ಬಳ್ಳಾರಿ: ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೊರೊನಾದಿಂದ ಗುಣಮುಖರಾಗಿ ಹೊರಬರುವಂತೆ ಪ್ರಾರ್ಥಿಸಿ ಶ್ರೀ ಕನಕ ದುರ್ಗಮ್ಮ ದೇವಿಗೆ ಯಾದವ ಸಮಾಜದವರು 101 ತೆಂಗಿನಕಾಯಿ ಹೊಡೆದಿದ್ದಾರೆ.
ನಗರದ ಶ್ರಿ ಕನಕದುರ್ಗಮ್ಮ ದೇವಸ್ಥಾನ ಆವರಣದಲ್ಲಿ ಇಂದು ಸಂಜೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರು ಗುಣಮುಖರಾಗಲೆಂದು ಕೋರಿ ಸಮುದಾಯದವರು 101 ಈಡುಗಾಯಿ ಹೊಡೆದು ಬೇಡಿಕೊಂಡರು.
ಈ ಸಂದರ್ಭದಲ್ಲಿ ಶ್ರೀ ಕನಕದುರ್ಗಮ್ಮ ದೇವಿ ದೇವಸ್ಥಾನದ ಆವರಣದಲ್ಲಿ ಯಾದವ್ ಸಮಾಜದ ಮುಖಂಡರು, ಸದಸ್ಯರು ಭಾಗವಹಿಸಿದ್ದರು.