ETV Bharat / state

ಅಕ್ರಮ ಬಯೋ ಡೀಸೆಲ್ ಮಾರಾಟ: ಎರಡು ಪ್ರಕರಣದಲ್ಲಿ 6 ಮಂದಿ ಬಂಧನ - ಡೀಸೆಲ್ ಟ್ಯಾಂಕರ್​​

ಎರಡು ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಬಯೋ ಡೀಸೆಲ್ ಮಾರಾಟ ಮಾಡುತ್ತಿದ್ದ 6 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷ ಲಕ್ಷ ಮೌಲ್ಯದ ಬಯೋ ಡೀಸೆಲ್​ ಸೇರಿದಂತೆ ಅನೇಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

6 arrested for illegally sell bio diesel
ಎರಡು ಪ್ರಕರಣದಲ್ಲಿ 6 ಮಂದಿ ಬಂಧನ
author img

By

Published : Sep 7, 2021, 6:35 AM IST

ಬಸವಕಲ್ಯಾಣ (ಬೀದರ್​​): ಬಯೋ ಡೀಸೆಲ್ ಎಂದು ಮಿಕ್ಸ್ ಹೈಡ್ರೋ ಕಾರ್ಬನ್ ಆಯಿಲ್ ಮಾರಾಟ ಮಾಡುತಿದ್ದ ಜಾಲದ ಮೇಲೆ ದಾಳಿ ನಡೆಸಿದ ಗ್ರಾಮೀಣ ಠಾಣೆ ಪೊಲೀಸರ ತಂಡ ಇಬ್ಬರನ್ನು ಬಂಧಿಸಿದ್ದಾರೆ.

ಬಂಧಿತರಿಂದ ಸುಮಾರು 22.5 ಲಕ್ಷ ರೂ. ಮೌಲ್ಯದ ಮಿಕ್ಸ್ ಹೈಡ್ರೋ ಕಾರ್ಬನ್ ಆಯಿಲ್ ಜಪ್ತಿ ಮಾಡಲಾಗಿದೆ. ಹುಮನಾಬಾದ್​ ನಿವಾಸಿ ಎಂಡಿ ಇಮಾಮೋದ್ದಿನ್ ಹಾಗೂ ಲಾರಿ ಚಾಲಕ ಉತ್ತರ ಪ್ರದೇಶ ಮೂಲದ ನೀರಜ್ ರಾಮಮೂರ್ತಿ ಬಂಧಿತ ಆರೋಪಿಗಳು, ಚಂಡಕಾಪೂರ ಸಮೀಪ ಟ್ಯಾಂಕರ್ ಮೂಲಕ ಈ ಆಯಿಲ್ ಮಾರಾಟ ಮಾಡುತಿದ್ದ ವೇಳೆ, ಸಿಪಿಐ ರಘುವೀರಸಿಂಗ್ ಠಾಕೂರ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಿದೆ.

25 ಲಕ್ಷ ಮೌಲ್ಯದ ಟ್ಯಾಂಕರ್ ಸಹಿತ 22.5 ಲಕ್ಷ ರೂ. ಮೌಲ್ಯದ 30 ಸಾವಿರ ಲೀಟರ್ ಆಯಿಲ್ ಹಾಗೂ 16,400 ನಗದು ಜಪ್ತಿ ಮಾಡಿಕೊಳ್ಳಲಾಗಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣದಲ್ಲಿ ನಾಲ್ವರ ಬಂಧನ

ಸಸ್ತಾಪೂರ ಬಂಗ್ಲಾದ ಆಟೋ ನಗರದಲ್ಲಿ ಮಾರಾಟ ಮಾಡಲೆಂದು ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ ಬಯೋ ಡೀಸೆಲ್ ಅಡ್ಡೆ ಮೇಲೆ ದಾಳಿ ನಡೆಸಿದ ನಗರ ಠಾಣೆ ಪೊಲೀಸರ ತಂಡ, 98 ಸಾವಿರ ರೂ. ಮೌಲ್ಯದ 1400 ಲೀಟರ್ ಬಯೋ ಡೀಸೆಲ್ ಜಪ್ತಿ ಮಾಡಿ ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ.

ನಗರದ ಜಿಲಾನಿ ಅಬ್ದುಲ್ ಖದಿರ್, ಯಾಸಿನ್ ಶೈಖ್ ಮಸ್ತಾನ್, ವಾಹೀದ್ ಜಿಲಾನಿಮಿಯ್ಯ ಹಾಗೂ ತಾಜಪೂರಾದ ನವಾಜ್ ರಸೀದ್‌ಮಿಚಿ ಬಂಧಿತ ಆರೋಪಿಗಳು. ಸಸ್ತಾಪೂರ ಬಂಗ್ಲಾದ ಆಟೋ ನಗರದಲ್ಲಿ ಅಕ್ರಮವಾಗಿ ಬಯೋ ಡೀಸೆಲ್ ಮಾರಾಟ ಮಾಡಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಪಿಎಸ್‌ಐ ಅಮರ ಕುಲ್ಕರ್ಣಿ ನೇತೃತ್ವದ ತಂಡ ದಾಳಿ ನಡೆಸಿದ್ದು, ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.