ETV Bharat / state

ಬಸವಕಲ್ಯಾಣ ಉಪ ಚುನಾವಣೆ: ಬೃಹತ್ ರೋಡ್ ಶೋ ನಡೆಸಿದ ಕೇಸರಿ ಪಡೆ

ನಗರ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರೂ ಸಂಖ್ಯೆಯ ಬಿಜೆಪಿ ಕಾರ್ಯರ್ಕರು, ಶರಣು ಸಲಗರ್ ಅವರ ಅಭಿಮಾನಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡು ಬಿಜೆಪಿಯ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.

ಕೇಸರಿ ಪಡೆ
ಕೇಸರಿ ಪಡೆ
author img

By

Published : Apr 15, 2021, 10:51 PM IST

ಬಸವಕಲ್ಯಾಣ: ಕ್ಷೇತ್ರದ ವಿಧಾನಸಭಾ ಉಪ ಚುನಾವಣೆಯ ಬಹಿರಂಗ ಪ್ರಚಾರದ ಕೊನೆ ದಿನವಾಗಿರುವ ಗುರುವಾರ ಬಿಜೆಪಿ ಪಕ್ಷದಿಂದ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿ, ಮತಯಾಚಿಸಲಾಯಿತು.

ನಗರ ಸೇರಿದಂತೆ ಕ್ಷೇತ್ರದ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಸಂಖ್ಯೆಯ ಬಿಜೆಪಿ ಕಾರ್ಯಕರ್ತರು, ಶರಣು ಸಲಗರ್ ಅವರ ಅಭಿಮಾನಿಗಳು ರ‍್ಯಾಲಿಯಲ್ಲಿ ಪಾಲ್ಗೊಂಡು ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾದರು.

ಬೃಹತ್ ರೋಡ್ ಶೋ ನಡೆಸಿದ ಕೇಸರಿ ಪಡೆ

ನಗರದ ಥೇರ್ ಮೈದಾನದಿಂದ ಆರಂಭವಾದ ರೋಡ್ ಶೋ ಮಹಾತ್ಮ ಗಾಂಧಿ, ಅಂಬೇಡ್ಕರ್, ಹರಳಯ್ಯ ಹಾಗೂ ಮಡಿವಾಳ ಮಾಚಿದೇವ ಈ ವೃತ್ತಗಳ ಮೂಲಕ ಹಾದು ತ್ರಿಪುರಾಂತ ಹನುಮಾನ ದೇವಸ್ಥಾನ ಬಳಿ ಮುಕ್ತಾಯಗೊಂಡಿತು. ತೆರೆದ ವಾಹನದಲ್ಲಿ ನಿಂತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್​​ ಕಟೀಲ್, ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಸತಿ ಸಚಿವ ವಿ. ಸೋಮಣ್ಣ, ಸಂಸದರಾದ ಭಗವಂತ್ ಖೂಬಾ ಸೇರಿದಂತೆ ಮುಂತಾದವರು ಜನರತ್ತ ಕೈಬೀಸಿ ಬಿಜೆಪಿ ಪಕ್ಷದ ಶಕ್ತಿ ಪ್ರದರ್ಶಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.