ಬಸವಕಲ್ಯಾಣ: ಅಡಿವೆ ಔಡಲಕಾಯಿ ತಿಂದು 6 ಜನ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಗೋರ್ಟಾ(ಬಿ) ಗ್ರಾಮದಲ್ಲಿ ನಡೆದಿದೆ.
ಗೋರ್ಟಾ ಗ್ರಾಮದ ವಿಜಯ ಲಕ್ಷ್ಮೀ, ಏಕನಾತ ನಿರೋಡೆ(9), ಸಾಯಿನಾಥ ಸೋಮನಾಥ ನಿರೋಡೆ(6), ನೀಶಾ (7), ಸೃಷ್ಟಿ ಪಾಂಡುರಂಗ ಉಪ್ಪಾರ್ (9), ಅಂಬಿಕಾ ಪಿರಾಜಿ ನಿಡಮನೆ(3), ದಿಕ್ಷಾ ಮಲ್ಲಿಕಾರ್ಜುನ ಜಮಾದಾರ(6) ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು.
ಓದಿ: ಕಂದಾಯ ಇಲಾಖೆ ಆಯುಕ್ತರಿಂದ ಶಿವಮೊಗ್ಗ ಸ್ಫೋಟ ಕುರಿತು ನಿಷ್ಪಕ್ಷಪಾತ ತನಿಖೆ: ಸಚಿವ ನಿರಾಣಿ
ಗ್ರಾಮದಲ್ಲಿಯ ಮನೆ ಪಕ್ಕದ ತಿಪ್ಪೆ ಗುಂಡಿ ಪ್ರದೇಶದಲ್ಲಿರುವ ಅಡಿ ಔಡಲಕಾಯಿ ತಿಂದು ಅಸ್ವಸ್ಥರಾದ ಮಕ್ಕಳನ್ನು ತಕ್ಷಣ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರಿಂದ, ಮಕ್ಕಳ ತಜ್ಞ ಡಾ. ಗಿರೀಶ್ ಭುರಾಳೆ ಚಿಕಿತ್ಸೆ ನೀಡಿದ್ದಾರೆ. ಸದ್ಯ ಮಕ್ಕಳು ಸ್ಥಿರವಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಸುದ್ದಿ ತಿಳಿದ ಗ್ರಾಮೀಣ ಠಾಣೆ ಪೊಲೀಸರ ತಂಡ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಕಲೆ ಹಾಕಿದೆ.