ಬೀದರ್: ಜಿಲ್ಲೆಯಲ್ಲಿ ಇಂದು 69 ಜನರಿಗೆ ಕೊರೊನಾ ಧೃಡವಾಗಿದ್ದು, ಸೋಂಕಿತರ ಸಂಖ್ಯೆ 3646 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಔರಾದ್-05, ಬಸವಕಲ್ಯಾಣ-14, ಭಾಲ್ಕಿ-20, ಬೀದರ್-25, ಹುಮನಾಬಾದ್-04 ಹಾಗೂ ಅನ್ಯರಾಜ್ಯ-01 ಜನರಿಗೆ ಸೋಂಕು ತಗುಲಿದೆ.
ಇಂದು 12 ಜನ ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 2517 ಜನರು ಡಿಸ್ಚಾರ್ಜ್ ಆಗಿದ್ದಾರೆ. 108 ಜನರು ಬಲಿಯಾಗಿದ್ದಾರೆ. 1017 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.