ಬೀದರ್: ಕಳೆದ ವಾರ ದೆಹಲಿಯ ಜಮಾತ್ಗೆ ಹೋಗಿ ಬಂದ 10 ಜನರಲ್ಲಿ ಕೋವಿಡ್ -19 ಸೋಂಕು ಪತ್ತೆಯಾದ ಬೆನ್ನಲ್ಲೆ ಕೇಸ್ ನಂಬರ್ 122 ರ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಮಹಿಳೆಯ ವರದಿಯಲ್ಲಿ ಖಾಯಿಲೆ ಲಕ್ಷಣಗಳು ಗೋಚರಿಸಿವೆ.
ಹಳೆಯ ಸಿಟಿಯ ಕೊರೊನಾ ಸೋಂಕು ಪೀಡಿತ ಕೇಸ್ ನಂಬರ್ 122 ರ ಅಣ್ಣನ ಹೆಂಡತಿ, ಸುಮಾರು 50 ವಯಸ್ಸಿನ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಈ ಹಿನ್ನಲೆಯಲ್ಲಿ ಈಗ ಗಡಿ ಜಿಲ್ಲೆ ಬೀದರ್‌ನಲ್ಲಿ ಸೋಂಕಿತರ ಸಂಖ್ಯೆ 11 ಕ್ಕೇರಿದೆ. ಒಂದೇ ದಿನದಲ್ಲಿ 91 ಜನರ ರಕ್ತ ಹಾಗೂ ಗಂಟಲಿನ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ಅದಕ್ಕೂ ಮೊದಲೇ ಮಹಿಳೆಯಲ್ಲಿ ಪಾಸಿಟಿವ್ ಪತ್ತೆಯಾಗಿರುವುದು ಕೊರೊನಾ ವೈರಸ್ ಭೀತಿ ಹೆಚ್ಚಿಸುವಂತೆ ಮಾಡಿದೆ.