ETV Bharat / state

ಜಿಂದಾಲ್​ಗೆ ಭೂಮಿ ಪರಭಾರೆ ಖಂಡಿಸಿ ವಾಟಾಳ್​ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಅವರೊಂದಿಗೆ ಹತ್ತಾರು ಕಾರ್ಯಕರ್ತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು, ವಾಟಾಳ್ ನಾಗರಾಜ ಅವರನ್ನು ಬಂಧಿಸಿದರು.

author img

By

Published : Jun 25, 2019, 4:32 PM IST

ಜಿಂದಾಲ್​ಗೆ ಭೂಮಿ ಪರಭಾರೆ ಖಂಡಿಸಿ ವಾಟಾಳ್​ ಪ್ರತಿಭಟನೆ

ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667ಎಕರೆ ಭೂಮಿ ಪರಭಾರೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಬಳ್ಳಾರಿಯಲ್ಲಿಂದು ಕರ್ನಾಟಕ ಜನ ಸೈನ್ಯ ಸಂಘಟನೆಯು ಬೃಹತ್ ಪ್ರತಿಭಟನೆಯನ್ನು ನಡೆಸಿತು.

ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್​ ಅವರ ನೇತೃತ್ವದಲ್ಲಿ ನೂರಾರು ಕನ್ನಡ ಪರ ಸಂಘಟನೆಗಳು ಜಮಾಯಿಸಿ, ರಾಜ್ಯ ಸರ್ಕಾರ ಹಾಗೂ ಜಿಂದಾಲ್ ಸಮೂಹ ಸಂಸ್ಥೆ ವಿರುದ್ಧ ಕೆಲಕಾಲ ಘೋಷಣೆ ಕೂಗಿದರು.

ಜಿಂದಾಲ್​ಗೆ ಭೂಮಿ ಪರಭಾರೆ ಖಂಡಿಸಿ ವಾಟಾಳ್​ ಪ್ರತಿಭಟನೆ

ಬಳಿಕ, ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್​ ಅವರೊಂದಿಗೆ ಹತ್ತಾರು ಕಾರ್ಯಕರ್ತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಅವರನ್ನು ಸುತ್ತುವರಿದು ನಿಂತಿದ್ದ ಪೊಲೀಸರು, ವಾಟಾಳ್ ನಾಗರಾಜ ಅವರನ್ನು ಬಂಧಿಸಿದರು. ಅಲ್ಲಿಂದ ಪೊಲೀಸ್ ವಾಹನದಲ್ಲಿ ಕರೆದ್ಯೊಯ್ದು ನಗರದ ಕೋರ್ಟ್ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಬಿಡುಗೊಳಿಸಿದರು.

ಇದಕ್ಕೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್​, ಜಿಂದಾಲ್ ಕಂಪನಿಯ ವಿರುದ್ಧ ರಾಜ್ಯವ್ಯಾಪಿ ಹೋರಾಟ, ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕರ್ನಾಟಕ ಜನ ಸೈನ್ಯ ಸೇರಿದಂತೆ ನಾನಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದೆ. ಬಿಜೆಪಿಯವರು ಹೋರಾಟದ ನಾಟಕ ಮಾಡಿ ಎರಡ್ಮೂರು ದಿನ ಮಾತ್ರ ಪ್ರತಿಭಟನೆ ನಡೆಸಿದ್ದಾರೆ. ಈಗ ಮಾತನಾಡುತ್ತಿಲ್ಲ. ಈ ಮೈತ್ರಿಕೂಟ ಸರ್ಕಾರದ ಜೆಡಿಎಸ್, ಕಾಂಗ್ರೆಸ್ ನವರು ಧ್ವನಿ ಎತ್ತುತ್ತಿಲ್ಲ. ಜಿಂದಾಲ್ ಕಂಪನಿಗೆ ಈ ಜಿಲ್ಲೆಯನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.

Intro:ಜಿಂದಾಲ್ ಗೆ ಭೂಮಿ ಪರಭಾರೆ ವಿರೋಧಿಸಿ ಪ್ರತಿಭಟನೆ
ಬಳ್ಳಾರಿಯಲ್ಲಿ ವಾಟಾಳ್ ನಾಗರಾಜ ಬಂಧನ, ಬಿಡುಗಡೆ!
ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,667
ಎಕರೆ ಭೂಮಿ ಪರಭಾರೆ ಮಾಡಿತ್ತಿರುವ ರಾಜ್ಯ ಸರ್ಕಾರದ
ಕ್ರಮವನ್ನು ವಿರೋಧಿಸಿ ಬಳ್ಳಾರಿಯಲ್ಲಿಂದು ಕರ್ನಾಟಕ ಜನ
ಸೈನ್ಯ ಸಂಘಟನೆಯು ಬೃಹತ್ ಪ್ರತಿಭಟನೆಯನ್ನು ನಡೆಸಿತು.
ಬಳ್ಳಾರಿ ನಗರದ ಗಡಿಗಿ ಚನ್ನಪ್ಪ ವೃತ್ತದ ಬಳಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ ಅವರ ನೇತೃತ್ವದಲ್ಲಿ ನೂರಾರು ಕನ್ನಡ ಪರ ಸಂಘಟನೆಗಳು ಜಮಾಯಿಸಿ, ರಾಜ್ಯ ಸರ್ಕಾರ ಹಾಗೂ ಜಿಂದಾಲ್ ಸಮೂಹ ಸಂಸ್ಥೆ ವಿರುದ್ಧ ಕೆಲ
ಕಾಲ ಘೋಷಣೆ ಕೂಗಿದರು. ಬಳಿಕ, ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ ಅವರೊಂದಿಗೆ ಹತ್ತಾರು ಕಾರ್ಯಕರ್ತರು ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಅವರನ್ನು ಸುತ್ತು ವರಿದೂ ನಿಂತಿದ್ದ ಪೊಲೀಸರು ವಾಟಾಳ್ ನಾಗರಾಜ ಅವರನ್ನು ಬಂಧಿಸಿದರು. ಅಲ್ಲಿಂದ ಪೊಲೀಸ್ ವಾಹನದಲ್ಲಿ ಕರೆದ್ಯೊಯ್ದು ನಗರದ ಕೋರ್ಟ್ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕ್ರೀಡಾಂಗಣದಲ್ಲಿ ಬಿಡುಗೊಳಿಸಿದರು.
ಇದಕ್ಕೂ ಮುಂಚೆ ಸುದ್ದಿಗಾರರೊಂದಿಗೆ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ, ಜಿಂದಾಲ್ ಕಂಪನಿಯ ವಿರುದ್ಧ ರಾಜ್ಯವ್ಯಾಪಿ ಹೋರಾಟ, ಪ್ರತಿಭಟನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಕರ್ನಾಟಕ ಜನ ಸೈನ್ಯ ಸೇರಿದಂತೆ ನಾನಾ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿದೆ. ಬಿಜೆಪಿಯಿಂದ ಹೋರಾಟದ ನಾಟಕ ಮಾಡಿ ಎರಡ್ಮೂರು ದಿನ ಮಾತ್ರ ಪ್ರತಿಭಟನೆ ನಡೆಸಿದ್ದಾರೆ. ಈಗ ಮಾತನಾಡುತ್ತಿಲ್ಲ. ಈ ಮೈತ್ರಿಕೂಟ ಸರ್ಕಾರದ ಜೆಡಿಎಸ್, ಕಾಂಗ್ರೆಸ್ ನವರು ಧ್ವನಿ ಎತ್ತುತ್ತಿಲ್ಲ. ಜಿಂದಾಲ್ ಕಂಪನಿಗೆ ಈ ಜಿಲ್ಲೆಯನ್ನು ಮಾರಾಟ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
Body:ಜಿಂದಾಲ್ ಕಂಪನಿಗೆ ಭೂಮಿ ಪರಭಾರೆ ಮಾಡಿರೋದರ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಇಡೀ ಪ್ರಕರಣವನ್ಬು ಸಿಬಿಐಗೆ ವಹಿಸಬೇಕು. ರಾಜ್ಯ ಸರ್ಕಾರ, ಮೈಸೂರು ಮಿನರಲ್ಸ್ ಬಗ್ಗೆ ಗಮನಹರಿಸುತ್ತಿಲ್ಲ. ನಾನಾ ಕೈಗಾರಿಕಾ ಕಾರ್ಖಾನೆಗಳಿದ್ದರೂ ಕನ್ನಡಿಗರಿಗೆ ಉದ್ಯೋಗ ಅವಕಾಶ ದೊರೆಯುತ್ತಿಲ್ಲ. ಜಿಂದಾಲ್ ನ ದರೋಡೆ ವಿರೋಧಿಸಿ ಜು.06ರಂದು ತೋರಣಗಲ್ಲು ರಸ್ತೆ ಬಂದ್ ಮಾಡಲಾಗುವುದು. 15ರಂದು ತೋರಣಗಲ್ಲಿನಲ್ಲಿ ಕನ್ನಡಿಗರ ಸಮ್ಮೇಳನ ನಡೆಸಿ ಬಳ್ಳಾರಿ ಸಂಪೂರ್ಣ ಬಂದ್ ಗೆ ದಿನಾಂಕ ನಿಗದಿಪಡಿಸಲಾಗುವುದು. ಜಿಲ್ಲಾಧಿಕಾರಿ ಈ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಹೀಗಾಗಿ, ಡಿಸಿ ಕಚೇರಿ ಮುತ್ತಿಗೆ ಹಾಕಲಾಗಿದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_01_25_KANNADA_JANA_SAINY_PROTEST_7203310

KN_BLY_01a_25_VATAL_NAGARAJ_BYTE_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.