ಬಳ್ಳಾರಿ: ಮಾ.30ಕ್ಕೆ ಕಾಲುವೆ ನೀರು ನಿಲ್ಲಿಸಿದರೆ ಅಂದೇ ತುಂಗಭದ್ರಾ ಡ್ಯಾಂ, ಜಲಾಶಯದ ಅಧಿಕಾರಿಗಳ, ಶಾಸಕರ, ಸಂಸದರ, ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತೇವೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಖಾಸಗಿ ಹೋಟಲ್ನಲ್ಲಿ ಸುದ್ದಿಗಾರರೊಂದಿಗೆ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಪುರುಷೋತ್ತಮ ಗೌಡ ಮಾತನಾಡಿ, ಜಲಾಶಯದ ಕೆಳದಂಡೆಯ ಕಾಲುವೆಯಿಂದ ರೈತರು ಬೆಳೆದ ಬೆಳೆಗೆ ಏಪ್ರಿಲ್ 10 ವರೆಗೆ ನೀರನ್ನು ನೀಡುತ್ತವೆ ಎಂದು ತುಂಗಭದ್ರಾ ಜಲಾಶಯದ ಅಧಿಕಾರಿಗಳು ಹೇಳಿದ್ದರು. ಆದ್ರೀಗ ಮಾ.30 ರವರೆಗೆ ನೀರು ಬಿಡುತ್ತವೆ ಎಂದು ಹೇಳುತ್ತಿದ್ದಾರೆ. ಅದಕ್ಕೆ ಸಂಭವಿಸಿದಂತೆ ಶನಿವಾರ ಮತ್ತು ಭಾನುವಾರ ರೈತರೆಲ್ಲಾ ಸೇರಿ ಶಾಸಕರು, ಸಂಸದರ ಹಾಗೂ ಸಚಿವರ ಮನೆಗಳಿಗೆ ಹೋಗಿ ಭೇಟಿ ಮಾಡಿ ನೀರು ಬಿಡುಗಡೆ ಬಗ್ಗೆ ತಿಳಿಸುತ್ತವೆ. ಅವರು ಒಪ್ಪಿಕೊಂಡು ಏಪ್ರಿಲ್ 10 ರವರೆಗೆ ನೀರು ಬಿಡಿಸಿದ್ರೆ ಸುಮ್ಮನಾಗುತ್ತವೆ, ಇಲ್ಲದಿದ್ದರೆ ಅವರ ಮನೆಗಳ ಮುಂದೆ ಕುಳಿತು ಪ್ರತಿಭಟನೆ ಮಾಡುತ್ತೇವೆಂದು ತಿಳಿಸಿದರು.
ಭತ್ತವನ್ನು ನಾಟಿ ಮಾಡಿದ ರೈತರು ಪ್ರತೀ ಎಕರೆಗೆ 30 ಸಾವಿರ ರೂ. ಹಣವನ್ನು ಖರ್ಚು ಮಾಡಿದ್ದೇವೆ. ರೈತರಿಗೆ ನೀರು, ಭತ್ತ ಕಟಾವು, ಬೆಂಬಲ ಬೆಲೆ ನೀಡದೆ ರೈತರಿಗೆ ಅನ್ಯಾಯವಾಗಿದೆ ಎಂದು ದೂರಿದರು. ಯಾವುದೇ ಕಾರಣಕ್ಕೂ ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಕಟ್ ಮಾಡಿದ್ರೆ ಮಾರ್ಚ್ 30 ರಂದು ತುಂಗಭದ್ರಾ ಡ್ಯಾಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತವೆ ಎಂದು ತಿಳಿಸಿದರು.
ಬಳಿಕ ರೈತ ರಂಜಾನ್ ಸಾಬ್ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 2 ಲಕ್ಷ ಎಕರೆಯಲ್ಲಿ ಭತ್ತ ಬೆಳೆದಿದ್ದೇವೆ. ಅದಕ್ಕೆ ಅಗತ್ಯವಾಗಿ ಏಪ್ರಿಲ್ 10 ರವೆಗೆ ನೀರು ಬೇಕಾಗಿದೆ, ಏಕಾಏಕೆ ಮಾರ್ಚ್ 30 ವರೆಗೆ ನೀರು ಬಿಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ರೆ ಹೇಗೆ? ಎಂದು ಪ್ರಶ್ನೆ ಮಾಡಿದರು. ಇದರಿಂದ ಬಹಳ ತೊಂದರೆಯಾಗುತ್ತೆ, ನಮಗೆ ನೀರು ಬೇಕು ಎಂದರು. ಸುದ್ದಿಗೋಷ್ಟಿಯಲ್ಲಿ ಸಂಗನಕಲ್ಲು ದೊಡ್ಡದಾಸಪ್ಪ, ಮೌನೇಶ್, ರಂಜನ್ ಸಾಬ್ ಮತ್ತು ಇನ್ನಿತರರು ಹಾಜರಿದ್ದರು.