ETV Bharat / state

ಬೀದರ್ ಉತ್ಸವ: ಸೂರ್ಯಕಾಂತ್​ ನಾಗಮಾರಪಳ್ಳಿ ಕಡೆಯಿಂದ ಹೆಲಿಕಾಪ್ಟರ್​ ಹಾರಾಟ ವ್ಯವಸ್ಥೆ - ಉದ್ಯೋಗ ನೀಡುವ ಪ್ರಮುಖ ಕಂಪನಿ

ಜನವರಿಯಲ್ಲಿ ನಡೆಯಲಿರುವ ಬೀದರ್​ ಉತ್ಸವದಲ್ಲಿ ಈ ಬಾರಿ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್​ ವತಿಯಿಂದ ಹೆಲಿಕಾಪ್ಟರ್​​ ಹಾರಾಟ ವ್ಯವಸ್ಥೆ.

bidar-utsav-helicopter-flight-arrangement-from-suryakant-nagamarapalli-side
ಬೀದರ್ ಉತ್ಸವ: ಸೂರ್ಯಕಾಂತ್​ ನಾಗಮಾರಪಳ್ಳಿ ಕಡೆಯಿಂದ ಹೆಲಿಕಾಪ್ಟರ್​ ಹಾರಾಟ ವ್ಯವಸ್ಥೆ
author img

By

Published : Dec 19, 2022, 4:02 PM IST

ಬೀದರ್: ಜನವರಿ 7 ರಿಂದ 9 ರವರೆಗೆ ಮೂರು ದಿನ ನಡೆಯಲಿರುವ ಬೀದರ್ ಉತ್ಸವದಲ್ಲಿ ಹೆಲಿಕಾಪ್ಟರ್ ಸಂಚಾರ ವ್ಯಸವಸ್ಥೆ ನಡೆಯಲಿದ್ದು, ಬಿಜೆಪಿ ಮುಖಂಡ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಶನ್ ಅಧ್ಯಕ್ಷ ಸೂರ್ಯಕಾಂತ್ ನಾಗಮಾರಪಳ್ಳಿ ಅವರು ಉತ್ಸವದಲ್ಲಿ ಹೆಲಿಕಾಪ್ಟರ್ ಹಾರಾಟದ ವ್ಯವಸ್ಥೆ ಮಾಡಲಿದ್ದಾರೆ.

ಬೀದರ್​ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಈ ಕುರಿತು ಸೂರ್ಯಕಾಂತ ನಾಗಮಾರಪಳ್ಳಿ ಅವರಿಗೆ ಪತ್ರ ಬರೆದಿದ್ದು, ನಾಗಮಾರಪಳ್ಳಿ ಫೌಂಡೇಶನ್ ವತಿಯಿಂದ ಬೀದರ್ ಕೋಟೆ ಆವರಣದಲ್ಲಿ ಹೆಲಿಕಾಪ್ಟರ್ ಸಂಚಾರ ನಡೆಸುವಂತೆ ಪತ್ರದಲ್ಲಿ ತಿಳಿಸಿದ್ದಾರೆ.

ಉದ್ಯೋಗ ಮೇಳ ಯಶಸ್ವಿಗೊಳಿಸಿ: ಬೀದರ್ ಉತ್ಸವ ಪ್ರಯುಕ್ತ ನಗರದ ಬಿ.ವಿ. ಭೂಮರೆಡ್ಡಿ ಕಾಲೇಜು ಮೈದಾನದಲ್ಲಿ ಉದ್ಯೋಗ ಮೇಳ ನಡೆಯಲಿದ್ದು, ಈ ಸಂಬಂಧ ಜಿಲ್ಲಾಧಿಕಾರಿಯವರು ಸೂರ್ಯಕಾಂತ್ ಅವರಿಗೆ ಪತ್ರ ಬರೆದು, ಉದ್ಯೋಗ ನೀಡುವ ಪ್ರಮುಖ ಕಂಪನಿಗಳನ್ನು ಹಾಗೂ ನಿರುದ್ಯೋಗಿ ಯುವಕರನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದ್ದಾರೆ.

ಇದನ್ನೂ ಓದಿ: ಬಳ್ಳಾರಿ: ಮೂವರು ವಿದ್ಯಾರ್ಥಿಗಳ ಮೇಲೆ ಹರಿದ ಕೆಎಸ್​ಆರ್​ಟಿಸಿ ಬಸ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.