ETV Bharat / state

ಮನಸೋಯಿಚ್ಛೆ ಥಳಿಸಿದ ಪರಿಣಾಮ ರಿಮ್ಯಾಂಡ್ ಹೋಂನಲ್ಲಿದ್ದ ಅಪ್ರಾಪ್ತ ಯುವಕ ಸಾವು! - Bellary assault case

ಹೋಂಗಾರ್ಡ್​ಗಳಿಂದ ಥಳಿತಕ್ಕೊಳಗಾಗಿದ್ದ ಎನ್ನಲಾದ ಯುವಕನೋರ್ವ ಅತೀವ ಅಸ್ವಸ್ಥತೆಯಿಂದ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

young-man-dead-from-home-guard-assault
ಸಾಂದರ್ಭಿಕ ಚಿತ್ರ
author img

By

Published : Jun 16, 2020, 12:20 AM IST

ಬಳ್ಳಾರಿ: ಇಲ್ಲಿನ ದೇವಿನಗರದ ರಿಮ್ಯಾಂಡ್ ಹೋಂನಲ್ಲಿದ್ದ 16 ವರ್ಷದ ಅಪ್ರಾಪ್ತ ಯುವಕನೋರ್ವನನ್ನು ಹೋಂಗಾರ್ಡ್​ಗಳಿಬ್ಬರು ಮನಸೋಯಿಚ್ಛೆ ಥಳಿಸಿದ‌ ಪರಿಣಾಮ ಆತ ಮೃತಪಟ್ಟಿರುವ ಘಟನೆ ನಿನ್ನೆ ತಡ ರಾತ್ರಿ ನಡೆದಿದೆ.

ಬಳ್ಳಾರಿ ಮೂಲದ ಹೋಂಗಾರ್ಡ್​ಗಳಾದ ಓಬಳೇಶ‌ ಮತ್ತು ಮಾರುತಿ ಎಂಬುವರು ಇದೀಗ ಕೌಲ್ ಬಜಾರ್ ಪೊಲೀಸ್ ಠಾಣೆಯ ಅತಿಥಿಯಾಗಿದ್ದಾರೆ. ಲೈಂಗಿಕ ದೌರ್ಜನ್ಯದ ಆರೋಪದಡಿ ಪಕ್ಕದ ಜಿಲ್ಲೆಯೊಂದರಿಂದ ಈ ಯುವಕನನ್ನ ಬಳ್ಳಾರಿಯ ರಿಮ್ಯಾಂಡ್ ಹೋಂಗೆ (ವೀಕ್ಷಣಾಲಯ) ಕರೆ ತರಲಾಗಿತ್ತು. ನಿನ್ನೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟ ಸವಿದ ಆ ಯುವಕ ಹೋಂಗಾರ್ಡ್​ಗಳೊಂದಿಗೆ ಕ್ಯಾತೆ ತೆಗೆದ ಪರಿಣಾಮ ಹೋಂಗಾರ್ಡ್​ಗಳು ಥಳಿಸಿದ್ದಾರೆ ಎನ್ನಲಾಗುತ್ತದೆ.

ರಾತ್ರಿ ಊಟ ಬಡಿಸಲು ಗೃಹ‌ಪಾಲಕರು ತೆರಳಿದಾಗ ಯುವಕ ಅತೀವ ಅಸ್ವಸ್ಥನಾಗಿದ್ದು, ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಹೋಂಗಾರ್ಡ್​ಗಳ ವಿರುದ್ಧ ವೀಕ್ಷಣಾಲಯದ ಗೃಹ ಪಾಲಕರು ಕೌಲ್ ಬಜಾರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.