ವಿಜಯನಗರ: ಕಂಪ್ಲಿ ಮತ್ತು ಹೊಸಪೇಟೆ ತಾಲೂಕಿನ 22 ಗ್ರಾಮ ಪಂಚಾಯಿತಿಗಳು ಕಳೆದ ಹಲವು ತಿಂಗಳುಗಳಿಂದ ವಿದ್ಯುತ್ ಬಿಲ್ ಕಟ್ಟದೆ ಬಾಕಿ ಉಳಿಸಿಕೊಂಡಿವೆ. ಕುಡಿಯುವ ನೀರಿನ ಮೋಟಾರು ಹಾಗೂ ಬೀದಿದೀಪಕ್ಕೆ ಬಳಸಿದ ವಿದ್ಯುತ್ ಬಿಲ್ ಬಾಕಿ ಇದಾಗಿದೆ. ಬಿಲ್ ಕಟ್ಟಿ ಎಂದು ಹೇಳುತ್ತಾ ಜೆಸ್ಕಾಂ ಸಿಬ್ಬಂದಿ ಗ್ರಾಮ ಪಂಚಾಯಿತಿಗಳಿಗೆ ಅಲೆದಲೆದು ಸಾಕಾಗಿದ್ದಾರೆ. ಆದ್ರೂ ಹಣ ಪಾವತಿಸದೇ ಗ್ರಾಮ ಪಂಚಾಯಿತಿಗಳು ಸತಾಯಿಸುತ್ತಿವೆ.
ಹೊಸಪೇಟೆ ತಾಲೂಕಿನ ಡಣಾಪುರ ಪಂಚಾಯಿತಿ- 6 ಕೋಟಿ 41 ಲಕ್ಷ ರೂ, ಡಣಾಯಕನಕೆರೆ ಪಂಚಾಯಿತಿ- 2 ಕೋಟಿ 74 ಲಕ್ಷ, ಚಿಲಕನಹಟ್ಟಿ ಪಂಚಾಯಿತಿ 3 ಕೋಟಿ 24 ಲಕ್ಷ, ನಾಗಲಾಪುರ 3 ಕೋಟಿ 18 ಲಕ್ಷ, ಬೈಲುವದ್ದಿಗೇರಿ 2 ಕೋಟಿ 21 ಲಕ್ಷ ಹೀಗೆ ಇತರೆ ಗ್ರಾಮ ಪಂಚಾಯಿತಿಗಳು ಬಾಕಿ ಉಳಿಸಿಕೊಂಡಿವೆ.
ಬಾಕಿ ವಸೂಲಾತಿಗೆ ಜೆಸ್ಕಾಂ ಸಿಬ್ಬಂದಿ ಪರದಾಡುತ್ತಿದ್ದು, ಬಿಲ್ ಕಟ್ಟಿ ಅಂತ ಪತ್ರ ವ್ಯವಹಾರವನ್ನೂ ಸಹ ಮಾಡಲಾಗಿದೆ. ಹಂತ ಹಂತವಾಗಿ ಕಟ್ಟುತ್ತೇವೆ ಎಂದು ಹೇಳಿ ಮೂಗಿಗೆ ತುಪ್ಪ ಸವರೋ ಕೆಲಸವನ್ನು ಸ್ಥಳೀಯ ಆಡಳಿತಗಳು ಮಾಡುತ್ತಿದೆ. ಜೆಸ್ಕಾಂಗೆ ಕಟ್ಟಬೇಕಾದ ಬಾಕಿ ಕಟ್ಟದೇ ಇದ್ರೆ, ಸ್ಥಾವರಗಳನ್ನು ಬಂದ್ ಮಾಡಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ಸಹ ಜೆಸ್ಕಾಂ ಅಧಿಕಾರಿಗಳು ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರು: ಕಲುಷಿತ ನೀರು ಸೇವಿಸಿ ಮತ್ತೋರ್ವ ಬಲಿ?