ETV Bharat / state

ಬಳ್ಳಾರಿಯಲ್ಲಿ ವೈರಲ್ ಫೀವರ್ ಭೀತಿ: ಫುಟ್​ಪಾತ್​ನಲ್ಲಿ ಮಕ್ಕಳ ಮಲಗಿಸಿ ಚಿಕಿತ್ಸೆಗೆ ಕಾಯುವ ಪೋಷಕರು - ಜಿಲ್ಲಾಸ್ಪತ್ರೆಯಲ್ಲಿ ಬೆಡ್​ ಸಮಸ್ಯೆ

ಬಳ್ಳಾರಿ ಜಿಲ್ಲೆಯಲ್ಲಿ ವೈರಲ್​ ಫೀವರ್​ ಹೆಚ್ಚಳವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬೆಡ್​ ಸಿಗದೆ ರೋಗಿಗಳು ಸಂಕಷ್ಟ ಪಡುವ ಪರಿಸ್ಥಿತಿ ತಲೆದೋರಿದೆ.

Viral fever increased in Bellary district
ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಫುಟ್​ಪಾತ್​ನಲ್ಲೆ ಮಲಗಿದ ಮಕ್ಕಳು
author img

By

Published : Sep 16, 2021, 7:54 PM IST

Updated : Sep 16, 2021, 8:53 PM IST

ಬಳ್ಳಾರಿ: ಜಿಲ್ಲೆಯಲ್ಲಿ ವೈರಲ್ ಫೀವರ್ ಹೆಚ್ಚಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಸಿಗದೆ ರೋಗಿಗಳು ಪರದಾಡುವ ಸ್ಥಿತಿ ಇದೆ.

ಕಳೆದ 20 ದಿನಗಳಿಂದ ಜಿಲ್ಲೆಯಲ್ಲಿ ವೈರಲ್ ಇನ್ಫೆಕ್ಷನ್​​​​ನಿಂದ ಹೆಚ್ಚಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಬೆಡ್​ಗಳು ತುಂಬಿ ಹೋಗಿದ್ದು, ಮಕ್ಕಳಿಗೆ ಚಿಕಿತ್ಸೆ ಕೊಡಿಸಲು ಪೋಷಕರು ಆಸ್ಪತ್ರೆ ಆವರಣದಲ್ಲೇ ಕುಳಿತಿದ್ದಾರೆ. ವೈರಲ್ ಫೀವರ್ ಮನೆ ಮನೆಗೂ ವ್ಯಾಪಿಸುತ್ತಿದ್ದು, ಮಕ್ಕಳಲ್ಲಿ ಕಫಾ, ಉಸಿರಾಟ ತೊಂದರೆ ಕಾಣಿಸಿಕೊಳ್ಳುತ್ತಿದೆ.

ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆ ಫುಟ್​ಪಾತ್​ನಲ್ಲಿ ಕಾಯುತ್ತಿರುವ ಜನರು

ಈ ಕುರಿತು ಈಟಿವಿ ಭಾರತದೊಂದಿಗೆ ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ಧನ್ ಮಾತನಾಡಿ, 'ಸಾಮಾನ್ಯವಾಗಿ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿನಲ್ಲಿ ಜ್ವರ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.‌ ವಿಮ್ಸ್​​​​ನಲ್ಲಿ 250 ಬೆಡ್​ಗಳ ಸೌಕರ್ಯವಿದೆ. ಜಿಲ್ಲಾಸ್ಪತ್ರೆ ಆವರಣದಲ್ಲಿ ಮಕ್ಕಳನ್ನು ಮಲಗಿಸಿರುವುದು ಬೆಡ್ ಸಮಸ್ಯೆಯಿಂದ ಅಲ್ಲ' ಎಂದರು.

ಈಗಾಗಲೇ ಜಿಲ್ಲಾಧಿಕಾರಿ ಜೊತೆ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಮಕ್ಕಳಿಗೆ ವಿಮ್ಸ್​ನಲ್ಲಿ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಪಾಲಕರು ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಹಂತಹಂತವಾಗಿ ಶಿಕ್ಷಕರ ನೇಮಕಾತಿ: ಸಚಿವ ಮಾಧುಸ್ವಾಮಿ ಭರವಸೆ

Last Updated : Sep 16, 2021, 8:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.