ETV Bharat / state

SC/ST ಗೆ 7.5 % ಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದವರು ಈಗ ಎಲ್ಲಿದ್ದಾರೆ: ವಿ.ಎಸ್.ಉಗ್ರಪ್ಪ - VS ugrappa statement about BJP Government

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ತಾಸುಗಳಲ್ಲಿ ಎಸ್​ಸಿ/ಎಸ್​ಟಿಯವರಿಗೆ 7.5 ರಷ್ಟು ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಹೇಳಿದ್ದರು. ಈಗ ಎಲ್ಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ವಿ.ಎಸ್​ ಉಗ್ರಪ್ಪ
author img

By

Published : Oct 26, 2019, 5:12 AM IST

ಬಳ್ಳಾರಿ : ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ತಾಸುಗಳಲ್ಲಿ ಎಸ್​ಸಿ/ಎಸ್​ಟಿಯವರಿಗೆ 7.5 ರಷ್ಟು ಮೀಸಲಾತಿ ಜಾರಿಗೆ ತರುತ್ತೇವೆ ಎಂದು ಹೇಳಿದವರು ಈಗ ಎಲ್ಲಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ವಿ.ಎಸ್.ಉಗ್ರಪ್ಪ ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಪರಿಸರ ನಾಶದಿಂದ ಅತಿವೃಷ್ಟಿ, ಅನಾವೃಷ್ಟಿ ಆಗಿದೆ. ಪ್ರವಾಹದಿಂದ 22 ಜಿಲ್ಲೆಗಳಲ್ಲಿ ಆಸ್ತಿ-ಪಾಸ್ತಿ, ಕೃಷಿ ಪ್ರದೇಶ ಹಾನಿ ಮತ್ತು ಸಾವಿರಾರು ಎಕರೆ ಬೆಳೆಗಳು ನಾಶವಾಗಿವೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರಿಗೆ ಬೆಳೆ ಹಾಳಾಗಿ ಮತ್ತು ಮನೆ ಹಾಳಾದರೆ ಅವರ ಬದುಕೇ ಬಿದ್ದು ಹೋಗಲಿದೆ. ಅದನ್ನು ನಿರ್ಮಾಣ ಮಾಡಿಕೊಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ಬಿಜೆಪಿ ಸರ್ಕಾರದ ವಿರುದ್ಧ ವಿ.ಎಸ್​ ಉಗ್ರಪ್ಪ ಕಿಡಿ

ಪ್ರಧಾನಿಗಳು ದೇಶದಲ್ಲಿ ಯಾವುದೇ ಸಮಸ್ಯೆಗಳೇ ಇಲ್ಲ ಎಂದು ಉಡಾಫೆ ಮಾತುಗಳನ್ನು ಆಡುತ್ತಾರೆ. ಕೇವಲ 1,200 ಕೋಟಿ ರೂ ಮಾತ್ರ ನೆರೆಪರಿಹಾರ ಕೊಟ್ಟಿದ್ದಾರೆ.‌ ಕೂಡಲೇ 5 ಸಾವಿರ ಕೋಟಿ ರೂ. ಹಣವನ್ನು ಸಂತ್ರಸ್ತರ ಪರಿಹಾರಕ್ಕಾಗಿ ಬಿಡುಗಡೆ ಮಾಡಬೇಕೆಂದು ಹೇಳಿದರು.

ಆರ್​ಎಸ್​ಎಸ್​ಗೆ ಟಾಂಗ್ ನೀಡಿದ ಮಾವಳ್ಳಿ ಶಂಕರ್ :

ಲಾಟಿಗಳನ್ನು ಹಿಡಿದು ಸಂವಿಧಾನದ ಬಗ್ಗೆ ವಿರೋಧ ವ್ಯಕ್ತ ಪಡಿಸುವವರು ಇದ್ದಾರೆ. ಅವರಿಗೆ ಚಡ್ಡಿ ಹೋಗಿ ಪ್ಯಾಂಟ್ ಬಂತು. ಆದರೆ, ಬುದ್ಧಿಮಾತ್ರ ಬರಲಿಲ್ಲ ಎಂದು ಮಾವಳ್ಳಿ ಶಂಕರ್ ಪರೋಕ್ಷವಾಗಿ ಆರ್​ಎಸ್​ಎಸ್​ ವಿರುದ್ಧ ಟೀಕೆ ಮಾಡಿದರು.

Intro:ಬಳ್ಳಾರಿ ಸ್ವಾಭಿಮಾನಿ ನಾಯಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 24 ತಾಸುಗಳಲ್ಲಿ ಎಸ್.ಸಿ / ಎಸ್.ಟಿ ಅವರಿಗೆ 7.5 ರಷ್ಟು ಮೀಸಲಾಗಿ ಜಾರಿಗೆ ತರುತ್ತವೆ ಎಂದು ಹೇಳಿದವರು ಎಲ್ಲಿ ಇದ್ದಾರೆ ಸ್ವಾಭಿಮಾನಿ ನಾಯಕರು ? ಎಂದು ವಿ.ಎಸ್ ಉಗ್ರಪ್ಪ ಪ್ರಶ್ನೆ ಮಾಡಿದರು.

Body:.

ನಗರದ ಜೋಳದರಾಶಿ ದೊಡ್ಡಣ್ಣಗೌಡ ರಂಗಮಂದಿರದಲ್ಲಿ ಇಂದು ನಡೆದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಮಿತಿಯಿಂದ ಸರ್ವ ಜನರ ಸಂವಿಧಾನ ಸಮಾವೇಶ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮೂಲಕ‌ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಉದ್ಘಾಟನೆಗೆ ಚಾಲನೆ ನೀಡಿದರು.

ಆರ್.ಎಸ್.ಎಸ್ ಗೆ ಟಾಂಗ್ ನೀಡಿದ ಮಾವಳ್ಳಿ ಶಂಕರ್ : -

ಲಾಟಿಗಳನ್ನು ಹಿಡಿದು ಸಂವಿಧಾನ ವಿರೋದ ವ್ಯಕ್ತ ಪಡಿಸುವವರು ಇದ್ದಾರೆ. ಅವರಿಗೆ ಚಡ್ಡಿ ಹೋಗಿ ಪ್ಯಾಂಟ್ ಬಂದ್ರು ಸಹ ಅವರಿಗೆ ಬುದ್ಧಿಮಾತ್ರ ಬರಲಿಲ್ಲ ಎಂದು ಮಾವಳ್ಳಿ ಶಂಕರ್ ವಿರೋಧ ವ್ಯಕ್ತ ಪಡಿಸಿದರು.

ತಳ ಸಮುದಾಯಗಳು ಭಾರತಕ್ಕೆ ಜಗತ್ತಿನಲ್ಲಿ ಘನತೆ ಸಿಗಲು ಕಾರಣ ಭಾರತ ಸಂವಿಧಾನ ಎಂದು ಹೇಳಿದರು. ದಲಿತ, ಅಲ್ಪಸಂಖ್ಯಾತರ ವರ್ಗಗಳು ಒಂದಾಗಿ ದೇಶದ ರಾಜಕೀಯ ಶಕ್ತಿ ಪಡೆಯುವಂತೆ ಹೇಳಕಿದ್ದರು ಆದರೆ ಈಗ ದಲಿತರು ಬಲ್ಯಾಡರ ಕೈಗೊಂಬೆಗಳಾಗಿದ್ದರು. ಶೋಷಿತ ಸಮುದಾಯಗಳನ್ನು ಸರಿಯಾದ ದಿಕ್ಕಿನಡೆಗೆ ಸಾಗಿಸಬೇಕು ಎಂದರು. ಸಂವಿಧಾನದ ಉಳಿವಿಗೆ ಎಲ್ಲರೂ ಒಗ್ಗೂಡಿ ಹೋರಾಡಬೇಕು ಎಂದು ಹೇಳಿದರು.

ವಿ.ಎಸ್ ಉಗ್ರಪ್ಪ :-

ಕೆಪಿಸಿಸಿ ವಕ್ತಾರ ವಿ.ಎಸ್ ಉಗ್ರಪ್ಪ ಅವರು ಮಾತನಾಡಿ ರಾಜ್ಯದಲ್ಲಿ ಪರಿಸರ ನಾಶದಿಂದ ಅತಿವೃಷ್ಟಿ, ಅನಾವೃಷ್ಟಿ ಆಗಿದೆ.
ಪ್ರವಾಹದಿಂದ 22 ಜಿಲ್ಲೆಗಳಲ್ಲಿ ಆಸ್ತಿ ಕೃಷಿ ಹಾನಿ ಮತ್ತು ಸಾವಿರಾರು ಎಕರೆ ನಾಶವಾಗಿದೆ ಎಂದರು.

ಈ ಸಮಯದಲ್ಲಿ ಉಳ್ಳವರು ಸಮಸ್ಯೆಗೆ ಪರಿಹಾರ ಮಾಡಿಕೊಳ್ಳಲು ವಸಾಧ್ಯವಿದೆ. ಆದ್ರೇ ಹಿಂದುಳಿದ, ದಲಿತ, ಅಲ್ಪಸಂಖ್ಯಾತರಿಗೆ ಬೆಳೆ ಹಾಳಾಗಿ ಮತ್ತು ಮನೆ ಹಾಳಾದರೆ ಅವರ ಬದುಕೇ ಬಿದ್ದು ಹೋಗಲಿದೆ. ಅದನ್ನು ನಿರ್ಮಾಣ ಮಾಡಿಕೊಡುವುದು ಸರ್ಕಾರದ ಕರ್ತವ್ಯ ವಾಗಿದೆ ಎಂದರು.

ಮೋದಿ ವಿದೇಶಗಳಲ್ಲಿ ಪ್ರಚಾರ ಪಡೆಯುವುದು ಮುಖ್ಯವಲ್ಲ. ಸರ್ವರಿಗೂ ಸಮಪಾಲಿ, ಸಮಬಾಳು, ಎಂದು ಜಾತಿ ರಹಿತ ಸಮ ಸಮಾಜವನ್ನು ನಿರ್ಮಾಣಕ್ಕಾಗಿ ಸಂವಿಧಾನ ಡಾ.ಬಿ ಆರ್ ಅಂಬೇಡ್ಕರ್ ರಚಿಸಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ಕೇವಲ ಒಂದು ಜಾತಿ ಮಾತ್ರ‌ ಸಿಮೀತವಾಗಿಲ್ಲ. ಜಾತಿಗೊಂದು ಬಣ್ಣ ರಕ್ತವಿಲ್ಲ. ಎಲ್ಲರಿಗೂ ಒಂದೇ ಬಣ್ಣದ ರಕ್ತವಿದೆ ಎಂದು ಹೇಳಿದರು. ನಾವೆಲ್ಲರೂ ಅಂಬೇಡ್ಕರ್ ಕುಟುಂಬದವರು ಎಂದು ಮೈಗೂಡಿಸಿಕೊಳ್ಳಲು ಸಾಧ್ಯವಿಲ್ಲವೋ ಅಲ್ಲ ಇವರು ಸಮಾನತೆ ಸಾಧ್ಯವಿಲ್ಲ.

ಬಿಜೆಪಿ ಅಧಿಕಾರಕ್ಕೆ ಬಂದರೆ 24 ಗಂಟೆ ಒಳಗೆ ಶರ
7.5 ಮೀಸಲಾತಿ‌ ಕೊಡಿಸುವುದಾಗಿ ಹೇಳಿದ್ದರು. ಬಳ್ಳಾರಿ ಸ್ವಾಭಿಮಾನಿ ನಾಯಕ ಎಲ್ಲಿ ಇದ್ದಾರೆ ಎಂದಿ ವ್ಯಂಗ್ಯವಾಡಿದರು.

ರಾಜ್ಯದಲ್ಲಿ ಪ್ರವಾಹ ಇದೆ. ಪ್ರಧಾನಿಗಳು ದೇಶದಲ್ಲಿ ಯಾವುದೇ ಸಮಸ್ಯೆಗಳೇ ಇಲ್ಲ ಎಂದು ಉಡಾಫೆ ಮಾತುಗಳನ್ನು ಆಡುತ್ತಾರೆ ಎಂದು ದೂರಿದರು.
ಈ ಪ್ರವಾಹಕ್ಕೆ ಕೇವಲ 1200 ಕೋಟಿ ಬಿಕ್ಷೆ ತರ ಕೊಟ್ಟಿದ್ದಾರೆ.‌ ಕೂಡಲೇ 5 ಸಾವಿರ ಕೋಟಿ ಸಂತ್ರಸ್ತರಿಗೆ ಬಿಡುಗಡೆ ಮಾಡಬೇಕೆಂದು ಹೇಳಿದರು. ನಾವು ಸಹ ಈ ದೇಶದ ಭಾಗವಾಗಿದ್ದು, ತೆರಿಗೆ ಪಾವತಿಸುತ್ತಿದ್ದೆವೆ ಎಂದು ಹೇಳಿದರು.

Conclusion:ಈ ಕಾರ್ಯಕ್ರಮದಲ್ಲಿ ಮಾವಳ್ಳಿ ಶಂಕರ್, ಪಂಪಾಪತಿ, ದುರ್ಗಪ್ಪ ತಳವಾರ ಮತ್ತು ನೂರಾರು ದಲಿತ ಪರ ಸಂಘಟನೆ ಸದಸ್ಯರು ಭಾಗವಹಿಸಿದ್ದರು. ‌
ETV Bharat Logo

Copyright © 2025 Ushodaya Enterprises Pvt. Ltd., All Rights Reserved.