ETV Bharat / state

ಬಸವಕಲ್ಯಾಣ ಬೈ ಎಲೆಕ್ಷನ್.. ಟಿಕೆಟ್ ನೀಡಿದ್ರೆ ಸ್ಪರ್ಧಿಸುತ್ತೇನೆಂದ ಗುಂಡುರೆಡ್ಡಿ..! - ಬೀದರ್​ನ ಬಸವಕಲ್ಯಾಣ

ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಕೆಲವೇ ತಿಂಗಳಲ್ಲಿ ಬೈ ಎಲೆಕ್ಷನ್ ನಡೆಯಲಿದ್ದು, ಆಕಾಂಕ್ಷಿತರ ಸಂಖ್ಯೆಯೂ ಹೆಚ್ಚಿದೆ. ಉಪಸಮರದ ಅಖಾಡಕ್ಕೆ ಧುಮುಕಲು ಗುಂಡುರೆಡ್ಡಿ ತಯಾರಿ ನಡೆಸುತ್ತಿದ್ದಾರೆ.

gundureddy pressmeet
ಬಸವಕಲ್ಯಾಣ ಬೈ ಎಲೆಕ್ಷನ್​ನಲ್ಲಿ ಟಿಕೆಟ್ ನೀಡಿದ್ರೆ ಸ್ಪರ್ಧಿಸುತ್ತೇನೆ ಎಂದ ಗುಂಡುರೆಡ್ಡಿ
author img

By

Published : Oct 13, 2020, 8:22 PM IST

ಬಸವಕಲ್ಯಾಣ (ಬೀದರ್) : ಶಾಸಕ ಬಿ.ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಕೆಲವೇ ತಿಂಗಳಲ್ಲಿ ಬೈ ಎಲೆಕ್ಷನ್ ನಡೆಯಲಿದೆ. ಹಾಗಾಗಿ ಆಕಾಂಕ್ಷಿತರ ಸಂಖ್ಯೆಯೂ ಹೆಚ್ಚಿದ್ದು, ಉಪಕದನದ ಅಖಾಡಕ್ಕೆ ಧುಮುಕಲು ಜಿಲ್ಲಾ ಪಂಚಾಯ್ತಿ ಸದಸ್ಯ ಗುಂಡುರೆಡ್ಡಿ ತಯಾರಿ ನಡೆಸಿದ್ದಾರೆ.

ಇಂದು ಬೆಂಬಲಿಗರು, ಅಭಿಮಾನಿಗಳೊಂದಿಗೆ ತಾಲೂಕಿನ ಸುಕ್ಷೇತ್ರ ಹಾರಕೂಡದ ಸಂಸ್ಥಾನ ಹಿರೇಮಠಕ್ಕೆ ಭೇಟಿ ಕೊಟ್ಟ ಗುಂಡುರೆಡ್ಡಿ ಚನ್ನವೀರ ಶಿವಾಚಾರ್ಯ ಆಶೀರ್ವಾದ ಪಡೆದರು. ರಾಜೇಶ್ವರ ಕ್ಷೇತ್ರದಿಂದ ಕಳೆದ ಜಿ.ಪಂ. ಚುನಾವಣೆಯಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ ಗುಂಡುರೆಡ್ಡಿ, ಪಕ್ಷದ ಓಬಿಸಿ ಘಟಕದ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷದ ರಾಜ್ಯಮಟ್ಟದ ನಾಯಕರೊಂದಿಗೆ ಉತ್ತಮ ಸಂಪರ್ಕಹೊಂದಿರುವ ಇವರು, ಜಿಲ್ಲೆ ಹಾಗೂ ತಾಲೂಕಿನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಪ್ರಮುಖರೊಂದಿಗೆ ಬೆರೆತು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಸದಾ ಸಕ್ರಿಯವಾಗಿದ್ದಾರೆ.

ಕೆಲವೇ ತಿಂಗಳಲ್ಲಿ ನಡೆಯಲಿರುವ ಕ್ಷೇತ್ರದ ಬೈ ಎಲೆಕ್ಷನ್​​ನಲ್ಲಿ ಟಿಕೆಟ್ ನೀಡಿದರೆ ಸ್ಪರ್ಧಿಸುತ್ತೇನೆ ಅಂತಾ ಗುಂಡುರೆಡ್ಡಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಕ್ಷೇತ್ರದ ಜನರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಜನರ ಕಷ್ಟ, ಸುಖದಲ್ಲಿ ಭಾಗಿಯಾಗಲು ಪ್ರಯತ್ನಿಸಿದ್ದೇನೆ. ಸದ್ಯ ಜಿ.ಪಂ. ಸದಸ್ಯನಾಗಿ ಸೇವೆ ಸಲ್ಲಿಸುತ್ತಿದ್ದು, ಹಿಂದೆ ಎರಡು ಬಾರಿ ತಾಲೂಕು ಪಂಚಾಯತ್ ಅಧ್ಯಕ್ಷನಾಗಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕಾರ್ಯ ನೋಡಿ ಕ್ಷೇತ್ರದ ಮತದಾರರು ಅಭ್ಯರ್ಥಿಗೆ ಗೆಲುವು ತಂದು ಕೊಡಲಿದ್ದಾರೆ. ಸ್ಥಳೀಯ ಅಭ್ಯರ್ಥಿಗಳಿಗೆ ಪಕ್ಷ ಮಣೆ ಹಾಕಿದಲ್ಲಿ ಗೆಲುವು ಸುಲಭವಾಗಲಿದೆ. ಹೊರಗಿನವರಿಗೆ ಮಣೆ ಹಾಕಬಾರದು ಈ ಕುರಿತು ಸ್ಥಳೀಯ ಆಕಾಂಕ್ಷಿಗಳು ಸೇರಿ ನಿಯೋಗದೊಂದಿಗೆ ತೆರಳಿ ಪಕ್ಷದ ವರಿಷ್ಠರದಲ್ಲಿ ಮನವಿ ಮಾಡಲಾಗುವುದು ಎಂದರು.

ಬಸವಕಲ್ಯಾಣ ಬೈ ಎಲೆಕ್ಷನ್​ನಲ್ಲಿ ಟಿಕೆಟ್ ನೀಡಿದ್ರೆ ಸ್ಪರ್ಧಿಸುತ್ತೇನೆ ಎಂದ ಗುಂಡುರೆಡ್ಡಿ

ಶಾಸಕ ಬಿ.ನಾರಾಯಣರಾವ್ ಅವರು ಕ್ಷೇತ್ರದ ಅಭಿವೃದ್ದಿಗಾಗಿ ಹಗಲಿರುಳು ಶ್ರಮಿಸಿದ್ದರು. ಕೊರೊನಾ ಸಂಕಷ್ಟದ ವೇಳೆಯಲ್ಲಿಯೂ ಬಡವರಿಗೆ ದವಸದ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ ಕೊರೊನಾ ಅವರ ಜೀವ ತೆಗೆದಿದ್ದು ನೋವಿನ ಸಂಗತಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದರು. ನಗರದಲ್ಲಿ ಸುಸಜ್ಜಿತ ಆಸ್ಪತ್ರೆಗಳಿಲ್ಲ. ಸಿರಿವಂತರು ಬೇರೆ ಕಡೆ ಹೋಗಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಬಡವರ ಪಾಡೇನು ಹೀಗಾಗಿ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ರೀತಿಯ ಚಿಕಿತ್ಸೆ ಸಿಗುವಂತೆ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದರು.

ಬಿಜೆಪಿ ಮುಖಂಡರಾದ ರಾಜರೆಡ್ಡಿ ಮಂಠಾಳ, ವಿಕಾಸರಾವ್ ಪಾಟೀಲ್ ಸೇರಿ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.