ETV Bharat / state

ಆಶ್ರಯ ಮನೆ ಅನುದಾನ ಲೂಟಿ: ಕ್ರಮಕ್ಕೆ ಅಹಿಂದ್ ಚಿಂತಕರ ವೇದಿಕೆ ಒತ್ತಾಯ

ವಿವಿಧ ಆಶ್ರಯ ಯೋಜನೆಯಡಿ ಸರ್ಕಾರದಿಂದ ಬಡವರಿಗೆ ಮಂಜೂರಿಯಾಗಿದ್ದ, ಆಶ್ರಯ ಮನೆಗಳನ್ನು ಗ್ರಾ.ಪಂ ಅಧ್ಯಕ್ಷ ಮತ್ತು ಪಿಡಿಓ ಕೂಡಿ ಮನೆ ಅನುದಾನ ಲೂಟಿ ಮಾಡಿದ್ದಾರೆ ಎಂದು ಅಹಿಂದ್ ಚಿಂತಕರ ವೇದಿಕೆ ಆರೋಪಿಸಿದೆ.

ಕ್ರಮಕ್ಕೆ ಅಹಿಂದ್ ಚಿಂತಕರ ವೇದಿಕೆ ಒತ್ತಾಯ
ಕ್ರಮಕ್ಕೆ ಅಹಿಂದ್ ಚಿಂತಕರ ವೇದಿಕೆ ಒತ್ತಾಯ
author img

By

Published : Sep 2, 2020, 10:51 PM IST

Updated : Sep 2, 2020, 11:00 PM IST

ಬಸವಕಲ್ಯಾಣ (ಬೀದರ್​): ತಾಲೂಕಿನ ಜನವಾಡ ಗ್ರಾಮದಲ್ಲಿನ ಬಡವರಿಗಾಗಿ ವಿವಿಧ ಆಶ್ರಯ ಯೋಜನೆಯಡಿ ಸರ್ಕಾರದಿಂದ ಮಂಜೂರಿಯಾಗಿದ್ದ, ಆಶ್ರಯ ಮನೆಗಳನ್ನು ಗ್ರಾ.ಪಂ ಅಧ್ಯಕ್ಷ ಮತ್ತು ಪಿಡಿಓ ಕೂಡಿ ಮನೆ ಅನುದಾನ ಲೂಟಿ ಮಾಡಿದ್ದಾರೆ ಎಂದು ಅಹಿಂದ್ ಚಿಂತಕರ ವೇದಿಕೆ ಆರೋಪಿಸಿದೆ.

ಈ ಸಂಬಂಧ ವೇದಿಕೆ ಪದಾಧಿಕಾರಿಗಳು ಹಾಗೂ ಗ್ರಾಮದ ಪ್ರಮುಖರ ನಿಯೋಗ ಇಲ್ಲಿಯ ತಾ.ಪಂ ಕಚೇರಿಗೆ ಆಗಮಿಸಿ, ಅವ್ಯವಹಾರ ತನಿಖೆಗೆ ಒತ್ತಾಯಿಸಿ ಜಿಲ್ಲಾಪಂಚಾಯತ್ ಸಿಇಓ ಅವರಿಗೆ ಬರೆದ ಪತ್ರವನ್ನು ಇಲ್ಲಿಯ ತಾಪಂ ಇಓ ಬಿರೇಂದ್ರಸಿಂಗ್ ಠಾಕೂರ ಅವರಿಗೆ ಸಲ್ಲಿಸಿದ್ರು.

ಕ್ರಮಕ್ಕೆ ಅಹಿಂದ್ ಚಿಂತಕರ ವೇದಿಕೆ ಒತ್ತಾಯ

ಅಂಬೇಡ್ಕರ್ ವಸತಿ ಯೋಜನೆ ಹಾಗೂ ಬಸವ ವಸತಿ ಯೊಜನೆಯಡಿ ಚಿಕನಾಗಾಂವ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಜನವಾಡ ಗ್ರಾಮದಲ್ಲಿನ ಬಡ ಫಲಾನುವಿಗಳಿಗೆ ವಿತರಣೆಗಾಗಿ ಬಂದ ಸುಮಾರು 10 ರಿಂದ 15 ಮನೆಗಳನ್ನು ಫಲಾನುಭವಿಗಳಿಗೆ ವಿತರಿಸದೆ, ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಓ ಸೇರಿ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಅನುದಾನ ಲೂಟಿಮಾಡಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸುವ ಮೂಲಕ ಬಡವರಿಗೆ, ಸರ್ಕಾರಕ್ಕೆ ವಂಚನೆ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು. ಹಗರಣದಲ್ಲಿ ಭಾಗಿಯಾದ ಪಿಡಿಓ ಅವರನ್ನು ಕೆಲಸದಿಂದ ವಜಾ ಮಾಡಬೇಕು ಎಂದು ಅಹಿಂದ್ ಚಿಂತಕರ ವೇದಿಕೆ ರಾಜ್ಯಾಧ್ಯಕ್ಷ ಸಾಯಿಬಣ್ಣ ಜಮಾದಾರ ಒತ್ತಾಯಿಸಿದರು.

Last Updated : Sep 2, 2020, 11:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.