪಿತೃ ಪೂಜೆ ನಡೆಯುತ್ತದೆ. ಆದರೆ ಇಡಿ ಹಬ್ಬದ ದಿನವೂ ವಿಚಾರಣೆಗೆ ಹಾಜರಾಗಬೇಕು ಎಂದು ಸಮನ್ಸ್ ನೀಡುವ ಮೂಲಕ ಅವರನ್ನು ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ನಡೆಸುತ್ತಿದೆ ಎಂದು ಖಂಡ್ರೆ ವಾಗ್ದಾಳಿ ನಡೆಸಿದ್ರು.

ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಲಾಗಿದೆ. ಆದರೆ ಪ್ರವಾಹ ಬಂದು ಒಂದು ತಿಂಗಳಾದರೂ, ಕೇಂದ್ರದಿಂದ ಪರಿಹಾರ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಜೊತೆ ಪರಿಹಾರ ಕೇಳಲು ಸಂಸದರು, ಸಿಎಂ ಯಡಿಯೂರಪ್ಪ ಹೆದರುತ್ತಿದ್ದಾರೆ ಎಂದು ಖಂಡ್ರೆ ಟೀಕಿಸಿದರು.

Intro:ಬಿಜೆಪಿ ವಿರುದ್ಧ ಕೆಂಡಾಮಂಡಲರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ...!

ಬೀದರ್:
ದೇಶದಲ್ಲಿ ಬಿಜೆಪಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕಿಡಿ ಕಾರಿದ್ದಾರೆ.

ಜಿಲ್ಲೆಯ ಭಾಲ್ಕಿ ಪಟ್ಟಣದಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ನಾಡಿನಾದ್ಯಂತ ಗಣೇಶ ಹಬ್ಬ ಆಚರಣೆ ಮಾಡಲಾಗ್ತಿದ್ದು ಆದ್ರೆ ಬಿಜೆಪಿ ಮಾತ್ರ ಇಡಿ ಮೂಲಕ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ರಜೆ ದಿನವೂ ವಿಚಾರಣೆ ನಡೆಸುವ ನೆಪದಲ್ಲಿ ಕಿರುಕುಳ ನೀಡ್ತಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದರು.

ಬಿಜೆಪಿ ಸೇಡಿನ ರಾಜಕಾರಣ ಮಾಡ್ತಿದ್ದು ಗುಜರಾತ್ ಶಾಸಕರನ್ನು ಬಿಜೆಪಿ ಅವರಿಗೆ ಕುದರೆ ವ್ಯಾಪರ ಮಾಡಲು ಬಿಡದೆ ಡಿ.ಕೆ ಶಿವಕುಮಾರ್ ಅವರು‌ ಅಲ್ಲಿನ ಶಾಸಕರನ್ನು ಒಟ್ಟುಗೂಡಿಸಿ ರಾಜ್ಯಸಲ್ಲಿ ಇಟ್ಟುಕೊಂಡಿದ್ದಕ್ಕೆ ಬಿಜೆಪಿ ಈಗ ಇಂಥ ಕೀಳು ಮಟ್ಟದ ರಾಜಕಾರಣ ಮಾಡ್ತಿದೆ ಎಂದರು.

ಡಿ.ಕೆ ಶಿವಕುಮಾರ್ ಮನೆಯಲ್ಲಿ ಪೂರ್ವಿಕರ ಪೂಜೆ ನಡೆಯುತ್ತದೆ. ಆದರು ಇಡಿ ಹಬ್ಬದ ದಿನವೂ ವಿಚಾರಣೆಗೆ ಹಾಜರಾಗಬೇಕು ಎಂದು ಮತ್ತೊಂದು ಸಮನ್ಸ್ ನೀಡಿರುವುದು ಎಲ್ಲರಿಗೂ ಗೊತ್ತಾಗುತ್ತೆ ಇದರ ಹಿಂದಿನ ಮರ್ಮ ಎಂದರು.

ರಾಜ್ಯದಿಂದ 25 ಜನ ಸಂಸದರನ್ನು ಆಯ್ಕೆ ಮಾಡಲಾಗಿದೆ. ಆದ್ರೆ ಪ್ರವಾಹ ಬಂದು ಒಂದು ತಿಂಗಳಾದ್ರು ಕೇಂದ್ರ ಪರಿಹಾರಕ್ಕೆ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನ ಪರಿಹಾರ ಕೆಳಲು ಸಂಸದರು, ಸಿಎಂ ಯಡಿಯೂರಪ್ಪ ಹೆದರುತ್ತಿದ್ದಾರೆ ಎಂದು ಹಿಂದೇಟು ಹಾಕಿದ್ದಾರೆ ವ್ಯಂಗ್ಯವಾಡಿದ್ದಾರೆ.Body:AnilConclusion:Bidar
ETV Bharat Logo

Copyright © 2025 Ushodaya Enterprises Pvt. Ltd., All Rights Reserved.