ETV Bharat / state

ಬೀದರ್‌ ರಸ್ತೆ ಅಪಘಾತದಲ್ಲಿ ಇಡೀ ಪೊಲೀಸ್‌ ಕಾನ್ಸ್‌ಟೇಬಲ್‌ ಕುಟುಂಬ ಬಲಿ, ಐವರು ಸಾವು - ಕಂಟೇನರ್ ಎರ್ಟಿಗಾ ಕಾರು ಡಿಕ್ಕಿ

ಅಪಘಾತಕ್ಕೀಡಾದ ಕಾರು ಹೈದರಾಬಾದ್​ನಿಂದ ಕಲಬುರಗಿಯ ಗಾಣಗಾಪುರ ದೇವಸ್ಥಾನಕ್ಕೆ ಹೋಗುತ್ತಿತ್ತು ಎಂದು ತಿಳಿದುಬಂದಿದೆ.

accident-happened-in-bidar-five-people-death
ಕಂಟೇನರ್ ಎರ್ಟಿಗಾ ಕಾರು ಡಿಕ್ಕಿ
author img

By

Published : Aug 15, 2022, 8:22 PM IST

Updated : Aug 15, 2022, 9:41 PM IST

ಬೀದರ್: ಕಂಟೇನರ್‌ ಲಾರಿಗೆ ಎರ್ಟಿಗಾ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಭಂಗೂರ ಬಳಿ‌ ನಡೆದಿದೆ. ಘಟನೆಯಲ್ಲಿ ಹೈದರಾಬಾದ್​ನ ಬೇಗಂಪೇಟ್ ಮೂಲದ ಪೊಲೀಸ್​ ಕಾನ್ಸ್​ಟೇಬಲ್​ ಗಿರಿಧರ್ ಕುಟುಂಬದ ನಾಲ್ವರು ಮತ್ತು ಕಾರು ಚಾಲಕ ಸೇರಿ ಐವರು ಅಸುನೀಗಿದ್ದಾರೆ.

ಘಟನಾ ಸ್ಥಳದ ದೃಶ್ಯ

ಪೊಲೀಸ್​ ಕಾನ್ಸ್​ಟೇಬಲ್​ ಗಿರಿಧರ್ (45), ಪತ್ನಿ ಅನಿತಾ (36), ಮಗಳು ಪ್ರೀತಿ (14), ಮಗ ಮಯಂಕ್ (02) ಹಾಗೂ ಕಾರು ಚಾಲಕ ದಿನೇಶ್ (35) ಮೃತಪಟ್ಟವರೆಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದವರು ಹೈದರಾಬಾದ್​ನಿಂದ ಕಲಬುರಗಿಯ ಗಾಣಗಾಪುರದ ದೇವಸ್ಥಾನಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸಾವರ್ಕರ್​ ಫ್ಲೆಕ್ಸ್​​ ತೆರವಿನ ಬಳಿಕ ಶಿವಮೊಗ್ಗ ಉದ್ವಿಗ್ನ: ಯುವಕನಿಗೆ ಚಾಕು ಇರಿತ

Last Updated : Aug 15, 2022, 9:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.