ಹೊಸಪೇಟೆ : ಕೆರೆಗೆ ಸ್ನಾನಕ್ಕೆಂದು ಹೋದ ಯುವಕ ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಡಣಾಯಕನಕೆರೆ ಗ್ರಾಮದಲ್ಲಿ ನಡೆದಿದೆ.
ರಾಘವೇಂದ್ರ (19) ಮೃತ ಯುವಕ. ಈತ ಹೋಳಿ ಹಬ್ಬ ಮುಗಿಸಿ ಕೆರೆಗೆ ಈಜಾಡಲು ಹೋಗಿದ್ದ. ಕೆರೆ ದಂಡೆಯಲ್ಲಿ ಕುಳಿತು ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಇದನ್ನೂ ಓದಿ : ವಿಜಯಪುರ: ಕಳ್ಳಭಟ್ಟಿ ಸೇವನೆಯಿಂದ ಯುವಕ ಸಾವು?
ಈ ಕುರಿತು ಮರಿಯಮ್ಮಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.