ETV Bharat / state

ಉಪಚುನಾವಣೆ: ಹಕ್ಕು ಚಲಾಯಿಸಿದ ನಾಲ್ವರು ಅಭ್ಯರ್ಥಿಗಳು, ಉತ್ಸಾಹ ತೋರದ ಮತದಾರರು

ಬಸವಕಲ್ಯಾಣ ಉಪಚುನಾವಣೆ ಕಣದಲ್ಲಿರುವ 12 ಜನ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ ರೈತ ಭವನದಲ್ಲಿ ಮತದಾನದ ಹಕ್ಕು ಚಲಾಯಿಸಿದ್ದಾರೆ. ಬಿಜೆಪಿ ಬಂಡಾಯ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ನಗರದ ತ್ರಿಪುರಾಂತದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

4 candidates voting at Basavakalyan
ಉಪಚುನಾವಣೆ: ಹಕ್ಕು ಚಲಾಯಿಸಿದ ನಾಲ್ವರು ಅಭ್ಯರ್ಥಿಗಳು..
author img

By

Published : Apr 17, 2021, 2:39 PM IST

ಬಸವಕಲ್ಯಾಣ: ಕ್ಷೇತ್ರದ ವಿಧಾನಸಭೆ ಉಪಚುನಾವಣೆಯಲ್ಲಿ ಗೆಲುವಿಗಾಗಿ ಸೆಣಸುತ್ತಿರುವ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತದಾನ ಮಾಡಿ ಗಮನ ಸೆಳೆದಿದ್ದಾರೆ.

ಉಪಚುನಾವಣೆ: ಹಕ್ಕು ಚಲಾಯಿಸಿದ ನಾಲ್ವರು ಅಭ್ಯರ್ಥಿಗಳು, ಉತ್ಸಾಹ ತೋರದ ಮತದಾರರು

ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ದಿ. ಶಾಸಕ ಬಿ.ನಾರಾಯಣರಾವ್​ ಪತ್ನಿ ಮಾಲಾ ಬಿ. ನಾರಾಯಣರಾವ್ ನಗರದ ತ್ರಿಪುರಾಂತದಲ್ಲಿರುವ ಮತಗಟ್ಟೆ ಕೇಂದ್ರ 21ರಲ್ಲಿ ಮತ ಚಲಾಯಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶರಣು ಸಲಗರ ರೈತ ಭವನದಲ್ಲಿಯ ಮತಗಟ್ಟೆ ಕೇಂದ್ರ 17ರಲ್ಲಿ, ಜೆಡಿಎಸ್ ಅಭ್ಯರ್ಥಿ ಸೈಯದ್ ಯಶ್ರಬ್ ಅಲಿ ಖಾದ್ರಿ 26ರಲ್ಲಿ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ನಗರದ ತ್ರಿಪುರಾಂತನಲ್ಲಿಯ ಮತಗಟ್ಟೆ ಕೇಂದ್ರ 20ರಲ್ಲಿ ಮತ ಚಲಾಯಿಸಿದರು.

ಬೆಳಗ್ಗೆ 7ರಿಂದಲೇ ಮತದಾನ ಆರಂಭವಾಗಿದ್ದು, ಬೆಳಗ್ಗೆ 11ರವರೆಗೆ 20 ಪ್ರತಿಶತದಷ್ಟು ಮತದಾನವಾಗಿದೆ. ನಗರ ಸೇರಿದಂತೆ ಕ್ಷೇತ್ರದ ಬಹುತೇಕ ಮತಗಟ್ಟೆ ಕೇಂದ್ರಗಳಲ್ಲಿ ನೀರಸ ಮತದಾನ ಕಂಡು ಬರುತ್ತಿದೆ.

ಓದಿ: ಬಸವಕಲ್ಯಾಣ ಉಪಚುನಾವಣೆ: ಉತ್ಸಾಹದಿಂದ ಮತಗಟ್ಟೆಗಳತ್ತ ಆಗಮಿಸುತ್ತಿರುವ ಮತದಾರರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.