ಬಳ್ಳಾರಿ: ಯಾವುದೇ ಜಾತಿ - ಬೇಧ ಹಾಗೂ ಮತ-ಪಂಥಗಳಿಗೆ ಇಲ್ಲಿ ಆಸ್ಪದವಿಲ್ಲ. ನಾವೆಲ್ಲರೂ ಒಂದೇ ಎಂಬ ಘೋಷವಾಕ್ಯದಡಿ ಮುನ್ನಡೆಯಬೇಕೆಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಪ್ರತಿಪಾದಿಸಿದ್ದಾರೆ.
ಬಳ್ಳಾರಿಯಲ್ಲಿಂದು ವಿವಿಧ ಸಿಸಿ ರಸ್ತೆಗಳ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾಭಾರತ ರಚಿಸಿದ್ದು ಪರಿಶಿಷ್ಟ ಜಾತಿಯವರು, ವಾಲ್ಮೀಕಿ ರಾಮಾಯಣ ರಚಿಸಿದ್ದು, ಪರಿಶಿಷ್ಟ ಪಂಗಡದವರು. ಭಾರತದ ಸಂವಿಧಾನವನ್ನ ಬರೆದಿದ್ದು ಡಾ.ಬಿ.ಅರ್. ಅಂಬೇಡ್ಕರ್ ಎಂದು ನಿನ್ನೆಯ ದಿನ ಸದನದಲ್ಲಿ ಶಾಸಕ ಬಸವರಾಜ ಪಾಟೀಲ ಯತ್ನಾಳ್ ಹೇಳಿದ್ದಾರೆ. ಅವರ ಈ ಹೇಳಿಕೆ ಯಾವುದೇ ದುರುದ್ದೇಶದಿಂದ ಕೂಡಿಲ್ಲ, ಅವರಿಂದಲೇ ನಾವು ಇಂದಿಗೂ ಚೆನ್ನಾಗಿ ಬಾಳುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತುತ ದಿನಮಾನದಲ್ಲಿ ಅಂತಹವರನ್ನ ಮರೆಯಬಾರದು ಹಾಗೂ ದೂರ ಇಡಬಾರದು. ಎಲ್ಲರೂ ಹೊಂದಿಕೊಂಡು ಹೋಗಬೇಕು ಎಂದು ಹೇಳಿದ್ದಾರೆಯೇ ಹೊರತು, ಬೇರಾವ ಅರ್ಥದಲ್ಲಿ ಹೇಳಿಲ್ಲ. ಯತ್ನಾಳ್ ಹೇಳಿಕೆಯನ್ನ ಅಪಾರ್ಥ ಮಾಡಿಕೊಳ್ಳುವುದು ಬೇಡ ಎಂದು ಯತ್ನಾಳ್ ಹೇಳಿಕೆಯನ್ನ ಸಮರ್ಥಿಸಿಕೊಂಡರು.