ETV Bharat / state

ಲಿಂಗಾಯತ ಪ್ರತ್ಯೇಕ ಧರ್ಮ.. ಹೋರಾಟ ಬೆಂಬಲಿಸುವಂತೆ ಮುಸ್ಲಿಮರಿಗೆ ಮುಖಂಡರ ಮನವಿ!

ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ಇಂದು ಕಲ್ಯಾಣ ಪರ್ವದ ಸಮಾರೋಪ ಸಮಾರಂಭ ನಡೆಯಿತು.

a-separate-lingayat-religion-struggle
author img

By

Published : Oct 13, 2019, 8:01 PM IST

ಬಸವಕಲ್ಯಾಣ: ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ನಮ್ಮೊಂದಿಗೆ ಕೈ ಜೋಡಿಸಿ ಎಂದು ಲಿಂಗಾಯತ ಧರ್ಮ ಹೋರಾಟಗಾರರು ಮುಸ್ಲಿಂ ಧರ್ಮದ ಮುಖಂಡರಲ್ಲಿ ಮನವಿ ಮಾಡಿದರು.

ಬಸವಕಲ್ಯಾಣದ ಬಸವ ಮಹಾಮನೆ ಪರಿಸರದಲ್ಲಿ ನಡೆದ ಕಲ್ಯಾಣ ಪರ್ವದ ಸಮಾರೋಪ ಸಮಾರಂಭದಲ್ಲಿ ಈ ಕೂಗು ಕೇಳಿ ಬಂದಿತು. ಇದೇ ವೇಳೆ ಪಥ ಸಂಚಲನ ನಡೆಯಿತು. ಬಳಿಕ ಧರ್ಮದ ಪ್ರಮುಖರ ತಂಡವೊಂದು ಜಾಮೀಯಾ ಮಸೀದಿಗೆ ತೆರಳಿ ದರ್ಶನ ಪಡೆದುಕೊಂಡರು. ಅಲ್ಲಿದ್ದ ಮುಸ್ಲಿಂ ಬಾಂಧವರಲ್ಲಿ ಹೋರಾಟಕ್ಕೆ ಸೂಚಿಸಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಕೇಳಿಕೊಂಡರು.

ಮಸೀದಿಗೆ ಭೇಟಿ ನೀಡಿದ ಲಿಂಗಾಯತ ಹೋರಾಟಗಾರರು..

ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಬಸವ ತತ್ವ ಹಾಗೂ ಮುಸ್ಲಿಂ ಧರ್ಮದ ಪವಿತ್ರ ಕುರಾನ್‌ನಲ್ಲಿಯ ತತ್ವ ಸಂದೇಶಗಳಿಗೆ ಸಾಮ್ಯತೆ ಇದೆ. ಮೂಢನಂಬಿಕೆ, ಕಂದಾಚಾರ, ಮೂರ್ತಿ ಪೂಜೆಗೆ ವಚನ ಸಾಹಿತ್ಯ ಹಾಗೂ ಕುರಾನ್‌ನಲ್ಲಿ ಅವಕಾಶ ಇಲ್ಲ. ಹೀಗಾಗಿ ಈ ಎರಡು ಧರ್ಮಗಳ ಆಚಾರ, ವಿಚಾರಗಳಿಗೆ ಸಾಮ್ಯತೆ ಇದೆ. ನಮ್ಮೊಂದಿಗೆ ನೀವು ಕೈಜೋಡಿಸಿ ಹೋರಾಟಕ್ಕೆ ಬಲ ತುಂಬಬೇಕು ಎಂದರು.

ಜಮಾತೆ ಇಸ್ಲಾಮಿ ಹಿಂದ್‌ನ ಸ್ಥಳೀಯ ಅಧ್ಯಕ್ಷ ಕಲೀಮ್​ ಅವರು ಮಸೀದಿಗೆ ಭೇಟಿ ಕೊಟ್ಟವರಿಗೆ ಮುಸ್ಲಿಂ ಧರ್ಮದ ಆಚಾರ, ವಿಚಾರಗಳನ್ನು ಪರಿಚಯಿಸಿದರು.

Intro:(ಗಮನಕ್ಕೆ: ನಮ್ಮ ಸುದ್ದಿಗಳನ್ನು ಬಸವಕಲ್ಯಾಣ ಡೇಟ್ ಲೈನ್ ಮೇಲೆ ಹಾಕಿಕೊಳ್ಳಿ. ಸರ್,)

(೨ ವಿಡಿಯೊಗಳನ್ನು ಕಳಿಸಲಾಗಿದೆ. ಎಲ್ಲಾ ವಿಡಿಯೊಗಳು ಬಳಸಿಕೊಳ್ಳಿ ಸರ್)

ಬಸವಕಲ್ಯಾಣ: ಲಿಂಗಾಯತ ಪ್ರತ್ಯೆÃಕ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮುಸ್ಲಿಂ ಧರ್ಮದವರು ಕೂಡ ನಮ್ಮ ಜೋತೆ ಕೈಜೋಡಿಸಬೇಕು ಎಂದು ಮುಸ್ಲಿಂ ಧರ್ಮದ ಮುಖಂಡರಲ್ಲಿ ಲಿಂಗಾಯತ ಧರ್ಮ ಹೋರಾಟಗಾರರು ಮನವಿ ಮಾಡಿದ ಪ್ರಸಂಗ ಜರುಗಿತು.
ಶರಣರ ಕಾಯಕ ಭೂಮಿ ಬಸವಕಲ್ಯಾಣದಲ್ಲಿ ಬಸವ ಮಹಾಮನೆ ಪರಿಸರದಲ್ಲಿ ಮೂರು ದಿನಗಳ ಕಾಲ ನಡೆದ ಕಲ್ಯಾಣ ಪರ್ವದ ಕೋನೆಯ ದಿನವಾದ ಭಾನುವಾರ ನಗರದಲ್ಲಿ ನಡೆದ ಪಥ ಸಂಚಲನದ ವೇಳೆ ಮಾರ್ಗ ಮಧ್ಯೆ ಬರುವ ಜಾಮಿಯಾ ಮಸಿದಿಗೆ ತೆರಳಿದ ಮಾತೆ ಗಂಗಾದೇವಿ ನೇತೃತ್ವದ ಪೂಜ್ಯರು, ಪ್ರಮುಖರ ತಂಡ, ಮಸಿದಿ ದರ್ಶನ ಮಾಡುವ ಜೋತೆಗೆ ಲಿಂಗಾಯತ ಧರ್ಮದ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಮುಸ್ಲಿಮರು ಬೆಂಬಲ ಸೂಚಿಸಿ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಬಸವ ತತ್ವ ಹಾಗೂ ಮುಸ್ಲಿಂ ಧರ್ಮದ ಪವಿತ್ರ ಕುರಾನ್‌ನಲ್ಲಿಯ ತತ್ವ ಸಂದೇಶಗಳಿಗೆ ಸಾಮ್ಯತೆ ಇದೆ. ಮೂಢ ನಂಬಿಕೆ, ಕಂದಾಚಾರ, ಮೂರ್ತಿ ಪೂಜೆಗೆ ವಚನ ಸಾಹಿತ್ಯ ಹಾಗೂ ಕುರಾನ್‌ಲ್ಲಿ ಅವಕಾಶ ಇಲ್ಲ. ಹೀಗಾಗಿ ಈ ಎರಡು ಧರ್ಮಗಳ ಆಚಾರ, ವಿಚಾರಗಳಿಗೆ ಸಾಮ್ಯತೆ ಇದೆ. ನಮ್ಮೊಂದಿಗೆ ನೀವು ಕೈಜೋಡಿಸಿ ಹೋರಾಟಕ್ಕೆ ಬಲ ತುಂಬಬೇಕು ಎಂದು ಮನವಿ ಮಾಡಿದರು.
ಜಮಾತೆ ಇಸ್ಲಾಮಿ ಹಿಂದ್‌ನ ಸ್ಥಳೀಯ ಅಧ್ಯಕ್ಷ ಕಲೀಮ ಆಬೇದ ಪೂಜ್ಯರಿಗೆ ಮಸಿದಿ ಪರಿಚಯ ಮಾಡುವ ಜೋತೆಗೆ ಮುಸ್ಲಿಂ ಧರ್ಮದ ಆಚಾರ, ವಿಚಾರಗಳನ್ನು ಪರಿಚಯಿಸಿದರು. ಏಕದೇವ ಉಪಾಸನೆ, ಶಾಂತಿ, ಸಮಾನತೆ ಕುರಾನ್ ಹಾಗೂ ವಚನ ಸಾಹಿತ್ಯದ ಮೂಲ ತತ್ವಗಳಾಗಿವೆ ಎಂದು ವಿವರಿಸಿದರು.
ಜಾಮಿಯಾ ಮಸಿದಿ ಕಮಿಟಿ ಅಧ್ಯಕ್ಷ ಮುಸ್ತಾಕ ಭೋಸ್ಗೆ, ಪ್ರಮುಖರಾದ ಮುಜಾಹಿದ್ ಪಾಶಾ ಖುರೇಶಿ, ಅಲ್ತಾಫ ಅಮಜದ್, ನೈಮೋದ್ದಿನ್ ಚಾಬುಕಸವಾರ, ಮಿರ ಎಕ್ಬಾಲ್ ಅಲಿ, ಜುಲ್ಫೆÃಕಾರ ಅಹ್ಮದ್, ಸೇರಿದಂತೆ ಪ್ರಮುಖರು ಹಾಜರಿದ್ದರು.

ವರದಿ
ಉದಯಕುಮಾರ ಮುಳೆ
ಈ ಟಿವಿ ಭಾರತ
ಬಸವಕಲ್ಯಾಣ

Body:UDAYAKUMAR MULEConclusion:BASAVAKALYAN
ETV Bharat Logo

Copyright © 2024 Ushodaya Enterprises Pvt. Ltd., All Rights Reserved.