ETV Bharat / state

ಸಂಕಷ್ಟದಲ್ಲಿದ್ದ ಕಲ್ಲಂಗಡಿ ಬೆಳೆಗಾರನಿಗೆ ಸಹಾಯ ಹಸ್ತ ಚೆಲ್ಲಿದ ನಟ ಉಪೇಂದ್ರ - ರೈತನಿಗೆ ಉಪೇಂದ್ರ ಸಹಾಯ

ಲಾಕ್​ಡೌನ್​​ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ರೈತನೋರ್ವನಿಗೆ ನಟ ಉಪೇಂದ್ರ ಸಹಾಯ ಮಾಡಿದ್ದು, ಅವರ ಬೆಳೆದಿದ್ದ 2 ಎಕರೆ ಕಲ್ಲಂಗಡಿ ಖರೀದಿ ಮಾಡಿದ್ದಾರೆ.

Actor upendra help for watermelon farmer

author img

By

Published : May 27, 2021, 11:23 PM IST

Updated : May 27, 2021, 11:34 PM IST

ಬೀದರ್: ಲಾಕ್​​ಡೌನ್​ನಿಂದಾಗಿ ಮಾರುಕಟ್ಟೆ ಇಲ್ಲದೆ ಅನೇಕ ಬೆಳಗಾರರು ಸಂಕಷ್ಟಕ್ಕೊಳಗಾಗಿದ್ದಾರೆ. ಇದರ ಮಧ್ಯೆ ಕಟಾವಿಗೆ ಬಂದ ಕಲ್ಲಂಗಡಿ ಮಾರಾಟ ಮಾಡಲು ಸಾಧ್ಯವಾಗದೇ ತೊಂದರೆಗೊಳಗಾಗಿದ್ದ ರೈತನೋರ್ವನಿಗೆ ನಟ ಉಪೇಂದ್ರ ಸಹಾಯ ಮಾಡಿದ್ದಾರೆ.

ಕಲ್ಲಂಗಡಿ ಬೆಳೆಗಾರನಿಗೆ ಸಹಾಯ ಮಾಡಿದ ನಟ ಉಪೇಂದ್ರ

ಬೀದರ್​ ಜಿಲ್ಲೆಯ ಔರಾದ್​​ನ ತೆಗಂಪೂರ್​ ಗ್ರಾಮದ ರೈತ ಶಿವಕುಮಾರ್​​ ಎರಡು ಎಕರೆ ಜಮೀನಿನಲ್ಲಿ ಕಲ್ಲಂಗಡಿ ಬೆಳೆದಿದ್ದರು. ಆದರೆ ಲಾಕ್​ಡೌನ್ ಕಾರಣ ಮಾರಾಟ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅವರು ಬೆಳೆದ ಕಲ್ಲಂಗಡಿ ಖರೀದಿ ಮಾಡಿ ಬಡವರು, ನಿರ್ಗತಿಕರಿಗೆ ವಿತರಣೆ ಮಾಡುವ ಮೂಲಕ ನಟ ಉಪೇಂದ್ರ ಸಹಾಯ ಮಾಡಿದ್ದಾರೆ.

ಫಲವತ್ತಾಗಿ ಬೆಳೆದ ಕಲ್ಲಂಗಡಿ ಕಟಾವಿಗೆ ಬಂದು ಮಾರುಕಟ್ಟೆಗೆ ಸಾಗಿಸುವ ಸಂದರ್ಭದಲ್ಲೇ ಲಾಕ್​ಡೌನ್​ ಜಾರಿಗೊಂಡಿರುವ ಕಾರಣ ಸಂಕಷ್ಟಕ್ಕೊಳಗಾಗಿದ್ದರು. ಈ ವಿಷಯ ಸಾಮಾಜಿಕ ಜಾಲತಾಣದ ಮೂಲಕ ಉಪೇಂದ್ರ ಫೌಂಡೇಶನ್​ ಗಮನಕ್ಕೆ ಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟ ಉಪೇಂದ್ರ, ಸಂಕಷ್ಟದಲ್ಲಿದ್ದ ರೈತನ ಅಂದಾಜು 7 ಟನ್ ಕಲ್ಲಂಗಡಿ ಹಣ್ಣು ಖರೀದಿ ಮಾಡಿ ಬೀದರ್​ ನಗರದ ಅಲೆಮಾರಿ, ಬಡವರು, ನಿರ್ಗತಿಕರ ಪ್ರದೇಶಗಳಲ್ಲಿ ಉಚಿತವಾಗಿ ಸರಬರಾಜು ಮಾಡಿದ್ದಾರೆ. ಈ ಮೂಲಕ ರೈತ ಬೆಳೆದ ಬೆಳೆ ಖರೀದಿ ಮಾಡುವ ಮೂಲಕ ಹಸಿವಿನಿಂದ ಬಳಲಿರುವ ಅನೇಕರಿಗೆ ಸಹಾಯ ಮಾಡಿದ್ದಾರೆ.

ಈ ವಿಚಾರವಾಗಿ 'ಈಟಿವಿ ಭಾರತ' ಜತೆಯಲ್ಲಿ ರೈತ ಶಿವಾನಂದ ಮುಕ್ತೇದಾರ ಮಾತನಾಡಿ, ಹಾಫ್​ ಕಾಮ್ಸ್​ನವರು ನಮ್ಮ ಸಹಾಯಕ್ಕೆ ಬರಲಿಲ್ಲ. ಆದರೆ ನಟ ಉಪೇಂದ್ರ ಬೆಂಗಳೂರಲ್ಲಿ ಕೂತು ನಮ್ಮ ಸಹಾಯಕ್ಕೆ ಬಂದಿದ್ದಾರೆ. ಈಗಾಗಲೇ ಕಲ್ಲಂಗಡಿ ಖರೀದಿ ಮಾಡಿಕೊಂಡು ಹೊಗಿದ್ದಾರೆ. ನನ್ನ ಬೆಳೆಗೆ ಸಿಗಬೇಕಾದ ಹಣ ನೇರವಾಗಿ ಅಕೌಂಟ್​ಗೆ ಟ್ರಾನ್ಸ್​​​ಫರ್​ ಮಾಡಲಿದ್ದಾರೆ ಎಂದಿದ್ದಾರೆ.

ಹೈದರಾಬಾದ್​ ಮಾರುಕಟ್ಟೆ ಬಂದ್​ ಆಗಿದ್ದರಿಂದ ನಮ್ಮ ಭಾಗರ ರೈತರಿಗೆ ಸಮಸ್ಯೆ ಆಗಿದೆ. ವರ್ಷಕ್ಕೆ 3-4 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಕೊರೊನಾ ಹೊಡೆತಕ್ಕೆ ಎಲ್ಲವೂ ಬುಡಮೇಲಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬಂದ ಉಪೇಂದ್ರ ಅವರಿಗೆ ಕೃತಜ್ಞತೆಗಳು ಎಂದು ಹೇಳಿಕೊಂಡಿದ್ದಾರೆ.

Last Updated : May 27, 2021, 11:34 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.