ಬೀದರ್: ದೆಹಲಿಯ ನಿಜಾಮುದ್ದೀನ್ ಜಮಾತ್ನಲ್ಲಿ ಪಾಲ್ಗೊಂಡ 10 ಜನ ಸೊಂಕಿತರ ಪೈಕಿ 9 ಜನರು ಗುಣಮುಖರಾಗಿದ್ದು, ಜಿಲ್ಲಾಡಳಿತ ಅವರನ್ನು ಮರಳಿ ಮನೆಗೆ ವಾಪಸ್ ಕಳುಹಿಸಿದೆ.
ತಬ್ಲಿಘಿ ಮರ್ಕಜ್ಗೆ ಹೋಗಿ ಬಂದ ಮೇಲೆ ಪರಿಕ್ಷೆಗೆ ಒಳಪಡಿಸಿದಾಗ 10 ಜನರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಹೀಗಾಗಿ ಬೀದರ್ನ ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಇಂದು ಆ 10 ಜನರ ಪೈಕಿ 9 ಜನರ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿದೆ.
ಕಳೆದ 23 ದಿನಗಳಿಂದ ಬ್ರಿಮ್ಸ್ ಆಸ್ಪತ್ರೆಯ ಕೊರೊನಾ ವಿಶೇಷ ವಾರ್ಡ್ನಲ್ಲಿ ಇವರು ಚಿಕಿತ್ಸೆ ಪಡೆಯುತ್ತಿದ್ದರು. ಶಾಸಕ ರಹೀಂಖಾನ್, ಜಿಲ್ಲಾಧಿಕಾರಿ ಡಾ ಹೆಚ್.ಆರ್.ಮಹಾದೇವ, ಡಿಎಚ್ಒ ಡಾ ವಿ.ಜಿ.ರೆಡ್ಡಿ, ಬ್ರಿಮ್ಸ್ ನಿರ್ದೇಶಕ ಡಾ ಶಿವಕುಮಾರ್ ನೇತೃತ್ವದಲ್ಲಿ ಅಧಿಕಾರಿಗಳ ಟೀಂ ಕೊರೊನಾ ಸೊಂಕಿತ 9 ಜನರ ವರದಿಯನ್ನ ಎರಡು ಬಾರಿ ಪರೀಕ್ಷೆಗೆ ಒಳಪಡಿಸಿದಾಗಲೂ ನೆಗೆಟಿವ್ ಬಂದಿದೆ. ಈ ಹಿನ್ನೆಲೆ 9 ಜನರನ್ನು ಬಿಡುಗಡೆ ಮಾಡುತ್ತಿದ್ದು, ಇವರನ್ನು ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಚ್.ಆರ್ ಮಹಾದೇವ ಮಾಹಿತಿ ನೀಡಿದ್ದಾರೆ.