ಹೊಸಪೇಟೆ(ವಿಜಯನಗರ): ಪಿಹೆಚ್ಡಿ ಮಾಡೋದು ಬೇಡ ಅಂತ ಪೋಷಕರು ಹೇಳಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ.
ಬಿ.ಇಡಿ ವ್ಯಾಸಂಗ ಮಾಡುತ್ತಿದ್ದ ಯು.ಎನ್. ಪೂಜಾ(24) ಆತ್ಮಹತ್ಯೆಗೆ ಶರಣಾಗಿರುವ ಯುವತಿ. ಎಂ.ಎಸ್ಸಿ ಮುಗಿಸಿ ಬಿ.ಇಡಿ ಮಾಡುತ್ತಿದ್ದ ಆಕೆ ಪಿಹೆಚ್ಡಿ ಮಾಡುವುದಾಗಿ ತಂದೆ ಮುಂದೆ ತನ್ನ ಇಚ್ಛೆಯನ್ನು ತಿಳಿಸಿದ್ದಾಳೆ. ಅದಕ್ಕೆ ತಂದೆ ನಾಗರಾಜ್, ಈಗ ಬೇಡ ಎಂದು ಹೇಳಿದ್ದಾರೆ.
ಇಷ್ಟಕ್ಕೆ ಬೇಸರಗೊಂಡ ಪೂಜಾ ತನ್ನ ರೂಂಗೆ ತೆರಳಿದ್ದಾಳೆ. ಸಾಕಷ್ಟು ಸಮಯ ರೂಂನಿಂದ ಹೊರಗಡೆ ಬಂದಿಲ್ಲ. ಬಳಿಕ ಬಾಗಿಲು ಒಡೆದು ನೋಡಿದಾಗ ನೇಣಿಗೆ ಶರಣಾಗಿರುವುದು ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓದಿ: ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳನ್ನು ಖಾಸಗೀಕರಣಗೊಳಿಸಿದ್ದೇ ಬಿಜೆಪಿಯ ಸಾಧನೆ: ಸಚಿನ್ ಪೈಲಟ್