ಬೀದರ್: ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡ್ತಿದ್ದ ನಗರದ ಕೊಳಗೇರಿ ಪ್ರದೇಶದಲ್ಲಿ ಡಿವೈಎಸ್ಪಿ ಬಸವೇಶ್ವರ ಹೀರಾ ಅವರ ನೇತೃತ್ವದಲ್ಲಿ ಪೊಲೀಸರ ತಂಡ ಗಸ್ತು ತಿರುಗಿ ಗುಂಪು ಕಟ್ಟಿಕೊಂಡಿದ್ದ ಜನರನ್ನು ಚದುರಿಸಿದೆ.
ನಗರದ ಕರ್ನಾಟಕ ಕಾಲೇಜು ಪಕ್ಕದಲ್ಲಿನ ಕೊಳಗೇರಿ ಪ್ರದೇಶ ಹಾಗೂ ಇರಾನಿ ಕಾಲೋನಿಯಲ್ಲಿ ಸಿಪಿಐ ಶ್ರೀಕಾಂತ ಅಲ್ಲಾಪೂರ್, ಪಿಎಸ್ಐ ಸಂಗೀತಾ ಶಿಂಧೆ ಅವರ ತಂಡ ಪೊಲೀಸ್ ರೂಟ್ ಮಾರ್ಚ್ ನಡೆಸಿ ಲಾಕ್ಡೌನ್ ಉಲ್ಲಂಘನೆ ಮಾಡ್ತಿದ್ದವರ ಮೈಚಳಿ ಬಿಡಿಸಿದೆ.
ಲಾಕ್ಡೌನ್ ಆರಂಭವಾದಾಗಿನಿಂದಲೂ ಈ ಬಡಾವಣೆಗಳ ಜನರು ಸಾಮೂಹಿಕವಾಗಿ ಸೇರುವುದು, ಗುಂಪು ಗುಂಪಾಗಿ ಸುತ್ತಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಆಗಾಗ್ಗೆ ಬಡವಾಣೆಗಳಿಗೆ ಎಂಟ್ರಿ ಕೊಟ್ಟು ಲಾಠಿ ರುಚಿ ತೋರಿಸುವ ಮೂಲಕ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.