ETV Bharat / state

ಬೀದರ್: 91 ಕೊರೊನಾ ಶಂಕಿತರ ಸ್ಯಾಂಪಲ್ಸ್​ ಪ್ರಯೋಗಾಲಯಕ್ಕೆ ರವಾನೆ - Infected with Bidar corona

ಬೀದರ್​ ಜಿಲ್ಲಾಡಳಿತ ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 10 ಜನರಲ್ಲಿ ಸೊಂಕು ಇದೆ. ಅದಾದ ನಂತರ ಹೊಸ ಪಾಸಿಟಿವ್​ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೂ ಕ್ವಾರಂಟೈನ್​ ಅವಧಿ ಮುಗಿದ ಮೇಲೆ ಸೊಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರ ರಕ್ತ ಹಾಗೂ ಕಫದ ಮಾದರಿಯನ್ನು ಕಲಬುರಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

Bidar: Blood sample of 91 people sent to laboratory
ಬೀದರ್: 91 ಜನರ ರಕ್ತ ಹಾಗೂ ಕಫದ ಮಾದರಿ ಪ್ರಯೋಗಾಲಯಕ್ಕೆ ರವಾನೆ...!
author img

By

Published : Apr 11, 2020, 7:59 AM IST

ಬೀದರ್: ಕೊವಿಡ್-19 ಸೋಂಕಿತರ ಪ್ರಾಥಮಿಕ ಸಂಗದಲ್ಲಿದ್ದವರು, ಬ್ರೀಮ್ಸ್ ಆಸ್ಪತ್ರೆಯ ವೈದ್ಯಕೀಯ ವಿಧ್ಯಾರ್ಥಿಗಳು ಸೇರಿದಂತೆ ಒಂದೆ ದಿನದಲ್ಲಿ 91 ಜನರ ರಕ್ತ ಹಾಗೂ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

Bidar: Blood sample of 91 people sent to laboratory
ಬೀದರ್: 91 ಜನರ ರಕ್ತ ಹಾಗೂ ಕಫದ ಮಾದರಿ ಪ್ರಯೋಗಾಲಯಕ್ಕೆ ರವಾನೆ...!

ಜಿಲ್ಲಾಡಳಿತ ನೀಡಿದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 10 ಜನರಲ್ಲಿ ಸೊಂಕು ಇದೆ. ಅದಾದ ನಂತರ ಹೊಸ ಪಾಸಿಟಿವ್​ ಪ್ರಕರಣ ಬೆಳಕಿಗೆ ಬಂದಿಲ್ಲ. ಆದರೂ ಕ್ವಾರಂಟೈನ್​ ಅವಧಿ ಮುಗಿದ ಮೇಲೆ ಸೊಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರ ರಕ್ತ ಹಾಗೂ ಕಫದ ಮಾದರಿಯನ್ನು ಕಲಬುರಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಈ ಪೈಕಿ ಬ್ರೀಮ್ಸ್ ಆಸ್ಪತ್ರೆಯ ವೈದ್ಯಕೀಯ ವಿಧ್ಯಾರ್ಥಿಗಳ ರಕ್ತ ಹಾಗೂ ಕಫದ ಮಾದರಿ ಸೇರಿದೆ ಎನ್ನಲಾಗಿದೆ.

ಶುಕ್ರವಾರ 91 ಜನರು ಸೇರಿದಂತೆ ಗುರುವಾರ ಕಳುಹಿಸಿದ 10 ಜನರ ಸ್ಯಾಂಪಲ್ ಸೇರಿ ಒಟ್ಟು ಜಿಲ್ಲೆಯ ಶಂಕಿತ, ಸೊಂಕಿತರ ಸಂಖ್ಯೆ 101 ಆಗಿದೆ. ಈ ಎಲ್ಲರ ವರದಿ ಬಂದ ಮೇಲೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೊಂಕಿನ ಬಗ್ಗೆ ಜನರಲ್ಲಿದ್ದ ಭೀತಿ ಸ್ವಲ್ಪ ಮಟ್ಟಿಗೆ ದೂರವಾಗಲಿದೆ ಎನ್ನಲಾಗಿದೆ.

ಬೀದರ್ ಜಿಲ್ಲಾಡಳಿತ ಯಾವುದೇ ಕಾರಣಕ್ಕೂ ರಿಸ್ಕ್ ತೆಗೆದುಕೊಳ್ಳಲು ಸಿದ್ಧವಾಗಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕೊರೊನಾ ಸೋಂಕಿತರ ಪ್ರಾಥಮಿಕ ಹಾಗೂ ಎರಡನೆ ಹಂತದ ನಿಕಟ ಸಂಪರ್ಕ ಹೊಂದಿದವರ ಮಾದರಿ ಕೂಡ ಪರಿಕ್ಷೆಗೆ ಒಳಪಡಿಸಿ ಸ್ಪಷ್ಟನೆ ಪಡೆಯಲು ತಯಾರಿ ಮಾಡಿಕೊಂಡಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.