ಬೀದರ್: ಸೋಂಕು ಪತ್ತೆಯಾದವನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಯನ್ನು ಬಂಧಿಸಿದ ಕಾರಣ 14 ಪೊಲೀಸರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಸಿಪಿಐ ಶರಣಬಸವೇಶ್ವರ ಭಜಂತ್ರಿ, ಪಿಎಸ್ಐ ಸುರೇಶ್ ಭಾವಿಮನಿ, 12 ಮಂದಿ ಕಾನ್ಸ್ಟೆಬಲ್ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿದೆ.
ಚಿಟಗುಪ್ಪ ತಾಲೂಕಿನ ಮದರಗಿ ಗ್ರಾಮದಲ್ಲಿ ಮೇ 14 ರಂದು ಚಿಟಗುಪ್ಪ ಠಾಣೆಯ ಪೊಲೀಸರು ಜೂಜುಕೋರರನ್ನು ಬಂಧಿಸಿದ್ದರು. ನಿನ್ನೆ ಸೋಂಕು ಪತ್ತೆಯಾದವನ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿ ಸಹ ಬಂಧನಕ್ಕೊಳಗಾಗಿದ್ದ.
ಸೋಂಕು ಪತ್ತೆಯಾದ ಪ್ರಕರಣದ ಚಲನವಲನ ಪರಿಶೀಲನೆಯಲ್ಲಿ ಪೊಲೀಸರು ದ್ವಿತೀಯ ಸಂಪರ್ಕಕ್ಕೆ ಸೇರಿದ್ದಾರೆ ಎಂಬುದು ಗೊತ್ತಾಗಿದೆ. ಹೀಗಾಗಿ, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಅವರ ಆದೇಶದಂತೆ ಕ್ವಾರಂಟೈನ್ ಮಾಡಲಾಗಿದೆ.