ಬೀದರ್: ಲಾಕ್ಡೌನ್ನಿಂದ ಮದ್ಯ ಮಾರಾಟ ನಿಷೇಧವಾದ ಬೆನ್ನಲ್ಲೇ, ಅಕ್ರಮ ಕಳ್ಳಭಟ್ಟಿ ದಂಧೆ ಜೋರಾಗಿ ನಡೆಯುತ್ತಿದೆ. ಕಳ್ಳಭಟ್ಟಿ ಅಡ್ಡೆಗಳ ಮೇಲೆ ದಾಳಿಗೆ ಹೋದ, ಅಬಕಾರಿ ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ಔರಾದ್ ತಾಲೂಕಿನ ಫುಲಸಿಂಗ್ ತಾಂಡದಲ್ಲಿ ನಡೆದಿದೆ.
ಅಬಕಾರಿ ಪಿಎಸ್ಐ ಸಿದ್ರಾಮಪ್ಪ ತಾಳಿಕೊಟೆ, ಸಿಬ್ಬಂದಿ ಜೈ ಭೀಮ, ಮಹೇಶ್, ಜಾವೇದ್ ಹಾಗೂ ಧನಾಜಿ ಎಂಬುವವರ ಮೇಲೆ, ಕಳ್ಳಭಟ್ಟಿ ದಂಧೆಕೋರರು ಕಲ್ಲು ಹಾಗೂ ಕೋಲಿನಿಂದ ಸಾಮೂಹಿಕವಾಗಿ ಹಲ್ಲೆ ಮಾಡಿದ್ದಾರೆ. ಗಾಯಗೊಂಡವರಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಲ್ಲೆ ನಡೆಸಿದ 17 ಜನರ ವಿರುದ್ಧ ಠಾಣಾ ಕುಶನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.