ಬೀದರ್: ಕೊರೊನಾ ವೈರಸ್ ಅಟ್ಟಹಾಸ ಜಿಲ್ಲೆಯಲ್ಲಿ ಮುಂದುವರೆದಿದ್ದು, ಇಂದು ಮತ್ತೆ ಮೂವರು ಕೊರೊನಾಗೆ ಬಲಿಯಾಗಿದ್ದಾರೆ. ಮಹಾಮಾರಿಯಿಂದಾಗಿ ಜಿಲ್ಲೆಯಲ್ಲಿ ಸಾವಿಗೀಡಾದವರ ಸಂಖ್ಯೆ ಅರ್ಧ ಶತಕ ದಾಟಿದೆ.
ಬೀದರ್ ತಾಲೂಕಿನ ವಿವಿಧ ಗ್ರಾಮದ ಮೂವರು ಮೃತಪಟ್ಟಿದ್ದು, ಎಲ್ಲರಲ್ಲೂ ಕೊರೊನಾ ಸೋಂಕು ದೃಢವಾಗಿದೆ. 61, 72 ಮತ್ತು 75 ವರ್ಷದ ವೃದ್ಧರು ಸಾವನಪ್ಪಿದ್ದು, ಉಸಿರಾಟದ ತೊಂದರೆ, ಜ್ವರ, ಕೆಮ್ಮು ರೋಗದ ಲಕ್ಷಣಗಳು ಕಂಡು ಬಂದ ಕಾರಣ ಸಾವಿನ ನಂತರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ.
ಈ ಮೂಲಕ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಇದಲ್ಲದೆ ಇಂದು ಜಿಲ್ಲೆಯಲ್ಲಿ ಹೊಸ 22 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 913ಕ್ಕೆ ಏರಿಕೆಯಾಗಿದೆ. 562 ಜನರು ಗುಣಮುಖರಾಗಿ ಮನೆಗೆ ಮರಳಿದ್ದರೆ, 299 ಜನರು ಕೊರೊನಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.