ETV Bharat / state

ಕಲ್ಯಾಣ ಕರ್ನಾಟಕದಲ್ಲಿಂದು ಸಿಎಂ ಪ್ರವಾಸ... ಅನುಭವ ಮಂಟಪದ ಶಂಕುಸ್ಥಾಪನೆ! - ಸಿಎಂ ಬಿ.ಎಸ್. ಯಡಿಯೂರಪ್ಪ ಕಲ್ಯಾಣ ಕರ್ನಾಟಕ ಪ್ರವಾಸ

ಅಂದಾಜು 72 ಎಕರೆ ಪ್ರದೇಶದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದ್ದು, 182 ಅಡಿ ಎತ್ತರ ಇರಲಿದೆ. ಅಂದುಕೊಂಡಂತೆ ಆದರೆ ಎರಡು ವರ್ಷದ ಅವಧಿಯಲ್ಲಿ ನೂತನ ಅನುಭವ ಮಂಟಪ ಬಸವಕಲ್ಯಾಣದಲ್ಲಿ ನಿರ್ಮಾಣವಾಗಲಿದೆ. ಮಧ್ಯಾಹ್ನ 12 ಗಂಟೆಗೆ 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ಭೂಮಿಪೂಜೆಯನ್ನು ಸಿಎಂ ಬಿ.ಎಸ್. ಯಡಿಯೂರಪ್ಪ ನೆರವೇರಿಸಲಿದ್ದಾರೆ.

samsatthu
samsatthu
author img

By

Published : Jan 6, 2021, 6:52 AM IST

ಬೀದರ್: ದಶಕಗಳಿಂದ ಗೋ.ರು ಚನ್ನಬಸವ ವರದಿ ಆಧರಿಸಿ ಸ್ಥಾಪನೆಯಾಗಬೇಕಾಗಿದ್ದ ವಿಶ್ವದ ಮೊದಲ ಸಂಸತ್ತು ಅನುಭವ ಮಂಟಪದ ಕನಸು ನನಸಾಗಲಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಅನುಭವ ಮಂಟಪದ ಶಿಲಾನ್ಯಾಸ ಕಾರ್ಯಕ್ರಮ ನೆರವರಿಸಲಿದ್ದಾರೆ.

600 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪ ನಿರ್ಮಾಣವಾಗಲಿದ್ದು, ಪ್ರವಾಸಿಗರನ್ನು ಕಲ್ಯಾಣ ನಾಡಿನತ್ತ ಸೆಳೆಯುವ ಮತ್ತು 12ನೇ ಶತಮಾನದ ವಚನ ಸಾಹಿತ್ಯದ ಮೂಲಕ ಶರಣರು ಲೋಕಕ್ಕೆ ನೀಡಿರುವ ಸಾಮಾಜಿಕ ನ್ಯಾಯ ಬಿಂಬಿಸುವ ಮಾದರಿ ಸಂಸತ್ತು ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯ ಸರ್ಕಾರ 100 ಕೋಟಿ ಬಿಡುಗಡೆ ಮಾಡಿದೆ. ಅಂದಾಜು 72 ಎಕರೆ ಪ್ರದೇಶದಲ್ಲಿ ಅನುಭವ ಮಂಟಪ ನಿರ್ಮಾಣವಾಗಲಿದ್ದು, 182 ಅಡಿ ಎತ್ತರ ಇರಲಿದೆ. ಅಂದುಕೊಂಡಂತೆ ಆದರೆ, ಎರಡು ವರ್ಷದ ಅವಧಿಯಲ್ಲಿ ನೂತನ ಅನುಭವ ಮಂಟಪ ಬಸವಕಲ್ಯಾಣದಲ್ಲಿ ನಿರ್ಮಾಣವಾಗಲಿದೆ.

ಅನುಭವ ಮಂಟಪದ ಶಂಕುಸ್ಥಾಪನೆ

ಬೆಳಗ್ಗೆ 9 ಗಂಟೆಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಬೆಂಗಳೂರಿನಿಂದ ವಿಶೇಷ ವಿಮಾನದ ಮೂಲಕ ಬೀದರ್ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡಿ 10:15ಕ್ಕೆ ಆಗಮಿಸಲಿದ್ದಾರೆ. ನಂತರ ಏರ್ ಬೇಸ್​​ನಿಂದ 10:30ಕ್ಕೆ ಬೀದರ್ ಓಲ್ಡ್ ಸಿಟಿಯಲ್ಲಿ ನಿರ್ಮಾಣಗೊಂಡಿರುವ 100 ಹಾಸಿಗೆಯ ತಾಯಿ ಹಾಗೂ ಮಕ್ಕಳ ಹೆರಿಗೆ ಆಸ್ಪತ್ರೆಯ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಬೀದರ್ ಏರ್ ಬೇಸ್​ನಿಂದ 11:50ಕ್ಕೆ ಹೆಲಿಕಾಪ್ಟರ್ ಮೂಲಕ ಬಸವಕಲ್ಯಾಣಕ್ಕೆ ಪ್ರಯಾಣ ಮಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದ ಭೂಮಿಪೂಜೆ ನೆರವೇರಿಸಲಿದ್ದಾರೆ.

ಜೊತೆಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಸಾರ್ವಜನಿಕ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಇದಾದ ಬಳಿಕ ಮಧ್ಯಾಹ್ನ 2 ಗಂಟೆಗೆ ಬಸವಕಲ್ಯಾಣದಿಂದ ಹೆಲಿಕಾಪ್ಟರ್ ಮೂಲಕ ಯಾದಗಿರಿಗೆ ಪ್ರಯಾಣ ಮಾಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

108 ಅಡಿ ಎತ್ತರದ ಬಸವಣ್ಣ ಮೂರ್ತಿ:

ಬಸವಕಲ್ಯಾಣದಲ್ಲಿ ಲಿಂ. ಮಾತೆ ಮಹಾದೇವಿ ಅವರ ನೇತೃತ್ವದಲ್ಲಿ 108 ಅಡಿ ಎತ್ತರದ ಬಸವೇಶ್ವರ ಮೂರ್ತಿ ಅನಾವರಣಗೊಂಡಿದ್ದು ದೇಶ ವಿದೇಶದಿಂದ ದಿನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆಯುವ ಮೂಲಕ ರಾಜ್ಯದ ಮುಕುಟ ಬೀದರ್ ಜಿಲ್ಲೆ ಪ್ರವಾಸಿ ಕೇಂದ್ರ ಸ್ಥಾನ ಪಡೆದಿದೆ. ಈ ನಡುವೆ ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಮೂಲಕ ಅನುಭವ ಮಂಟಪ ಮಾದರಿ ಸಂಸತ್ತು ಭವನ ನಿರ್ಮಾಣ ಮಾಡುವ ಮೂಲಕ ಬೀದರ್ ಜಿಲ್ಲೆಯನ್ನು ಪ್ರವಾಸಿ ತಾಣ ಅಷ್ಟೇ ಅಲ್ಲದೇ ವಚನ ಸಾಹಿತ್ಯದ ತವರೂರು ಮಾಡುವತ್ತ ಸರ್ಕಾರ ದಿಟ್ಟ ಹೆಜ್ಜೆ ಹಾಕಿದೆ ಎಂಬ ಚರ್ಚೆ ವ್ಯಾಪಕವಾಗಿ ನಡೆಯುತ್ತಿವೆ.

ಸಿಎಂ ಕಾರ್ಯಕ್ರಮದ ಸಕಲ ಸಿದ್ದತೆ:

ಸಿಎಂ ಬಿಎಸ್ ವೈ ಕಾರ್ಯಕ್ರಮದ ಸಕಲ ಸಿದ್ದತೆ ಪೂರ್ಣಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬಸವಕಲ್ಯಾಣ ಹಾಗೂ ಬೀದರ್ ನಗರದ ಒಲ್ಡ್ ಸಿಟಿ ಆಸ್ಪತ್ರೆಯಲ್ಲಿ ಕೊನೆ ಹಂತದ ಸಿದ್ದತೆ ಪರಿಶೀಲನೆ ಮಾಡಿದ್ದಾರೆ.

bhoomi-pooja-of-anubhava-mantapa-to-be-held-today
ಸಚಿವ ಪ್ರಭು ಚವ್ಹಾಣ್ ಅವರ ನೇತೃತ್ವದ ಅಧಿಕಾರಿಗಳ ತಂಡ

ಜಿಲ್ಲೆಯ ಬಸವಕಲ್ಯಾಣದಲ್ಲಿ ಸಿದ್ದತೆ ಪರಿಶೀಲನೆ ಮಾಡಿದ ಸಚಿವ ಪ್ರಭು ಚವ್ಹಾಣ್, ಕೊರೊನಾ ಸಾಂಕ್ರಾಮಿಕ ರೋಗ ಹರಡುವ ಭೀತಿ ನಡುವೆ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ಈ ನಡುವೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರು ಮಾಸ್ಕ್ ಧರಿಸಲೇಬೇಕು, ಕಡ್ಡಾಯ ಸ್ಯಾನಿಟೈಸರ್ ಬಳಸಬೇಕು ಅದಕ್ಕಾಗಿ ಪೆಮಡಾಲ್ ವಿಸ್ತಿರಣೆ ಕೂಡ ಹೆಚ್ಚಿಸುವಂತೆ ಸೂಚನೆ ನೀಡಿದರು.

ಈ ವೇಳೆ, ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದೇವರು, ವಚನ ಸಾಹಿತ್ಯ ಪರಿಷತ್​ನ ಗೋ.ರು ಚನ್ನಬಸವ, ಗುರುಬಸವ ಪಟ್ಟದೇವರು, ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.