ETV Bharat / state

ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಆಟೋ: ಬೀದರ್‌ನಲ್ಲಿ ಓರ್ವ ಸಾವು - ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ

ಎಮ್ಮೆ ಅಡ್ಡಬಂದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಆಟೋ ಪಲ್ಟಿ. ಓರ್ವ ಸಾವು, ಐದು ಮಂದಿ ಆಸ್ಪತ್ರೆಗೆ ದಾಖಲು.

accident due to drivers loss of control
ಚಾಲಕನ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಆಟೋ
author img

By

Published : Nov 11, 2022, 9:59 AM IST

ಬೀದರ್​: ಆಟೋ ಚಾಲಕನ ನಿಯಂತ್ರಣ ತಪ್ಪಿ ಸಂಭವಿಸಿದ ಅಪಘಾತದಲ್ಲಿ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಬೀದರ್ ಜಿಲ್ಲೆಯ ಔರಾದ ತಾಲೂಕಿನ ವಡಗಾಂವ (ದೇ) ಗ್ರಾಮದ ಸಮೀಪ ಗುರುವಾರ ರಾತ್ರಿ ನಡೆಯಿತು.

ಚಲಿಸುತ್ತಿದ್ದ ಆಟೋ ಎದುರಿಗೆ ಎಮ್ಮೆ ಅಡ್ಡ ಬಂದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಆಟೋ ಪಲ್ಟಿಯಾಗಿದೆ. ಪ್ರಯಾಣಿಕರನ್ನು ತುಂಬಿಕೊಂಡು ಕಂದಗುಳ ಕಡೆಯಿಂದ ವಡಗಾಂವ(ದೇ) ಗ್ರಾಮಕ್ಕೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಆಟೋದಲ್ಲಿ ಒಟ್ಟು 8 ಮಂದಿ ಪ್ರಯಾಣಿಸುತ್ತಿದ್ದರು. ಗಾಯಾಳುಗಳನ್ನು ಬೀದ‌ರ್ ಬ್ರಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಅಜಾಗರೂಕ ಚಾಲನೆ: ನಟಿ ತಾರಾ ಅನುರಾಧ ಕಾರು ಚಾಲಕನ ವಿರುದ್ಧ ಎಫ್ಐಆರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.