ಬೀದರ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಎರಡನೇ ಬಾರಿಗೆ ಆಯ್ಕೆಯಾದ ಸಂಸದ ಭಗವಂತ ಖೂಬಾ ಅವರಿಗೆ ಹುಟ್ಟೂರಿನ ಜನರಿಂದ ಭರ್ಜರಿ ಸ್ವಾಗತ ಮಾಡಲಾಯಿತು.
ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ಹಲವು ನಾಯಕರು ಕನ್ನಡಾಂಬೆ ವೃತ್ತದಿಂದ ಅಮರೇಶ್ವರ ದೇವಸ್ಥಾನ ಮೂಲಕ ಪಟ್ಟಣದ ಬಡಾವಣೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಅದ್ಧೂರಿ ಸ್ವಾಗತ ಕೋರಿದರು.
ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಸಂಸದ ಭಗವಂತ ಖೂಬಾ ಹುಟ್ಟೂರಿನ ಜನರ ಆಶೀರ್ವಾದ ಸದಾ ಕಾಲ ಹೀಗೆಯೇ ಇರಲಿ ಜನರ ಸೇವೆ ಮಾಡಲು ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿರುವ ಮತದಾರರ ಋಣ ತೀರಿಸಲಾಗದು ಎಂದರು.