ETV Bharat / state

ಹೆಚ್​ ಡಿ ಕುಮಾರಸ್ವಾಮಿ ನನಗಿಂತ ಚೆನ್ನಾಗಿ ಅಳ್ತಾರೆ: ಶೃತಿ ವ್ಯಂಗ್ಯ - ಅಳುವುದರಲ್ಲಿ ಶೃತಿಗೆ ಹೆಚ್​ಡಿಕೆ ಪೈಪೋಟಿ ನ್ಯೂಸ್

ನಮಗೆ ಕಣ್ಣೀರು ಹಾಕುವಂತಹ ಮುಖ್ಯಮಂತ್ರಿ ಬೇಕಿಲ್ಲ. ರಾಜ್ಯದ ಜನರ ಕಣ್ಣೀರನ್ನು ಒರೆಸುವ, ಜನತೆಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುವ ಮುಖ್ಯಮಂತ್ರಿ ಬೇಕಾಗಿದ್ದಾರೆಂದು ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ಹೇಳಿದರು.

ಅಳುವುದರಲ್ಲಿ ಶೃತಿಗೆ ಹೆಚ್​ಡಿಕೆ ಪೈಪೋಟಿ ನ್ಯೂಸ್
ಅಳುವುದರಲ್ಲಿ ನನಗೆ ಹೆಚ್​ಡಿಕೆ ಪೈಪೋಟಿಯಲ್ಲಿದ್ದಾರೆ : ಶೃತಿ
author img

By

Published : Nov 28, 2019, 5:47 PM IST

ಹೊಸಪೇಟೆ: ನಮಗೆ ಕಣ್ಣೀರು ಹಾಕುವಂತಹ ಮುಖ್ಯಮಂತ್ರಿ ಬೇಕಿಲ್ಲ. ರಾಜ್ಯದ ಕಣ್ಣೀರನ್ನು ಒರೆಸುವ ಮುಖ್ಯಮಂತ್ರಿ ಬೇಕಾಗಿದ್ದಾರೆ ಎಂದು ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ಹೇಳಿದ್ರು.

ಅಳುವುದರಲ್ಲಿ ನನಗೆ ಹೆಚ್​ಡಿಕೆ ಪೈಪೋಟಿಯಲ್ಲಿದ್ದಾರೆ : ಶೃತಿ

ಇಂದು ಪಟೇಲ್ ನಗರದ ಬಿಜೆಪಿ ಕಚೇರಿಯಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾ ಸಭೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರ ರಂಗದಲ್ಲಿ ನನಗೆ ಅಳುವ ಪಾತ್ರಗಳನ್ನು ನೀಡುತ್ತಾರೆ. ನಾನು ಕಷ್ಟದ ಹಾಗೂ ನೋವಿನ ಪಾತ್ರಗಳಲ್ಲಿ ಅಳುವುದನ್ನು ಜನರು ಮೆಚ್ಚುತ್ತಾರೆ. ಶೃತಿ ಕಣ್ಣೀರು ಹಾಕುವುದರಲ್ಲಿ ಎತ್ತಿದ ಕೈ. ಆದ್ರೆ, ಇತ್ತೀಚಿನ ದಿನದಲ್ಲಿ ನನಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪೈಪೋಟಿಯಲ್ಲಿದ್ದಾರೆ. ಅವರು ನನಗಿಂತ ಚೆನ್ನಾಗಿ ಅಳುತ್ತಾರೆಂದು ಕುಟುಕಿದರು.

ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳವ ಸಚಿವರ ಅವಶ್ಯಕತೆಯಿದೆ. ಆನಂದ್​ಸಿಂಗ್ ಅವರ ರಾಜೀನಾಮೆಯಿಂದ ಇಂದು ಬಿಜೆಪಿ ಆಡಳಿತದಲ್ಲಿದೆ. ಅವರು ಸ್ವಾರ್ಥಕ್ಕಾಗಿ ರಾಜೀನಾಮೆಯನ್ನು ನೀಡಿಲ್ಲ. 14 ತಿಂಗಳು ಗಂಡನ ಮನೆಯಲ್ಲಿದ್ದರು. ಗಂಡನ ಮನೆಯಲ್ಲಿ ಅವರಿಗೆ ಸರಿಯಾದ ಸ್ಥಾನ‌ಮಾನ ನೀಡಲಿಲ್ಲ. ಅದಕ್ಕಾಗಿ ಮತ್ತೆ ತವರು ಮನೆಗೆ ಬಂದಿದ್ದಾರೆ ಎಂದು ಬಿಜೆಪಿಗೆ ಮರಳಿರುವುದಕ್ಕೆ ಸಮರ್ಥನೆ ನೀಡಿದರು.

ಬಿ.ಎಸ್.ವೈ ಸರ್ಕಾರದಲ್ಲಿ‌ ಮಹಿಳೆಯರಿಗಾಗಿ ಪ್ರಧಾನ ಸ್ಥಾನ ನೀಡಿದ್ದಾರೆ. ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದರು, ಪ್ರಧಾನಮಂತ್ರಿ ಅವರು ಬೇಟಿ ಬಚಾವ್ ಬೇಟಿ ಪಡಾವ್ ಎಂಬ ಮಹಿಳೆಯರ ಜಾಗೃತಿ ಯೋಜನೆಗಳನ್ನು ಜಾರಿಗೆ ತಂದರು. ಅದಕ್ಕಾಗಿ ಎಲ್ಲಾ ಮಹಿಳೆಯರು ಆನಂದ್​ ಸಿಂಗ್ ಅವರನ್ನು ಈ ಉಪಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಬೇಕು ಎಂದು ಶೃತಿ ಮನವಿ ಮಾಡಿದ್ರು.

Intro: ಶೃತಿಗೆ ಪೈಪೋಟಿ ಮಾಡಿ ಹೆಚ್ ಡಿ ಕೆ ಅಳುತ್ತಾರಂತೆ
ಹೊಸಪೇಟೆ : ನಮಗೆ ಕಣ್ಣೀರು ಹಾಕುವಂತಹ ಮುಖ್ಯಮಂತ್ರಿ ಬೇಕಿಲ್ಲ‌. ರಾಜ್ಯದ ಕಣ್ಣೀರನ್ನು ಒರೆಸಸುವ ಮಂತ್ರಿಬೇಕಾಗಿದ್ದಾರೆ. ತವರು ಮನೆಯಲ್ಲಿ ಸಿಗುವ ಮರ್ಯಾದೆ ಮತ್ತು ಗೌರವ ಆನಂದ ಸಿಂಗ್ ಅವರಿಗೆ ಬಿಜೆಪಿ ಪಕ್ಷದಲ್ಲಿ ಸಿಗುತ್ತದೆ ಎಂದು ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶೃತಿ ಮಾತನಾಡಿದರು.

Body: ಪಟೇಲ್ ನಗರದ ಬಿಜೆಪಿ ಕಛೇರಿಯಲ್ಲಿ ಇಂದು ನಡೆದ ಬಿಜೆಪಿ ಮಹಿಳಾ ಮೋರ್ಚ ಸಭೆಯ ಕಾರ್ಯಕ್ರಮದಲ್ಲಿ ಚಿತ್ರ ರಾಜ್ಯ ಮಹಿಳಾ ಪ್ರಧಾನ ಕಾರ್ಯದರ್ಶಿ ಶೃತಿ ಮಾತನಾಡಿದರು. ಶೃತಿ ಸಿನೇಮಾಗಳಲ್ಲಿ ಪಾತ್ರಕ್ಕೆ ತಕ್ಕಂತೆ ಅಳುತ್ತಾಳೆ.ಚಿತ್ರ ರಂಗದಲ್ಲಿ ನನಗೆ ಅಳುವಂತ ಪಾತ್ರಗಳನ್ನು ನೀಡುತ್ತಾರೆ. ಅದಕ್ಕಾಗಿ ನಾನು ಕಷ್ಟದ ಹಾಗೂ ನೋವಿನ ಪಾತ್ರಗಳಲ್ಲಿ ಅಳುವುದನ್ನು ಜನರು ಮೆಚ್ಚುತ್ತಾರೆ.ಶೃತಿ ಎಂದರೆ ಅಳುವುದು ಎಂದು ತಿಳಿಯುತ್ತದೆ ಮತ್ತು ಕಣ್ಣೀರು ಹಾಕುವುದರಲ್ಲಿ ಎತ್ತಿದ ಕೈ ಎಂದರು.ಇತ್ತೀಚ್ಛಿನ ದಿನದಲ್ಲಿ ನನ್ನಗಿಂತ ಮಾಜಿ ಮುಖ್ಯ ಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಪೈಪೋಟಿಯಲ್ಲಿದ್ದಾರೆ. ಅವರು ತುಂಬಾ ಚನ್ನಾಗಿ ಅಳುತ್ತಾರೆ ಎಂದು ಕುಟುಕಿದರು.

ರಾಜ್ಯಕ್ಕೆ ಜನರ ಕಣ್ಣೀರನ್ನು ಒರೆಸುವ ಮುಖ್ಯಮಂತ್ರಿಗಳು ಮತ್ತು ಸರಕಾರ ಬರಬೇಕಿದೆ.ಕಣ್ಣೀರನ್ನು ಹಾಕುವ ಜನ ನಾಯಕರು ನಮಗೆ ಬೇಕಿಲ್ಲ. ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳವ ಸಚಿವರ ಅವಶ್ಯಕತೆಯಿದೆ. ಆನಂದ ಸಿಂಗ್ ಅವರ ರಾಜೀನಾಮೆಯಿಂದ ಇವತ್ತು ಬಿಜೆಪಿ ಪಕ್ಷ ಆಡಳಿತದಲ್ಲಿದೆ. ಅವರು ಸ್ವಾರ್ಥಕ್ಕಾಗಿ ರಾಜೀನಾಮೆಯನ್ನು ನೀಡಿಲ್ಲ ಎಂದರು. ಆನಂದ ಸಿಂಗ್14 ತಿಂಗಳು ಗಂಡನ ಮನೆಯಲ್ಲಿದ್ದರು. ಗಂಡನ ಮನೆಯಲ್ಲಿ ಅವರಿಗೆ ಸರಿಯಾದ ಸ್ಥಾನ‌ಮಾನ ನೀಡಲಿಲ್ಲ ಅದಕ್ಕಾಗಿ ಮತ್ತೆ ತವರು ಮನೆಗೆ ಬಂದಿದ್ದಾರೆ ಎಂದು ಮಾತನಾಡಿದರು.

ಮುಖ್ಯ ಮಂತ್ರಿ ಬಿ.ಎಸ್. ವೈ ಸರಕಾರದಲ್ಲಿ‌ ಮಹಿಳೆಯರಿಗಾಗಿ ಪ್ರಧಾನವಾದ ಸ್ಥಾನವನ್ನು ನೀಡಿದ್ದಾರೆ. ಹೆಣ್ಣು ಮಕ್ಕಳಿಗೆ ಯಾವ ತಂದೆ ತಾಯಿ ಹಾಗೂ ಪಾಲಕರು ಮತ್ತು ಪೋಷಕರು ಬೈಯಬಾರದೆಂದು ಭಾಗ್ಯಲಕ್ಷ್ಮೀ ಯೋಜನೆಯನ್ನು ಜಾರಿಗೆ ತಂದರು. ಪ್ರಧಾನ ಮಂತ್ರಿಗಳು ಬೇಟಿ ಬಚಾವ್ ಬೇಟಿ ಪಾಡವ್ ಎಂಬ ಮಹಿಳೆಯರ ಜಾಗೃತಿಯ ಯೋಜನೆಗಳನ್ನು ಬಿಜೆಪಿ ಸರಕಾರ ಜಾರಿಗೆ ತಂದಿದೆ. ಅದಕ್ಕಾಗಿ ಎಲ್ಲ ಮಹಿಳೆಯರು ಆನಂದ ಸಿಂಗ್ ಅವರನ್ನು ಈ ಉಪಚುನಾವಣೆಯಲ್ಲಿ ಬಹುಮತದಿಂದ ಗೆಲ್ಲಿಸಬೇಕು ಎಂದು ಮಹಿಳೆಯರಿಗೆ ಮನವಿಯನ್ನು ಮಾಡಿಕೊಂಡರು.

Conclusion:KN_HPT_2_ ACTOR_SHRUTI_SPEECH_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.