ETV Bharat / state

15 ವರ್ಷಗಳಿಂದ ಅಕ್ರಮ ಸಂಬಂಧ.. ಪದೇ ಪದೆ ಹಣ ಕೇಳಿದ್ದಕ್ಕೆ ಹೆಣ ಉರುಳಿಸಿದ.. ಇಬ್ಬರು ಆರೋಪಿಗಳ ಬಂಧನ

ಅಪರಿಚಿತ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬೀದರ್​ ಪೊಲೀಸರು ಬಂಧಿಸಿದ್ದಾರೆ.

arrest-of-two-accused-for-woman-murder-case
ಅಪರಿಚಿತ ಮಹಿಳೆಯ ಕೊಲೆ ಪ್ರಕರಣ ಭೇದಿಸಿದ ಬೀದರ್​ ಪೊಲೀಸರು: ಇಬ್ಬರು ಆರೋಪಿಗಳ ಬಂಧನ
author img

By

Published : Apr 25, 2023, 9:38 PM IST

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ

ಬೀದರ್​: ತಾಲೂಕಿನ ಮಂದಕನಳ್ಳಿ ಗ್ರಾಮದಲ್ಲಿ ಏಪ್ರಿಲ್ 19 ರಂದು ಪತ್ತೆಯಾದ ಅಪರಿಚಿತ ಮಹಿಳೆಯ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಕುರಿತು ಬೀದರ್​ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಮಾತನಾಡಿ, ಏ.19 ರಂದು ಬೆಳಗಿನ ಜಾವ ಹೊಲಕ್ಕೆ ನೀರು ಬಿಡಲು ಹೋಗಿದ್ದಾಗ ಅಪರಿಚಿತ ಮಹಿಳೆಯ ಶವ ಕಾಣಿಸಿದೆ ಎಂದು ಮಂದಕನಳ್ಳಿ ಗ್ರಾಮದ ರೈತ ನೀಡಿದ್ದರು. ಈ ಮಾಹಿತಿ ಮೇರೆಗೆ ಬಗದಲ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆಗೆ ನಡೆಸಿದ ಬೀದರ್​ ಗ್ರಾಮೀಣ ವೃತ್ತ ಸಿಪಿಐ ಶ್ರೀನಿವಾಸ್​ ವಿ.ಅಲ್ಲಾಪೂರ ಹಾಗೂ ಬಗದಲ್ ಪಿಎಸ್​ಐ ಸುವರ್ಣ ನೇತೃತ್ವದ ಪೊಲೀಸರ ತಂಡ, ಮೃತ ಮಹಿಳೆಯು ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯ ಮೂಲದವರು ಹಾಗೂ ಮಹಿಳೆಯ ಅಂದಾಜು ವಯಸ್ಸು 35 ರಿಂದ 37ರ ಆಸುಪಾಸು ಇದೆ ಎಂದು ಪತ್ತೆ ಹಚ್ಚಿದ್ದರು ಎಂದರು.

ಮಹಿಳೆ ಹಾಗೂ ಆರೋಪಿ ಇಬ್ಬರ ನಡುವೆ 15 ವರ್ಷಗಳಿಂದ ಅಕ್ರಮ ಸಂಬಂಧ ಇತ್ತು. ಮಹಿಳೆಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರು. ಅವಳ ಪತಿ ಮೃತನಾಗಿದ್ದ ಮತ್ತು ಮಹಿಳೆಯು ಆರೋಪಿಗೆ ಪದೇ- ಪದೇ ಹಣ ನೀಡುವಂತೆ ಪೀಡಿಸುತ್ತಿದರು. ಆದರಿಂದ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯು ಕಬ್ಬು ಕಟಾವು ಮಾಡುವ ವೃತ್ತಿಯಲ್ಲಿ ತೊಡಗಿದ್ದ. ಕೃತ್ಯದ ದಿನ ಮಹಿಳೆಯನ್ನು ಭಾಲ್ಕಿ ತಾಲೂಕಿನ ಮರೂರ ದರ್ಗಾಕ್ಕೆ ಹೋಗೋಣ ಎಂದು ಕರೆತಂದಿದ್ದ. ಮತ್ತೆ ಅಲ್ಲಿಗೆ ಬೇಡ ಮಂದಕನಳ್ಳಿ ದರ್ಗಾಕ್ಕೆ ಹೋಗೋಣ ಎಂದು ಇಲ್ಲಿಗೆ ಕರೆದುಕೊಂಡು ಬಂದಿದ್ದ ಎಂದು ಹೇಳಿದ್ರು.

ಮಂದಕನಳ್ಳಿಯಲ್ಲಿ ಸಂಜೆ ಹೊತ್ತು ನಾನು ಇಲ್ಲಿ ಕಬ್ಬು ಕಟಾವು ಮಾಡಿದ ಹೊಲದಲ್ಲಿ ನೀರಿನ ವ್ಯವಸ್ಥೆ ಇದೆ. ಇಲ್ಲೇ ಮಲಗಿ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರ ದರ್ಶನ ಪಡೆಯೋಣ ಎಂದು ಮಹಿಳೆಯನ್ನು ಅಲ್ಲೇ ಉಳಿಸಿಕೊಂಡು ರಾತ್ರಿ 1 ಗಂಟೆ ಸುಮಾರಿಗೆ ಇನ್ನಿಬ್ಬರು ಆರೋಪಿಗಳಾದ ತನ್ನ ಸಂಬಂಧಿಕರನ್ನು ಜೊತೆ ಸೇರಿಕೊಂಡು ಮಹಿಳೆಯನ್ನು ಕೊಲೆ ಮಾಡಿದ್ದಾರೆ. ಮತ್ತು ಯಾರಿಗೂ ತಿಳಿಯಬಾರದು ಎಂದು ಶವಕ್ಕೆ ಬೆಂಕಿ ಹಂಚಿ ಪರಾರಿಯಾಗಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಮಾಹಿತಿ ನೀಡಿದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆಯ ಸಿಬ್ಬಂದಿ ವಿವಿಧ ಆಯಾಮಗಳಿಂದ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪರಾರಿಯಾಗಿರುವ ಇನ್ನೊಬ್ಬ ಆರೋಪಿಯ ಪತ್ತೆಗೆ ಈಗಾಗಲೇ ವಿಶೇಷ ತಂಡ ರಚಿಸಲಾಗಿದೆ. ಈ ತನಿಖೆ ಕಾರ್ಯದಲ್ಲಿ ಭಾಗವಹಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಎಸ್​ಪಿ ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿದರು.

ಇದನ್ನೂ ಓದಿ: ಬೇಸಿಗೆ ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಐವರು ನೀರು ಪಾಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.