ಬಳ್ಳಾರಿ: ನಗರ ಶಾಸಕ ಸೋಮಶೇಖರ ರೆಡ್ಡಿ ಮನೆ ಮುಂದೆ ಶಾಂತಿಯುತ ಧರಣಿ ನಡೆಸಲು ಅವಕಾಶ ಕಲ್ಪಿಸಬೇಕೆಂದು ಕೋರಿ, ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿದ್ದಾರೆ.
ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಶಾಸಕ ಸೋಮಶೇಖರರೆಡ್ಡಿ ಮನೆ ಮುಂದೆ ಶಾಂತಿಯುತ ಧರಣಿ ನಡೆಸಲು ಶಾಸಕ ಜಮೀರ್ ಅಹಮ್ಮದ್ ನಿರ್ಧರಿಸಿದ್ದಾರೆ. ಈ ಮನವಿಗೆ ಕಾಂಗ್ರೆಸ್ ಎಂಎಲ್ ಸಿ ಕೊಂಡಯ್ಯನವ್ರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಸೋಮವಾರರಂದು ಶಾಸಕ ಜಮೀರ್ ಅಹಮ್ಮದ್ ಬಳ್ಳಾರಿಗೆ ಭೇಟಿ ನೀಡಲಿದ್ದು, ಜಿಲ್ಲಾ ಪೊಲೀಸ್ ಇಲಾಖೆಗೆ ಭಾರೀ ತಲೆ ನೋವಾಗಿ ಪರಿಣಮಿಸಿದೆ. ಶಾಸಕ ಜಮೀರ್ ಅವರು ಶಾಸಕ ರೆಡ್ಡಿ ಮನೆ ಎದುರು ಧರಣಿ ಮಾಡಲು ನಿರ್ಧರಿಸಿರೋದನ್ನು ಎಂಎಲ್ಸಿ ಕೊಂಡಯ್ಯನವ್ರು ತೀವ್ರವಾಗಿ ಖಂಡಿಸಿದ್ದಾರೆ. ಶಾಂತಿಗೆ ಹೆಸರಾದ ಬಳ್ಳಾರಿಯಲ್ಲಿ ಶಾಸಕ ಜಮೀರ್ ಅಹಮ್ಮದ್ ಅವರ ಧರಣಿಯಿಂದ ಅಶಾಂತಿ ಸೃಷ್ಟಿಯಾಗೋ ಸಾಧ್ಯತೆ ಇದೆ. ಹೀಗಾಗಿ, ಈ ಧರಣಿಯನ್ನು ಕೈಬಿಡಬೇಕು ಎಂದು ಕೊಂಡಯ್ಯ ಒತ್ತಾಯಿಸಿದ್ದಾರೆ.