ETV Bharat / state

'ನೀವು ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂಬ ಆರೋಪವೇನಾದ್ರೂ ಸಾಬೀತಾದರೆ ನಾನು ನಿಮ್ಮ ಮನೆಯ ಆಳಾಗಿ ದುಡಿಯುವೆ'

author img

By

Published : Nov 24, 2020, 3:32 PM IST

ಸಿಎಂ ಬಿಎಸ್​​ವೈ - ಪುತ್ರ ವಿಜಯೇಂದ್ರ ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ನಿಮಗೇನಾದ್ರೂ ತಾಕತ್ತಿದ್ದರೆ ನ್ಯಾಯಾಂಗ ತನಿಖೆಗೆ ಎದುರಿಸಿ. ನೀವು ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂಬ ಆರೋಪವೇನಾದ್ರೂ ಸಾಬೀತಾದರೆ ನಾನು ನಿಮ್ಮ ಮನೆಯ ಆಳಾಗಿ ದುಡಿಯುವೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.

VS Ugrappa alleagtion on CM BSY and Vijayendra
ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ಬಳ್ಳಾರಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರು ಭಾರೀ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಅವರಿಗೇನಾದ್ರೂ ತಾಕತ್ತಿದ್ದರೆ ನ್ಯಾಯಾಂಗ ತನಿಖೆ ಎದುರಿಸಲಿ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲೆಸೆದಿದ್ದಾರೆ.

ಇದನ್ನೂ ಓದಿ : ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಜನ ರಾಜ್ಯ ಸರ್ಕಾರಕ್ಕೆ ತಕ್ಕ ಉತ್ತರ ನೀಡ್ತಾರೆ : ಉಗ್ರಪ್ಪ

ಬಳ್ಳಾರಿಯ ಕಂಟೋನ್ಮೆಂಟ್ ಏರಿಯಾದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಚೆಕ್ ಮೂಲಕ ಲಂಚ ಪಡೆದ ಆರೋಪವನ್ನ ಸಿಎಂ ಬಿಎಸ್​ವೈ ಎದುರಿಸಿದ್ದರು. ಈಗ ಆರ್​ಟಿಜಿಎಸ್ ಮೂಲಕ ಹಣ ಪಡೆದಿರುವ ದಾಖಲೆಗಳಿವೆ. ನಿಮಗೇನಾದ್ರೂ ಯೋಗ್ಯತೆ ಇದ್ದರೆ ನ್ಯಾಯಾಂಗ ತನಿಖೆ ಎದುರಿಸಲು ಸಿದ್ಧರಾಗಿ. ಅಲ್ಲಿ ನೀವು ಭ್ರಷ್ಟಾಚಾರದಲ್ಲಿ ತೊಡಗಿಲ್ಲ ಎಂಬ ಆರೋಪವೇನಾದ್ರೂ ಸಾಬೀತಾದರೆ ನಾನು ನಿಮ್ಮ ಮನೆಯ ಆಳಾಗಿ ದುಡಿಯುವೆ ಎಂದು ಸವಾಲೆಸೆದಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪನವರಿಗೆ ವಯಸ್ಸಾಗಿದೆ, ಅರಳು-ಮರಳು : ಉಗ್ರಪ್ಪ ವ್ಯಂಗ್ಯ

ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಮೇಲಾಗಿ, ಅವರು ಯುವಕರಿದ್ದಾರೆ. ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡೋವಾಗ ನಾಲಗೆ ಬಿಗಿಹಿಡಿದು‌ ಮಾತನಾಡಬೇಕು. 150 ವರ್ಷದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡುವ ಹಕ್ಕು ನಿಮಗೇನಿದೆ ಹೇಳಿ ಎಂದು ಉಗ್ರಪ್ಪ ಪ್ರಶ್ನಿಸಿದ್ದಾರೆ.

ಮಾಜಿ ಸಂಸದ ವಿ.ಎಸ್.ಉಗ್ರಪ್ಪ

ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್, ಜಿಲ್ಲಾ ಕಾಂಗ್ರೆಸ್ ಸಮಿತಿ (ನಗರ) ಅಧ್ಯಕ್ಷ ಜಿ.ಎಸ್. ಮಹಮ್ಮದ ರಫೀಕ್, ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಹನುಮ ಕಿಶೋರ, ಮುಖಂಡರಾದ ವೆಂಕಟೇಶ ಹೆಗಡೆ, ಅಸುಂಡಿ ನಾಗರಾಜಗೌಡ, ಹುಮಾಯೂನ್ ಖಾನ್, ವಿವೇಕ ಇದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.