ಬೀದರ್: ಜಿಲ್ಲೆಯ ಮೈಲೂರು ಕ್ರಾಸ್ ಬಳಿ ಕೌಟುಂಬಿಕ ಕಲಹದ ಕಾರಣಕ್ಕೆ ರಸ್ತೆಯಲ್ಲಿ ಹಾಕಿದ್ದ ಪತಿ (ಬಿಜೆಪಿ ಮುಖಂಡ) ಮಲ್ಲೇಶ್ ಬ್ಯಾನರ್ ಅನ್ನು ಅವರ ಪತ್ನಿ ಆಕ್ರೋಶದಿಂದ ಹರಿದು ಹಾಕಿದ್ದಾರೆ.
ಮಲ್ಲೇಶ್ ಜನ್ಮದಿನ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಿಎಂ ಸೇರಿದಂತೆ ಸಚಿವರು ಹಾಗೂ ಬಿಜೆಪಿ ಮುಖಂಡರ ಜೊತೆಗಿನ ಬ್ಯಾನರ್ ಹಾಕಲಾಗಿತ್ತು. ಪತ್ನಿ ಸಾಧನಾ ಈ ಬ್ಯಾನರ್ ಹರಿದು ಹಾಕಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಠಾಣೆಗೆ ದೂರು ನೀಡಿದ್ದರು ಎನ್ನಲಾಗ್ತಿದೆ. ಪೊಲೀಸರು ಎಫ್ಐಆರ್ ದಾಖಲಿಸದ ಕಾರಣ ಇಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ವೇಳೆ ಪತಿಯ ಬ್ಯಾನರ್ ಹರಿದು ಹಾಕಿದ್ದಾರೆ.
ಪೊಲೀಸರು ಹಾಗೂ ಮಹಿಳೆಯ ನಡುವೆ ಮಾತಿನ ಚಕಮಕಿಯಾಗಿದ್ದು, ಮಹಿಳೆಯನ್ನು ಸಮಾಧಾನಪಡಿಸಲು ಪೊಲೀಸರು ಹರಸಾಹಸಪಟ್ಟರು. ಬಿಜೆಪಿ ಮುಖಂಡ ಸೂರ್ಯಕಾಂತ್ ನಾಗಮಾರಪ್ಪಳ್ಳಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ನ್ಯಾಯಕ್ಕಾಗಿ ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು.
ಇದನ್ನೂ ಓದಿ: ಯುವತಿಯಿಂದ ಬೆತ್ತಲೆ ವೀಡಿಯೊ ಕಾಲ್: ಹನಿಟ್ರ್ಯಾಪ್ ದೂರು ನೀಡಿದ ಶಾಸಕ ತಿಪ್ಪಾರೆಡ್ಡಿ