ಬೀದರ್: ಹೋಳಿ ಹುಣ್ಣಿಮೆಯ ನಿಮಿತ್ತ ಜಿಲ್ಲೆಯಾದ್ಯಂತ ಪೌರಾಣಿಕ ಹಾಗೂ ಸಾಂಪ್ರದಾಯಿಕ ಹಬ್ಬವಾದ ಹೋಳಿಯನ್ನು ಕಾಮ ದಹನ ಮಾಡುವ ಮೂಲಕ ಆಚರಿಸಲಾಗುತ್ತಿದೆ.
ಹೋಳಿ ಹಬ್ಬದ ನಿಮಿತ್ತ ಕಟ್ಟಿಗೆ, ಉಪ್ಪು, ಹಿಟ್ಟು ಹೀಗೆ ಸೌದೆಯನ್ನು ಕೂಡಿಸಿ ನಗರ ನಿವಾಸಿಗರು ಬಡಾವಣೆಯಲ್ಲಿ ಬೆಂಕಿ ಹಚ್ಚಿ ಸಂಭ್ರಮಿಸಿದರೆ, ಗ್ರಾಮೀಣ ಭಾಗದಲ್ಲಿ ಗ್ರಾಮದ ಚಾವಡಿ ಪಕ್ಕದಲ್ಲಿ ಕಾಮ ದಹನ ಮಾಡಿ ಹೋಳಿ ಹಬ್ಬ ಆಚರಣೆ ಮಾಡಿದರು.
ಅಲ್ಲದೇ ಈ ಬೆಂಕಿಗೆ ಬೆನ್ನು ಕೊಟ್ಟು ಮೈ ಕಾವು ಮಾಡಿಕೊಂಡರೆ ಮೈಯಲ್ಲಿರುವ ರೋಗ ಮಾಯವಾಗುತ್ತೆ ಎಂಬ ನಂಬಿಕೆಯುಳ್ಳ ಅದೆಷ್ಟೋ ಜನರು ಬೀದಿಯಲ್ಲಿ ಧಗ ಧಗನೆ ಹೊತ್ತಿ ಉರಿಯುವ ಬೆಂಕಿಯಲ್ಲಿ ಮೈ ಕಾವು ಪಡೆದರು.
ಇನ್ನು ಈ ಬೆಂಕಿಯಲ್ಲೇ ಕೊಬ್ಬರಿ, ಕಡಲೆಕಾಯಿ ಸುಟ್ಟು ತಿಂದ್ರೆ ಜೀವನದಲ್ಲಿ ರೋಗ ಬರಲ್ಲ ಎಂಬ ನಂಬಿಕೆಯೂ ಇದೆ. ಉಳಿದ ಬೂದಿ ರೈತರು ತಮ್ಮ ಗದ್ದೆಯಲ್ಲಿ ಹಾಕಿದ್ರೆ ಇಳುವರಿ ಹೆಚ್ಚಾಗುತ್ತೆ ಎಂಬ ಮತ್ತೊಂದು ನಂಬಿಕೆ ಇದೆ.