ETV Bharat / state

ಬೀದರ್​ನಲ್ಲಿ ಬೆಳಿಗ್ಗೆ ನಾಲ್ಕು, ಸಂಜೆ ಮೂವರಲ್ಲಿ ಕೊರೊನಾ: ಒಂದೇ ದಿನ 7 ಪ್ರಕರಣ ಪತ್ತೆ! - ಕೊರೊನಾ

ಬೀದರ್​ನಲ್ಲಿ ಇಂದು ಒಂದೇ ದಿನದಲ್ಲಿ 7 ಹೊಸ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 48ಕ್ಕೇರಿದೆ.

Bidar
ಬೀದರ್​
author img

By

Published : May 14, 2020, 8:14 PM IST

ಬೀದರ್: ಕೊರೊನಾ ಬೆಂಬಿಡದೆ ಗಡಿ ಜಿಲ್ಲೆ ಬೀದರ್ ನಗರವನ್ನು ಕಾಡುತ್ತಿದ್ದು, ಬೆಳಿಗ್ಗೆ ಕೊರೊನಾ ಬುಲೆಟಿನ್​ನಲ್ಲಿ 4 ಪ್ರಕರಣ ಪತ್ತೆಯಾದ್ರೆ, ಸಂಜೆ ಮತ್ತೆ 3 ಹೊಸ ಪ್ರಕರಣ ದಾಖಲಾಗಿದೆ. ಒಂದೇ ದಿನ 7 ಜನರಲ್ಲಿ ಸೋಂಕು ಪತ್ತೆಯಾದ ವರದಿಯಾಗಿದ್ದು, ಈ ಮೂಲಕ ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆರಿದೆ.

ನಗರದ ಓಲ್ಡ್ ಸಿಟಿಯ ಕಂಟೇನ್ಮೆಂಟ್​​​ ಏರಿಯಾದಲ್ಲಿ ಜಿಲ್ಲಾಡಳಿತ ನಡೆಸಿದ ಸಾಮೂಹಿಕ ವೈದ್ಯಕೀಯ ತಪಾಸಣೆಯಿಂದ ಬುಧವಾದ 12 ಪ್ರಕರಣ ಪತ್ತೆಯಾಗಿತ್ತು. ಈ ಪೈಕಿ ಗುರುವಾರ ಸಂಜೆ ಪ್ರಕಟವಾದ ಕೊರೊನಾ ಬುಲೆಟಿನ್​ನಲ್ಲಿ ಸೋಂಕಿತರ ಸಂಖ್ಯೆ 959ರ ಸಂಪರ್ಕದಲ್ಲಿ ಬಂದ 36 ವಯಸ್ಸಿನ ಮಹಿಳೆ, 18 ಮತ್ತು 16 ವಯಸ್ಸಿನ ಇಬ್ಬರು ಗಂಡು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

ಸೋಂಕಿತರೆಲ್ಲರೂ ಬೀದರ್ ನಗರದ ಓಲ್ಡ್​ ಸಿಟಿ ನಿವಾಸಿಗಳಾಗಿದ್ದು, ಕಳೆದ ಮೂರು ದಿನಗಳಲ್ಲಿ 21 ಪ್ರಕರಣಗಳು ಓಲ್ಡ್ ಸಿಟಿಯಲ್ಲಿ ಪತ್ತೆಯಾಗಿವೆ. ಇಂದು ಒಂದೇ ದಿನದಲ್ಲಿ ಹುಮನಾಬಾದ್​ ತಾಲೂಕಿನ ಹುಣಸಗೇರಾ ಗ್ರಾಮದ ಒಬ್ಬ ಮಹಿಳೆ ಸೇರಿದಂತೆ ಓಲ್ಡ್ ಸಿಟಿಯ 6 ಜನರಲ್ಲಿ ಸೋಂಕು ಪತ್ತೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಬೀದರ್ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 48ಕ್ಕೆರಿದ್ದು, ಈ ಪೈಕಿ 14 ಜನರು ಗುಣಮುಖರಾಗಿ ಮನೆಗೆ ವಾಪಸಾಗಿದ್ದಾರೆ. ಅಲ್ಲದೆ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಉಳಿದ 33 ಜನರು ಜಿಲ್ಲಾ ಕೊರೊನಾ ವಾರ್ಡ್​ನಲ್ಲಿ ದಾಖಲಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.