ETV Bharat / state

ಬಡತನದಲ್ಲಿ ಅರಳಿದ ಪ್ರತಿಭೆ.. ನೀಟ್​ ಪರೀಕ್ಷೆ ಬರೆದು ಸರ್ಕಾರಿ ಸೀಟು ಪಡೆದಿರುವ ಈ ವಿದ್ಯಾರ್ಥಿಗೆ ಬೇಕಿದೆ ನೆರವು - ಈಟಿವಿ ಭಾರತ ಕನ್ನಡ

ಬಡ ಪ್ರತಿಭಾವಂತ ವಿದ್ಯಾರ್ಥಿ ವೈದ್ಯನಾಗುವ ಕನಸು ಕಂಡು ನೀಟ್​ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆಯುವ ಮೂಲಕ ಸರ್ಕಾರಿ ಮೆಡಿಕಲ್​ ಸೀಟ್​ ಗಿಟ್ಟಿಸಿಕೊಂಡಿದ್ದಾರೆ.​ ಆದರೆ ವಿದ್ಯಾರ್ಥಿಯ ವ್ಯಾಸಂಗಕ್ಕೆ ಬಡತನ ಅಡ್ಡಿಯಾಗಿದ್ದು, ದಾನಿಗಳ ನೆರವನ್ನು ಎದುರು ನೋಡುತ್ತಿದ್ದಾರೆ.

a-youth-need-financial-help-for-mbbs-education
ಬಡತನದ ಮಧ್ಯೆ ಅರಳಿದ ಪ್ರತಿಭೆ : ನೀಟ್​ನಲ್ಲಿ ರ್‍ಯಾಂಕ್.. ವೈದ್ಯಕೀಯ ವಿದ್ಯಾರ್ಥಿಗೆ ಬೇಕಿದೆ ನೆರವು
author img

By

Published : Nov 17, 2022, 6:01 PM IST

ಬೀದರ್​​ : ಬಡ ಪ್ರತಿಭಾವಂತ ವಿದ್ಯಾರ್ಥಿಯೊಬ್ಬ ವೈದ್ಯನಾಗುವ ಕನಸು ಕಂಡು ನೀಟ್​ ಪರೀಕ್ಷೆಯಲ್ಲಿ ರ್‍ಯಾಂಕ್ ಪಡೆಯುವ ಮೂಲಕ ಸರ್ಕಾರಿ ಮೆಡಿಕಲ್​ ಸೀಟ್​ ಗಿಟ್ಟಿಸಿಕೊಂಡಿದ್ದಾರೆ.​ ಆದರೆ ಕಡುಬಡತನ ವಿದ್ಯಾರ್ಥಿಯ ವ್ಯಾಸಂಗಕ್ಕೆ ಅಡ್ಡಿಯಾಗಿದೆ. ತಮ್ಮ ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ಉತ್ಸುಕನಾಗಿರುವ ಈ ವಿದ್ಯಾರ್ಥಿ ಸಹೃದಯಿಗಳಿಂದ ನೆರವು ಕೋರಿದ್ದಾರೆ.

ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ್​ ಗ್ರಾಮದ ನಿವಾಸಿ ಮೊಹಮ್ಮದ್ ಖದೀರ್ ಈ ಸಾಧನೆಗೈದಿರುವ ಪ್ರತಿಭಾವಂತ ವಿದ್ಯಾರ್ಥಿ. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಪಡೆದ ಖದೀರ್, ನಂತರ ಬೀದರ್ ನ ಶಾಹಿನ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಪಡೆದರು. ಪಿಯುಸಿಯಲ್ಲಿ ಶೇ. 82.96 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. ಸದ್ಯ ನೀಟ್ ಪರೀಕ್ಷೆಯಲ್ಲಿ 85158 ರ್‍ಯಾಂಕ್ ಪಡೆಯುವ ಮೂಲಕ ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಸರ್ಕಾರಿ ಕೋಟಾದಡಿ ಮೆಡಿಕಲ್​ ಸೀಟ್ ಪಡೆದಿದ್ದಾರೆ.

ಬಡತನದ ಮಧ್ಯೆ ಅರಳಿದ ಪ್ರತಿಭೆ : ನೀಟ್​ನಲ್ಲಿ ರ್‍ಯಾಂಕ್.. ವೈದ್ಯಕೀಯ ವಿದ್ಯಾರ್ಥಿಗೆ ಬೇಕಿದೆ ನೆರವು

ವಿದ್ಯಾರ್ಥಿಯ ವ್ಯಾಸಂಗಕ್ಕೆ ಬಡತನ ಅಡ್ಡಿ : ಆದರೆ, ಮನೆಯಲ್ಲಿನ ಕಡು ಬಡತನ ಈ ವಿದ್ಯಾರ್ಥಿಯ ಓದಿಗೆ ಅಡ್ಡಿಯಾಗಿದೆ. ಇಲ್ಲಿನ ಸರ್ಕಾರಿ ಶುಲ್ಕ ಪಾವತಿಸಲು ಆಗದೆ ಕುಟುಂಬ ಪರದಾಡುವಂತಾಗಿದೆ. ಇನ್ನು, ವಿದ್ಯಾರ್ಥಿಯ ತಂದೆ ಮಹಮ್ಮದ್ ಗುಡುಮಿಯಾ ರೈತರಾಗಿದ್ದು, ಇಷ್ಟು ಹಣ ಹೊಂದಿಸಲು ನನ್ನಿಂದ ಕಷ್ಟ ಸಾಧ್ಯ. ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳಿದ್ದಾರೆ. ಈ ಪೈಕಿ ಮೂವರು ಶಿಕ್ಷಣ ಪಡೆಯುತ್ತಿದ್ದಾರೆ.

ನನ್ನ ಮಗನಿಗೆ ವೈದ್ಯಕೀಯ ಸೀಟು ಲಭಿಸಿದ್ದು ತುಂಬಾನೇ ಸಂತೋಷ ವಾಗುತ್ತಿದೆ. ಆದರೆ ವೈದ್ಯಕೀಯ ಶಿಕ್ಷಣಕ್ಕೆ ಸುಮಾರು 6 ರಿಂದ 8 ಲಕ್ಷ ರೂಪಾಯಿ ಪಾವತಿಸಬೇಕಿದ್ದು, ಅಷ್ಟೊಂದು ಹಣ ಹೊಂದಿಸಲು ನನ್ನಿಂದ ಆಗುತ್ತಿಲ್ಲ ಎಂದು ಖದೀರ್​​ ತಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ದಾನಿಗಳು ತಮ್ಮ ಮಗನ ವಿದ್ಯಾಭ್ಯಾಸಕ್ಕೆ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

'ಈಟಿವಿ ಭಾರತ'ದೊಂದಿಗೆ ವಿದ್ಯಾರ್ಥಿ ಖದೀರ್​ ಮಾತನಾಡಿ, ಸಣ್ಣ ವಯಸ್ಸಿನಲ್ಲಿಯೇ ವೈದ್ಯನಾಗುವ ಕನಸು ಕಂಡಿದ್ದೆ. ನನ್ನ ಸತತ ಪ್ರಯತ್ನದಿಂದ ಇಂದು ನಾನು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವೈದ್ಯಕೀಯ ಸೀಟ್ ಪಡೆದಿದ್ದೇನೆ. ವೈದ್ಯಕೀಯ ಶಿಕ್ಷಣಕ್ಕೆ ಹಣದ ಕೊರತೆ ಎದುರಾಗಿದ್ದು, ಯಾರಾದರೂ ದಾನಿಗಳು ಸಹಾಯ ಮಾಡಿದರೆ ಕಠಿಣ ಪರಿಶ್ರಮದಿಂದ ಓದಿ, ವೈದ್ಯನಾಗಿ ಬಡ ಜನರ ಸೇವೆ ಮಾಡುವುದಾಗಿ ಹೇಳುತ್ತಾರೆ.

ಇದನ್ನೂ ಓದಿ : ಗುಡಿಸಲಿನಲ್ಲಿ ಅರಳಿದ ಪ್ರತಿಭೆ: ನೀಟ್​ ಬರೆದು ಸರ್ಕಾರಿ ಸೀಟು ಪಡೆದ ಸಾಧಕ​, ಮೆಡಿಕಲ್​ ಓದಲು ಬೇಕಿದೆ ನೆರವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.