ಬೀದರ್ : ದಿನದಿಂದ ದಿನಕ್ಕೆ ಇಂಧನ ಬೆಲೆ ಏರಿಕೆ ಕಾಣುತ್ತಿದೆ. ಮಾರುಕಟ್ಟೆಯಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ 95 ರೂ. ಇದ್ರೆ, ಜಿಲ್ಲೆಯಲ್ಲಿ 70 ರೂಪಾಯಿಗೆ ಮಾರಾಟ ಆಗ್ತಿದೆ. ಬಯೋ ಡೀಸೆಲ್ ಅನ್ನು ಹೀಗೆ ಕಡಿಮೆ ಬೆಲೆಗೆ ಮಾರಾಟ ಮಾಡ್ತಿರುವ ಜಾಲವೊಂದು ಪತ್ತೆಯಾಗಿದೆ.
ಬೀದರ್ ಹಾಗೂ ಬಸವಕಲ್ಯಾಣ ಕೈಗಾರಿಕಾ ವಲಯದಲ್ಲಿ ಬಳಸಬೇಕಾದ ಬಯೋ ಡಿಸೇಲ್ ಅನ್ನು ಹೈದ್ರಾಬಾದ್-ಮುಂಬೈ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಲೀಟರ್ಗೆ 70 ರೂಪಾಯಿನಂತೆ ಮಾರಾಟ ಮಾಡಲಾಗ್ತಿದೆ. ಲೀಟರ್ಗೆ 25 ರೂಪಾಯಿ ಕಡಿಮೆಯಿರುವ ಹಿನ್ನೆಲೆ ಡೀಸೆಲ್ ಖರೀದಿ ಮಾಡಲು ವಾಹನ ಸವಾರರು ನಾ ಮುಂದೆ ತಾ ಮುಂದೆ ಅಂತ ಧಾವಿಸ್ತಿದ್ದಾರೆ.
ಹೆದ್ದಾರಿಯಲ್ಲಿ ಲಾರಿಗಳಿಗೆ ಈ ಡೀಸೆಲ್ ಬಳಸಲಾಗ್ತಿರುವ ಕುರಿತು ಮಾಹಿತಿ ಬೆಳಕಿಗೆ ಬರ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ. ಬಸವಕಲ್ಯಾಣ ಹಾಗೂ ಬೀದರ್ ಕೈಗಾರಿಕಾ ವಲಯದ ಬಯೋ ಡೀಸೆಲ್ ಅಕ್ರಮ ಮಾರಾಟ ದಂಧೆಯಲ್ಲಿ ಪಾಲ್ಗೊಂಡವರ ಮೇಲೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಪೊಲೀಸರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.