ಬೀದರ್: ಗಡಿ ಜಿಲ್ಲೆ ಬೀದರ್ನಲ್ಲಿ ಕೊರೊನಾ ವೈರಸ್‌ನಿಂದಾಗಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
![Bidar corona](https://etvbharatimages.akamaized.net/etvbharat/prod-images/kn-bdr-01-20-coronadeath-7203280-av-01_20072020183638_2007f_1595250398_858.jpg)
ಬೀದರ್ ತಾಲೂಕಿನಲ್ಲಿ ಇಬ್ಬರು, ಬಸವಕಲ್ಯಾಣ ಹಾಗೂ ಹುಮನಾಬಾದ್ ತಾಲೂಕಿನಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದು, ಇಂದು ಒಂದೇ ದಿನ ನಾಲ್ವರು ಮೃತಪಟ್ಟಿದ್ದಾರೆ. ಮೃತರೆಲ್ಲರೂ ವಯಸ್ಕರಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.
![Bidar corona](https://etvbharatimages.akamaized.net/etvbharat/prod-images/kn-bdr-01-20-coronadeath-7203280-av-01_20072020183638_2007f_1595250398_194.jpg)
![Bidar corona](https://etvbharatimages.akamaized.net/etvbharat/prod-images/kn-bdr-01-20-coronadeath-7203280-av-01_20072020183638_2007f_1595250398_832.jpg)
ಇಂದು ಜಿಲ್ಲೆಯಲ್ಲಿ 25 ಹೊಸ ಸೋಂಕಿತರು ಪತ್ತೆಯಾಗಿದ್ದು, ಈ ಮೂಲಕ ಜಿಲ್ಲೆಯ ಒಟ್ಟು ಕೊರೊನಾ ಪ್ರಕರಣ 1,403ಕ್ಕೆ ಏರಿಕೆಯಾಗಿದೆ. ಇಂದು 78 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈವರೆಗೆ 818 ಜನರು ಗುಣಮುಖರಾಗಿದ್ದಾರೆ. ಸಾವನ್ನಪ್ಪಿದ ಒಟ್ಟು 63 ಜನರ ಪೈಕಿ ಇಬ್ಬರು ಅನ್ಯ ಕಾರಣದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.