ETV Bharat / state

ವಿಜಯನಗರ ಪೊಲೀಸ್ ವರ್ಗಾವಣೆ ಪ್ರಕ್ರಿಯೆ ಬಹುತೇಕ ಪೂರ್ಣ - ವಿಜಯನಗರ ಪೊಲೀಸ್ ಇಲಾಖೆ

ಕಾನ್ಸ್​ಟೇಬಲ್, ಹೆಡ್ ಕಾನ್ಸ್​ಟೇಬಲ್ ಹಾಗೂ ಎಎಸ್​ಐ ಸೇರಿದಂತೆ ಒಟ್ಟು 800ಕ್ಕೂ ಹೆಚ್ಚು ಸಿಬ್ಬಂದಿಯನ್ನು ಈಗಾಗಲೇ ಜಿಲ್ಲೆಯ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ.

sp dr arun k
ಎಸ್ಪಿ ಡಾ. ಅರುಣ್ ಕೆ
author img

By

Published : Jun 22, 2022, 5:27 PM IST

ವಿಜಯನಗರ: ವಿಜಯನಗರ ಎಸ್ಪಿ ಡಾ. ಅರುಣ್ ಕೆ ಅವರು ಪೊಲೀಸ್ ಇಲಾಖೆ ಕೆಲಸ ಕಾರ್ಯಕ್ಕೆ ಮತ್ತಷ್ಟು ವೇಗ ನೀಡಲು ವರ್ಗಾವಣೆ ಅಸ್ತ್ರ ಬಳಸಿದ್ದಾರೆ. ಕಾನ್ಸ್​ಟೇಬಲ್, ಹೆಡ್ ಕಾನ್ಸ್​ಟೇಬಲ್ ಹಾಗೂ ಎಎಸ್​ಐ ಸೇರಿದಂತೆ ಒಟ್ಟು 800ಕ್ಕೂ ಹೆಚ್ಚು ಸಿಬ್ಬಂದಿಯನ್ನು ಈಗಾಗಲೇ ಜಿಲ್ಲೆಯ ಬೇರೆ ಬೇರೆ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಕೆಲವರು ಹೊಸ ಸ್ಥಳಕ್ಕೆ ಇನ್ನಷ್ಟೇ ಹೋಗಬೇಕಿದೆ. ಶೇ.90ಕ್ಕೂ ಹೆಚ್ಚು ಸಿಬ್ಬಂದಿಯ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ಎಸ್ಪಿ ಆದೇಶದ ಹಿನ್ನೆಲೆಯಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಸ್ವಂತ ಊರು ಅಥವಾ ಹತ್ತಿರದ ಠಾಣೆಗೆ ಪೋಸ್ಟಿಂಗ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಎಸ್ಪಿ, "ಪೊಲೀಸ್ ಇಲಾಖೆ ಪ್ರಕಾರ ಐದು ವರ್ಷಕ್ಕೆ ಸಿಬ್ಬಂದಿಯನ್ನು ಬದಲಾವಣೆ ಮಾಡುವ ನಿಯಮವಿದೆ. ಹೀಗಾಗಿ ವರ್ಗಾವಣೆಗೊಳಿಸಲಾಗಿದೆ. ಯಾರಿಗಾದರು ಅಸಮಾಧಾನ ಇದ್ದರೆ ಮುಂದಿನ ಕೌನ್ಸಿಲಿಂಗ್​ನಲ್ಲಿ ಮಾನ್ಯತೆ ನೀಡಲಾಗುವುದು" ಎಂದು ಹೇಳಿದ್ದಾರೆ.

ಇದನ್ನೂ ಓದಿ: ಯೋಗ ದಿನ, ಪ್ರಧಾನಿ ಸ್ವಾಗತದ ಫಲಕಗಳು ಸೇರಿ ಅಕ್ರಮ ಬ್ಯಾನರ್​ಗಳ ತೆರವು: ಬಿಬಿಎಂಪಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.