ETV Bharat / state

ಹಣೆಬರಹ ಬರೆಯುವುದು ದೇವರಲ್ಲ, ಪ್ರಭುತ್ವದಿಂದ ಹಣೆಬರಹ ನಿರ್ಧಾರವಾಗುತ್ತೆ: ಕೆ.ನೀಲಾ - undefined

ನಮ್ಮ ಹಣೆಬರಹ ಬರೆಯುವುದು ದೇವರಲ್ಲ, ಪ್ರಭುತ್ವದಿಂದ ಹಣೆಬರಹ ನಿರ್ಧಾರವಾಗುತ್ತೆ ಎಂದು ಕೆ. ನೀಲಾ ಹೇಳಿದ್ರು.

ಕೆ.ನೀಲಾ
author img

By

Published : Apr 4, 2019, 9:49 AM IST

ಬಳ್ಳಾರಿ:ಹೈದರಾಬಾದ್​ ಕರ್ನಾಟಕ ಪ್ರದೇಶಾಭಿವೃದ್ಧಿ ಅಧ್ಯಯನ ಪೀಠದಿಂದ ಹೈ- ಕರ್ನಾಟಕ ಪ್ರದೇಶದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಇರುವ ಸವಾಲುಗಳು ಎನ್ನುವ ವಿಷಯ ಕುರಿತ ಕಾರ್ಯಾಗಾರದಲ್ಲಿ ನಮ್ಮ ಹಣೆಬರಹ ಬರೆಯುವುದು ದೇವರಲ್ಲ, ಪ್ರಭುತ್ವದಿಂದ ಹಣೆಬರಹ ನಿರ್ಧಾರವಾಗುತ್ತೆ ಎಂದು ಕೆ. ನೀಲಾ ಹೇಳಿದರು.

ಹೈದರಾಬಾದ್​ ಕರ್ನಾಟಕ ಪ್ರದೇಶದ ಮಹಿಳೆಯರ ದುಡಿಮೆ ಮತ್ತು ವಲಸೆ ಕುರಿತು ಮಾತನಾಡಿದ ನೀಲಾ, ಹಸಿವನ್ನು ಹೋಗಲಾಡಿಸುವ ಅಭಿವೃದ್ಧಿ ಕುರಿತು ಚಿಂತಿಸಬೇಕು. ಅಭಿವೃದ್ಧಿ ಮಾನದಂಡಗಳನ್ನು ಕೇವಲ ಪ್ಯಾಕೇಜ್​​ಗಳ ಮೂಲಕ ನೋಡದೇ ಪ್ರಭುತ್ವಕ್ಕೆ ತಲೆ ಕೆಡಿಸಿಕೊಳ್ಳಬಾರದು. ಹಸಿವು ನೀಗಿಸುವ ಕೆಲಸ ಮಾಡಬೇಕು ಎಂದರು. ಮಹಾತ್ಮಗಾಂಧಿ ಗ್ರಾಮೀಣಾ ಉದ್ಯೋಗ ಖಾತ್ರಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನಾನು ಅನೇಕ ಹಳ್ಳಿಗಳನ್ನು ಸುತ್ತಿದ್ದೇನೆ.

ಕೆ.ನೀಲಾ

ಇವತ್ತಿಗೂ ಮಹಿಳೆಯರಿಗೆ, ದಲಿತರಿಗೆ ಗ್ರಾಮ ಪಂಚಾಯತಿಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಧೈರ್ಯ ಬಂದಿಲ್ಲ. ಈ ಪ್ರದೇಶದವರಿಗೆ ತಲಾ ಆದಾಯ 50 ಸಾವಿರ ರೂಪಾಯಿಗಿಂತ ಕಡಿಮೆ ಇದೆ. ಕೃಷಿಯ ಕುರಿತು ರಾಷ್ಟ್ರೀಯ ನೀತಿಯು ಇಲ್ಲವಾದ್ದರಿಂದ ಕೃಷಿ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿದೆ ಎಂದರು.

ಉದ್ಯೋಗವಿಲ್ಲ, ಭೂಮಿಯಿಲ್ಲ, ಮನೆಯಿಲ್ಲ. ಮುಂಬೈ, ಪೂನಾಕ್ಕೂ ಹೋಗಿ ವಿವಿಧ ರೋಗ ಅಂಟಿಸಿಕೊಂಡು ಬರುತ್ತಾರೆ. ಕಾಡುವ ಬಡತನದಿಂದ ಅವರ ಮಕ್ಕಳು ಶಾಲೆಯಿಂದ ಡ್ರಾಪ್ ಔಟ್ ಆಗುತ್ತಾರೆ. ಶೇ. 49 ರಷ್ಟು ಇಲ್ಲಿ ಬಾಲ್ಯ ವಿವಾಹಗಳು ‌ನಡೆಯುತ್ತಿವೆ ಎಂದರು.

Intro:ಅಂಚಿನಲ್ಲಿರುವ ಮಹಿಳಾ ಲೋಕವನ್ನು ಅಭಿವೃದ್ಧಿಯ ಮಾನದಂಡವಾಗಿದಿಕೊಳ್ಳಬೇಕು ಎಂದು ಗುಲ್ಬರ್ಗಾ ಸಂಸ್ಕೃತಿ ಚಿಂತಕರಾದ ಕೆ.ನೀಲಾ ತಿಳಿಸಿದರು.

Body:ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಅಧ್ಯಯನ ಪೀಠದಿಂದ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಾಮಾಜಿಕ ಅಭಿವೃದ್ಧಿಗೆ ಇರುವ ಸವಾಲುಗಳು ಎನ್ನುವ ವಿಷಯದ ಮೇಲೆ ಕಾರ್ಯಾಗಾರದಲ್ಲಿ ನಮ್ಮ ಹಣೆಬರಹ ಬರೆಯುವವರು ದೇವರಲ್ಲ, ಪ್ರಭುತ್ವದಿಂದ ಹಣೆಬರಹ ನಿರ್ಧಾರವಾಗುತ್ತೆ ಎಂದು ಕೆ.ನೀಲಾ ತಿಳಿಸಿದರು.

ಹೈದ್ರಾಬಾದ್ ಕರ್ನಾಟಕ ಪ್ರದೇಶದ ಮಹಿಳೆಯರ ದುಡಿಮೆ ಮತ್ತು ವಲಸೆ ಕುರಿತು ಮಾತನಾಡಿದ ಅವರು ನೀಲಾ ಹಸಿವನ್ನು ಹೋಗಲಾಡಿಸುವ ಅಭಿವೃದ್ಧಿ ಯನ್ನು ಕುರಿತು ಚಿಂತಿಸಬೇಕು. ಅಭಿವೃದ್ಧಿ ಮಾನದಂಡಗಳನ್ನು ಕೇವಲ ಪ್ಯಾಕೆಜ್ ಗಳ ಮೂಲಕ ನೋಡಬಾರದು ಎಂದರು.

ಪ್ರಭುತ್ವಕ್ಕೆ ತಲೆ ಕೆಡಿಸಿಕೊಳ್ಳಬಾರದು. ಹಸಿವು ನೀಗಿಸುವ ಕೆಲಸ ಮಾಡಬೇಕು, ಮಹಾತ್ಮಗಾಂಧಿ ಗ್ರಾಮೀಣಾ ಉದ್ಯೋಗ ಖಾತ್ರಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ನಾನು ಅನೇಕ ಹಳ್ಳಿಗಳನ್ನು ಸುತ್ತಿದ್ದೇನೆ. ಅಂಚಿನಲ್ಲಿರುವ ಅನೇಕ ಸಮುದಾಯಗಳಿಗೆ ಅಭಿವೃದ್ಧಿಯ ಬಗ್ಗೆ ಏನೂ ಗೊತ್ತಿಲ್ಲ. ಇವತ್ತಿಗೂ ಮಹಿಳೆಯರಿಗೆ ದಲಿತರಿಗೆ, ಗ್ರಾಮ ಪಂಚಾಯತಿಯ ಕುರ್ಚಿಯಲ್ಲಿ ಕುಳಿತುಕೊಳ್ಳುವ ಧೈರ್ಯ ಬಂದಿಲ್ಲ. ಈ ಪ್ರದೇಶದವರಿಗೆ ತಲಾ ಆದಾಯ 50 ರೂಪಾಯಿ ಗಿಂತ ಕಡಿಮೆ ಇದೆ. ಕೃಷಿಯ ಕುರಿತು ರಾಷ್ಟ್ರೀಯ ನೀತಿಯು ಇಲ್ಲವಾದ್ದರಿಂದ ಕೃಷಿಯ ಬಹುರಾಷ್ಟ್ರೀಯ ಕಂಪನಿಗಳ ಪಾಲಾಗುತ್ತಿದೆ ಎಂದರು.

ಜಾಗತಿಕ ಮಟ್ಟದಲ್ಲಿರುವ ವಲಸೆಗಿಂತ ಸ್ಥಳೀಯ ಮಟ್ಟದ ವಲಸೆ ಈ ಭಾಗದ ಮಹಿಳೆಯರನ್ನು ಬಹಳ ಕಾಡಿದೆ. ಮಹಿಳೆಯರು ಹೊಟ್ಟೆಪಾಡಿಗಾಗಿ ವಲಸೆ ಹೋಗುತ್ತಾರೆನ್ನುವುದು ಬಹಳ ಗಂಭೀರವಾದ ವಿಷಯ. ಗುಲ್ಬರ್ಗಾ ದಲ್ಲಿ ಹೆಣ್ಣು ಮಕ್ಕಳ ಗರ್ಭಾಶಯಕ್ಕೆ ಕತ್ತರಿ ವರದಿಯಯ ಸಮಿತಿ ಅಧ್ಯಕ್ಷತೆಯಾಗಿದ್ದ ಸಂದರ್ಭದಲ್ಲಿ ಈ ಪ್ರದೇಶದ ಸತ್ಯದರ್ಶನ ನನಗಾಯಿತು ಎಂದರು.

ಉದ್ಯೋಗವಿಲ್ಲ, ಭೂಮಿಯಿಲ್ಲ, ಮನೆಯಿಲ್ಲ, ಬಾಂಬೆ ಪೂನಾ ಕ್ಕೂ ಹೋಗಿ ವಿವಿಧ ರೋಗ ಅಂಟಿಸಿಕೊಂಡು ಬರುತ್ತಾರೆ. ಕಾಡುವ ಬಡತನ ಅವರ ಮಕ್ಕಳು ಶಾಲೆಯಿಂದ ಡ್ರಾಪ್ ಔಟ್ ಆಗುತ್ತಾರೆ. ಶೇಕಡ 49 ರಷ್ಟು ಇಲ್ಲಿ ಬಾಲ್ಯವಿವಾಹ ಗಳು‌ನಡೆಯುತ್ತಿದೆ ಎಂದರು. ಮಹಿಳೆಯನ್ನು ವಸ್ತುವಂತೆ ಬಳಸಿಕೊಳುತ್ತಿದ್ದಾರೆ ಎಂದರು.

ಮಹಿಳೆ ಮೂರು ಪಟ್ಟು ದುಡಿಮೆಯ, ಬಹುದೊಡ್ಡ ಶಕ್ತಿ ಕೇಂದ್ರ ಎಂದು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ನೀಲಾ ಕಿವಿ ಮಾತನ್ನು ಹೇಳಿದರು.

Conclusion:ಒಟ್ಟಾರೆಯಾಗಿ ಹೈದ್ರಾಬಾದ್ ಕರ್ನಾಟಕ ಅಗತ್ಯವಾಗಿ ಅಭಿವೃದ್ಧಿ ಶಿಕ್ಷಣ ಮತ್ತು ಉದ್ಯೋಗ, ಮಹಿಳೆಯರು ಸಾಮಾಜಿಕ ಸಮಸ್ಯೆಗಳಿಂದ ಹೋರ ಬರುವ ಪ್ರಯತ್ನಗಳು ನಡೆಯಬೇಕೆಂದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.