ETV Bharat / state

ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ, ಬಲವಂತದ ಅಂಗಡಿ-ಮುಂಗಟ್ಟು ಮುಚ್ಚದಿರಲು ನಿರ್ಧಾರ..

ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ಆಚರಿಸಲು ನಿರ್ಧರಿಸಲಾಗಿದ್ದು, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ಸಂಘಟನೆಗಳು ಮುಂದಾಗಿವೆ.

bellary band Meeting News
ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ
author img

By

Published : Nov 24, 2020, 7:58 PM IST

ಬಳ್ಳಾರಿ: ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ಇದೇ 26 ರಂದು ನಡೆಸಲು ಉದ್ದೇಶಿಸಿರುವ ಬಳ್ಳಾರಿ ಜಿಲ್ಲೆ ಬಂದ್, ಶಾಂತಿಯುತವಾಗಿ ಆಚರಿಸಲು ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ನಿರ್ಧರಿಸಿದ್ದು, ಬಲವಂತದ ಅಂಗಡಿ-ಮುಂಗಟ್ಟುಗಳ ಮುಚ್ಚದಿರಲು ಇಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ.

ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ

ಬಳ್ಳಾರಿಯ ಗಾಂಧಿ ಭವನದಲ್ಲಿಂದು ನಡೆದ ಸಭೆಯಲ್ಲಿ ಈ ನಿರ್ಧಾರವನ್ನ ತೆಗೆದುಕೊಂಡಿದ್ದು, ಜಿಲ್ಲೆಯ ನಾನಾ ಸಂಘಟನೆಗಳು ವಿಭಿನ್ನ ರೀತಿಯ ಅಭಿಪ್ರಾಯಗಳನ್ನ ವ್ಯಕ್ತಪಡಿಸಿವೆ. ಆ ದಿನ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಬಂದ್ ಆಚರಿಸಲು ನಿರ್ಧರಿಸಲಾಗಿದ್ದು, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ಜನಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ಸಂಘಟನೆಗಳು ಮುಂದಾಗಿವೆ.

bellary band Meeting News
ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ

ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ವಿಎಸ್ ಉಗ್ರಪ್ಪ, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಸೇರಿದಂತೆ ತುಂಗಭದ್ರಾ ರೈತ ಸಂಘ, ಕರವೇ, ಜೆಡಿಎಸ್ ಹಾಗೂ ದಲಿತಪರ ಮತ್ತು ಕನ್ನಡಪರ ಸಂಘಟನೆಗಳು ಕೂಡ ಈ ಸಭೆಯಲ್ಲಿ ಪಾಲ್ಗೊಂಡು ಶಾಂತಿಯುತ ಬಂದ್ ಆಚರಣೆಗೆ ಬೆಂಬಲ ಸೂಚಿಸಿವೆ.

bellary band Meeting News
ನವೆಂಬರ್ 26 ಬಳ್ಳಾರಿ ಬಂದ್ ಶಾಂತಿಯುತ

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ ಅವರು, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಮಾಡೋದನ್ನ ಖಂಡಿಸಿ ನವೆಂಬರ್ 26 ರಂದು ಶಾಂತಿಯುತ ಬಂದ್ ಕರೆ ನೀಡಲಾಗಿದೆ ಎಂದರು.

ಇದನ್ನು ಓದಿ: ಬಳ್ಳಾರಿ ಜಿಲ್ಲೆ ವಿಭಜನೆಗೆ ಅಪಸ್ವರ: ಸಿಎಂ ಭೇಟಿಯಾದ ಸಚಿವ ಆನಂದ್ ಸಿಂಗ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.