ಯುವತಿ ನಾಪತ್ತೆ: ಹೊಸಪೇಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲು - Young Women Missing in Hospet
ಹೊಸಪೇಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ನರಸಾಪುರ ಮಾಗಾಣಿಯ ಯುವತಿ ಅನ್ನಪೂರ್ಣ (19) ಮಾ.4 ರಿಂದ ಕಾಣೆಯಾಗಿದ್ದಾಳೆ. ಈ ಕುರಿತು ಪೋಷಕರು ದೂರು ದಾಖಲಿಸಿದ್ದಾರೆ.
ಯುವತಿ ನಾಪತ್ತೆ
ಹೊಸಪೇಟೆ: ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ನರಸಾಪುರ ಮಾಗಾಣಿಯ ಯುವತಿ ಅನ್ನಪೂರ್ಣ (19) ಮಾ.4 ರಿಂದ ಕಾಣೆಯಾಗಿದ್ದಾಳೆ.
ಕಾಲೇಜಿಗೆ ಹೋಗಿ ಬರುತ್ತೇನೆ ಎಂದು ಹೋದ ಮಗಳು ಮನೆಗೆ ವಾಪಸ್ ಬಂದಿಲ್ಲ ಎಂದು ಪೋಷಕರು ತಿಳಿಸಿದ್ದು, ಈ ಕುರಿತು ದೂರು ದಾಖಲಿಸಿದ್ದಾರೆ.
ಚಹರೆ ಗುರುತು: ಎತ್ತರ 5.2 ಅಡಿ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ. ಕನ್ನಡ ಭಾಷೆ ಮಾತನಾಡುತ್ತಾಳೆ. ಯುವತಿ ಕಾಣೆಯಾದ ದಿನ ಗುಲಾಬಿ ಮತ್ತು ಹಳದಿ ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಳು ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.