ETV Bharat / state

ವೈದ್ಯಕೀಯ ಶಿಕ್ಷಣ ಸಚಿವರ ಭೇಟಿಗೆ ಅವಕಾಶ ನಿರಾಕರಣೆ: ವಿಮ್ಸ್ ಆಸ್ಪತ್ರೆ ಹೊರಗುತ್ತಿಗೆ ನೌಕರರ ಆಕ್ರೋಶ! - ಬಳ್ಳಾರಿಯ ವಿಮ್ಸ್ ಆಸ್ಪತ್ರೆ

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರನ್ನ ಭೇಟಿಯಾಗಲು ಹೊರಗುತ್ತಿಗೆ ನೌಕರರು ಯತ್ನಿಸಿದಾಗ ಆಸ್ಪತ್ರೆ ಸಿಬ್ಬಂದಿ ಹಾಗೂ ಸಚಿವರ ಅಂಗರಕ್ಷಕರು ತಡೆ ಹಿಡಿದ್ರು. ಅದಕ್ಕೆ ಕುಪಿತಗೊಂಡ ಹೊರಗುತ್ತಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

protest
protest
author img

By

Published : Jun 13, 2020, 11:55 AM IST

Updated : Jun 13, 2020, 12:05 PM IST

ಬಳ್ಳಾರಿ: ಸಕಾಲದಲ್ಲಿ ವೇತನ ನೀಡದಿರುವ ಹಾಗೂ ಎಗ್ಗಿಲ್ಲದೇ ವೇತನ ಕಡಿತಗೊಳಿಸುತ್ತಿರುವ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಅಲ್ಲಿನ ಸಿಬ್ಬಂದಿ ಸಿಡಿದೆದ್ದಿದ್ದಾರೆ. ಇನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್​​​​ ಅವರಿಗೆ ದೂರು ನೀಡಲು ಹೋಗಿದ್ದ ಹೊರಗುತ್ತಿಗೆ ಕಾರ್ಮಿಕರನ್ನ ಆಸ್ಪತ್ರೆಯ ಸಿಬ್ಬಂದಿ ತಡೆದ ಘಟನೆಯೊಂದು ನಡೆದಿದ್ದು, ಇದರಿಂದ ಹೊರಗುತ್ತಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ ಅವರನ್ನ ಭೇಟಿಯಾಗಲು ಹೊರಗುತ್ತಿಗೆ ನೌಕರರು ಯತ್ನಿಸಿದಾಗ ಆಸ್ಪತ್ರೆ ಸಿಬ್ಬಂದಿ ಹಾಗೂ ಸಚಿವರ ಅಂಗರಕ್ಷಕರು ತಡೆಹಿಡಿದ್ರು.

ವಿಮ್ಸ್ ಆಸ್ಪತ್ರೆ ಹೊರಗುತ್ತಿಗೆ ನೌಕರರ ಆಕ್ರೋಶ

ಅದಕ್ಕೆ ಕುಪಿತಗೊಂಡ ಹೊರಗುತ್ತಿಗೆ ನೌಕರರು ತಮ್ಮ ಅಕ್ರೋಶವನ್ನ ಈ ರೀತಿಯಾಗಿ ವ್ಯಕ್ತಪಡಿಸಿದ್ದಾರೆ.‌ ಕೊರೊನಾ ವಾರಿಯರ್ಸ್ ಸೇವೆಗೆ ನಾವು ಬೇಕು. ನಮ್ಮ ನ್ಯಾಯಯುತ ಬೇಡಿಕೆಗಳನ್ನ ಈಡೇರಿಸುವಂತೆ ಕೋರಿ ಸಚಿವರ ಎದುರು ತೋಡಿಕೊಳ್ಳಲು ಏತಕ್ಕೆ ಬೇಡ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹಾಜರಾಗದಿದ್ದರೆ ವೈದ್ಯರು ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ಆದರೆ, ರಾಜ್ಯ ಸರ್ಕಾರದ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳಲು ಯಾಕೆ ಬಿಡುತ್ತಿಲ್ಲ ಎಂದು ಆಕ್ರೋಶಭರಿತರಾದರು.

ಪ್ರತಿ ತಿಂಗಳು ಮಾಸಿಕ ವೇತನವು ಅಂದಾಜು 13,800 ರೂ. ನಿಗದಿಪಡಿಸಲಾಗಿದೆಯಾದ್ರೂ ಕೇವಲ 9000 ರೂ.ಗಳನ್ನ ಮಾತ್ರ ನಮಗೆ ಪಾವತಿ ಮಾಡಲಾಗುತ್ತೆ. ಅಲ್ಲದೇ, ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಕಡ್ಡಾಯ ಗೈರು ಹಾಜರಿ‌ ತೋರಿಸಲಾಗುತ್ತೆ. ಲಾಕ್ ಡೌನ್ ಸಮಯದಲ್ಲಿ ನಮ್ಮನ್ನ ಬಿಡುವಿಲ್ಲದೇ ದುಡಿಸಿಕೊಳ್ಳಲಾಗುತ್ತದೆ. ಆದರೆ, ಸಕಾಲದಲ್ಲಿ ವೇತನ ನೀಡಬೇಕೆಂಬ ಬೇಡಿಕೆ ಮಾತ್ರ ಈಡೇರುತ್ತಿಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

Last Updated : Jun 13, 2020, 12:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.